ದಾವಣಗೆರೆ: ಜಿಲ್ಲೆಯಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾದಂತೆ ನಾನ್ ಕೋವಿಡ್ ರೋಗಿಗಳಿಗೆ ಚಿಕಿತ್ಸೆಯೇ ಸಿಗುತ್ತಿಲ್ಲ. ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಿದ ಹಿನ್ನೆಲೆ ಖಾಸಗಿ ಆಸ್ಪತ್ರೆಗಳಿಗೆ ಫುಲ್ ಡಿಮ್ಯಾಂಡ್ ಬಂದಿದ್ದು, ಕೋವಿಡ್ ಇರಲಿ, ನಾನ್ ಕೋವಿಡ್ ರೋಗಿಗಳಿಗೆ ಬೆಡ್ ಹಾಗೂ ಚಿಕಿತ್ಸೆಯೇ ಸಿಗುತ್ತಿಲ್ಲ.
Advertisement
ದಾವಣಗೆರೆ ಜಿಲ್ಲೆಯ ಕೋಡಿ ಹಳ್ಳಿ ಗ್ರಾಮದ ಹಾಲಪ್ಪ ಎಂಬವರಿಗೆ ಅಸ್ತಮಾ ಇದ್ದು ಉಸಿರಾಟದ ತೊಂದರೆಯಾಗಿತ್ತು. ಹೀಗಾಗಿ ಬೆಳಗ್ಗೆಯೇ ಕುಟುಂಬಸ್ಥರು ಅಂಬುಲೆನ್ಸ್ ಮೂಲಕ ದಾವಣಗೆರೆಗೆ ಕರೆತಂದು ನಗರದಲ್ಲಿ ಇರುವ ಖಾಸಗಿ ಆಸ್ಪತ್ರೆಗಳನ್ನು ಸುತ್ತಿದರೂ. ಚಿಕಿತ್ಸೆ ಸಿಕ್ಕಿಲ್ಲ. ಎಲ್ಲಾ ಕಡೆ ಕೂಡ ಬೆಡ್ ಇಲ್ಲ ಎನ್ನುವ ಉತ್ತರ ಬಂದಿದ್ದು, ದಾವಣಗೆರೆಯ ಪ್ರತಿಯೊಂದು ಆಸ್ಪತ್ರೆಗಳಲ್ಲಿ ಕೂಡ ಬೆಡ್ ಇಲ್ಲ ಎಂದಿದ್ದಾರೆ. ತೀವ್ರವಾಗಿ ಆಸ್ವಸ್ಥಗೊಂಡಿದ್ದ ಹಾಲಪ್ಪ ಕೊನೆಗೆ ಉಸಿರಾಟದ ತೊಂದರೆ ಹೆಚ್ಚಾಗಿ ಅಂಬುಲೆನ್ಸ್ ನಲ್ಲೇ ಸಾವನ್ನಪ್ಪಿದ್ದಾರೆ.
Advertisement
Advertisement
ಸರಿಯಾದ ಸಮಯಕ್ಕೆ ವೆಂಟಿಲೇಟರ್ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಕ್ಕಿದ್ದರೆ ಹಾಲಪ್ಪ ಬದುಕುತ್ತಿದ್ದರು. ಬೆಳಗ್ಗೆಯಿಂದಲೂ ಆಸ್ಪತ್ರೆಗಳನ್ನು ಅಲೆದಾಡಿದರೂ ಎಲ್ಲಿಯೂ ಕೂಡ ಬೆಡ್ ಇಲ್ಲ ಎಂದು ವಾಪಸ್ ಕಳುಹಿಸಿದ್ದಾರೆ ಎಂದು ಸಂಬಂಧಿಕರು ಖಾಸಗಿ ಆಸ್ಪತ್ರೆಗಳ ವಿರುದ್ಧ ಕಿಡಿಕಾರಿದರು. ಜಿಲ್ಲಾಧಿಕಾರಿಗಳು ಮಾತ್ರ ಚಿಕಿತ್ಸೆ ನಿರಾಕರಿಸಿದವರಿಗೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ.
Advertisement
ಒಟ್ಟಿನಲ್ಲಿ ಪ್ರತಿನಿತ್ಯ ಕೂಡ ಇದೇ ರೀತಿಯಾದ ತೊಂದರೆಯಾಗುತ್ತಿದ್ದು, ಕೋವಿಡ್ ರೋಗಿಗಳಿಗಿಂತ ನಾನ್ ಕೋವಿಡ್ ರೋಗಿಗಳೇ ಹೆಚ್ವು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.