– ಇದುವರೆಗೂ 15ಕ್ಕೂ ಹೆಚ್ಚು ಮಂದಿಗೆ ಕೊರೊನಾ
ಬೆಂಗಳೂರು: ಲಾಕ್ಡೌನ್ ಸಡಿಲಿಕೆ ಇದೆ. ಊರಿಗೆ ಹೋಗೋಣ, ಪ್ರವಾಸ ಹೋಗೋಣ ಅಂತ ಬೇರೆ ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಪ್ರಯಾಣ ಮಾಡುವುದಕ್ಕೂ ಮುನ್ನ ಎಚ್ಚರವಾಗಿರಿ. ಯಾಕೆಂದರೆ ಅಂತರ್ ಜಿಲ್ಲಾ ಪ್ರಯಾಣ ಮಾಡಿದವರಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ.
ಅಂತರ್ ಜಿಲ್ಲೆ ಪ್ರಯಾಣ ಮಾಡಿದ 15ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಸೋಂಕಿನ ಲಕ್ಷಣ ಇಲ್ಲದೇ ಇದ್ದವರಿಗೂ ಕೊರೊನಾ ಹಬ್ಬುತ್ತಾ ಇದೆ. ಆದರೆ ಈಗ ಅಂತರ್ ಜಿಲ್ಲಾ ಪ್ರಯಾಣ ಮಾಡಿದವರಲ್ಲೂ ಸೋಂಕು ಹಬ್ಬುತ್ತಾ ಇದೆ.
Advertisement
Advertisement
ಅಂತರ್ ಜಿಲ್ಲಾ ಪ್ರಯಾಣ ಮಾಡಿದ ಮಹಿಳೆಯರಿಗೂ, ವೃದ್ಧರಿಗೂ, ಕೊರೊನಾ ಅಟ್ಯಾಕ್ ಆಗಿದೆ. ಆದ್ದರಿಂದ ಅಂತರ್ ಜಿಲ್ಲಾ ಪ್ರಯಾಣ ಮಾಡುವುದು ಕಡಿಮೆ ಮಾಡಿದರೆ ಒಳ್ಳೆಯದು. ಯಾಕೆಂದರೆ ರಾಜ್ಯದ ಬಹುತೇಕ ಜಿಲ್ಲೆಗಳು ಕಂಟೈನ್ಮೆಂಟ್ ಝೋನ್ ಆಗಿವೆ. ಸೋಂಕಿತ ವ್ಯಕ್ತಿಗಳು, ಕ್ವಾರಂಟೈನ್ ಮಾಡಿರುವುದರಿಂದ ಯಾವ ಪ್ರದೇಶದಲ್ಲಿ ಜನ ಓಡಾಡಿರುತ್ತಾರೋ ಗೊತ್ತಿಲ್ಲ. ಹೀಗಾಗಿ ಅಲ್ಲಿ ಓಡಾಡಿದವರಿಗೆ ಕೊರೊನಾ ಬರುವ ಸಾಧ್ಯತೆ ಇದೆ.
Advertisement
ಇದುವರೆಗೂ ಅಂತರ ಜಿಲ್ಲಾ ಪ್ರಯಾಣ ಮಾಡಿದ 10ಕ್ಕೂ ಹೆಚ್ಚು ಜನರಿಗೆ ಸೋಂಕು ಹಬ್ಬಿದೆ. ಅಂತರ್ ರಾಜ್ಯ ಜಿಲ್ಲಾ ಪ್ರಯಾಣ ಮಾಡಿ ಸೋಂಕು ತಗುಲಿರುವವರ ವಿವರ ನೋಡೋದಾದರೆ…
Advertisement
1. ರೋಗಿ ನಂ: 6851
ಮಂಡ್ಯದ 65 ವರ್ಷದ ವೃದ್ಧ
ಅಂತರಜಿಲ್ಲಾ ಪ್ರಯಾಣ: ಬೆಂಗಳೂರು ಟು ಮಂಡ್ಯ
2. ರೋಗಿ ನಂ: 6858
ಶಿವಮೊಗ್ಗದ 26 ವರ್ಷದ ಮಹಿಳೆ
ಅಂತರಜಿಲ್ಲಾ ಪ್ರಯಾಣ: ಬೆಂಗಳೂರು ಟು ಶಿವಮೊಗ್ಗ
3. ರೋಗಿ ನಂ: 6862
ಬೆಂಗಳೂರಿನ 36 ವರ್ಷದ ಪುರುಷ
ಅಂತರಜಿಲ್ಲಾ ಪ್ರಯಾಣ: ಮೈಸೂರು ಟು ಬೆಂಗಳೂರು
4. ರೋಗಿ ನಂ: 6894
ಬೆಂಗಳೂರಿನ 67 ವರ್ಷದ ವೃದ್ಧ
ಅಂತರಜಿಲ್ಲಾ ಪ್ರಯಾಣ: ಮೈಸೂರು ಟು ಬೆಂಗಳೂರು
5. ರೋಗಿ ನಂ: 6561 (13ನೇ ತಾರೀಖಿನದು)
ಬೆಂಗಳೂರಿನ 20 ವರ್ಷದ ಯುವಕ
ಅಂತರಜಿಲ್ಲಾ ಪ್ರಯಾಣ: ತುಮಕೂರು
6. ರೋಗಿ ನಂ: 6562 (13ನೇ ತಾರೀಖಿನದು)
ಬೆಂಗಳೂರಿನ 46 ವರ್ಷದ ಪುರುಷ
ಅಂತರಜಿಲ್ಲಾ ಪ್ರಯಾಣ: ತುಮಕೂರು
7. ರೋಗಿ ನಂ: 6253 (12ನೇ ತಾರೀಖಿನದು)
ಧಾರವಾಡದ 37 ವರ್ಷದ ಪುರುಷ
ಅಂತರಜಿಲ್ಲಾ ಪ್ರಯಾಣ: ಚಿತ್ರದುರ್ಗ
8. ರೋಗಿ ನಂ: 6262 (12ನೇ ತಾರೀಖಿನದು)
ಧಾರವಾಡದ 50 ವರ್ಷದ ಪುರುಷ
ಅಂತರಜಿಲ್ಲಾ ಪ್ರಯಾಣ: ಕೋಲಾರ-ಬೆಂಗಳೂರು
9. ರೋಗಿ ನಂ: 6267 (12ನೇ ತಾರೀಖಿನದು)
ಧಾರವಾಡದ 75 ವರ್ಷದ ವೃದ್ಧ
ಅಂತರಜಿಲ್ಲಾ ಪ್ರಯಾಣ: ತುಮಕೂರು
10. ರೋಗಿ ನಂ: 6278 (12ನೇ ತಾರೀಖಿನದು)
ಮೈಸೂರಿನ 24 ವರ್ಷದ ಮಹಿಳೆ
ಅಂತರಜಿಲ್ಲಾ ಪ್ರಯಾಣ: ಕೆ.ಆರ್. ಪೇಟೆ
ಅಂತರ್ ಜಿಲ್ಲಾ ಪ್ರಯಾಣದವರಿಗೆ ಕೊರೊನಾ ಬೆನ್ನೇರೆಲು ಕಾರಣ
* ರಾಜ್ಯದ ಜಿಲ್ಲೆಗಳೆಲ್ಲ ಸೋಂಕು ಪೀಡಿತ ಜಿಲ್ಲೆಗಳು ಆಗಿರುವುದು
* ಕಂಟೈನ್ಮೆಂಟ್ ಝೋನ್ಗಳಲ್ಲಿ ಓಡಾಟ ಮಾಡಿ ಜಿಲ್ಲೆಗೆ ತೆರಳಿ ಮನೆಯವರೊಂದಿಗೆ ಸಂಪರ್ಕ
* ಜಿಲ್ಲೆಗೆ ಎಸಿ ಕಾರಿನಲ್ಲಿ ಪ್ರಯಾಣ ಮಾಡೋದು ಪ್ರಮುಖ ಕಾರಣ
* 60 ವರ್ಷ ಮೇಲ್ಪಟ್ಟವರು ಪ್ರಯಾಣ ಮಾಡಿ, ಸೋಂಕು ಬರಲು ಕಾರಣ ರೋಗ ನಿರೋಧಕ ಶಕ್ತಿ ಕಡಿಮೆ
* ಕ್ವಾರಂಟೈನ್ ಆದ ವ್ಯಕ್ತಿಗಳು ಓಡಾಟ ಮಾಡಿರುವುದು ಅಂತರ್ ಜಿಲ್ಲಾ ಪ್ರಯಾಣ ಮಾಡಿದವರಿಗೆ ಸೋಂಕು ಬರಲು ಕಾರಣ
* ಜಿಲ್ಲಾ ಪ್ರಯಾಣಕ್ಕೆ ಬಸ್ಸಿನಲ್ಲಿ ಪ್ರಯಾಣ ಮಾಡೋದು ಸೋಂಕಿಗೆ ಮೂಲ ಕಾರಣ