– ಉತ್ಪನ್ನ ತಯಾರಾದ ದೇಶದ ಹೆಸರು ತೋರಿಸುವುದು ಕಡ್ಡಾಯ
ನವದೆಹಲಿ: ಚೀನಿ ವಸ್ತುಗಳನ್ನು ಬಹಿಷ್ಕರಿಸಿ ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. gem.gov.in ವೆಬ್ಸೈಟಿನಲ್ಲಿ ಕಡ್ಡಾಯವಾಗಿ ಉತ್ಪನ್ನ ತಯಾರದ ಮೂಲ ದೇಶದ ಹೆಸರನ್ನು ಪ್ರದರ್ಶಿಸಬೇಕೆಂದು ಸೂಚಿಸಿದೆ.
Advertisement
ಈ ನಿರ್ಧಾರ ಪ್ರಕಟವಾಗುವ ಮೊದಲೇ ಅಪ್ಲೋಡ್ ಮಾಡಿರುವ ಉತ್ಪನ್ನಗಳಿಗೆ ಶೀಘ್ರವೇ ದೇಶದ ಹೆಸರನ್ನು ಸೇರಿಸಬೇಕು ಎಂದು ಸರ್ಕಾರ ಹೇಳಿದೆ. ಅಷ್ಟೇ ಅಲ್ಲದೇ ಜನರಿಗೆ ಸುಲಭವಾಗಿ ತಿಳಿಯಲು ʻಮೇಕ್ ಇನ್ ಇಂಡಿಯಾʼ ವಿಭಾಗವನ್ನು ಸೇರಿಸಬೇಕು ಎಂದು ತಿಳಿಸಿದೆ. ʻಆತ್ಮನಿರ್ಭರ್ ಭಾರತ್ʼ ಮತ್ತು ʻಮೇಕ್ ಇನ್ ಇಂಡಿಯಾʼವನ್ನು ಉತ್ತೇಜಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.
Advertisement
ಈ ನಿರ್ಧಾರ ಸರ್ಕಾರದಿಂದ ಪ್ರಕಟವಾಗುತ್ತಿದ್ದಂತೆ ಖಾಸಗಿ ಆನ್ಲೈನ್ ಶಾಪಿಂಗ್ ತಾಣಗಳಲ್ಲೂ ಇದು ಜಾರಿಯಾಗುವಂತೆ ಆದೇಶವನ್ನು ಜಾರಿ ಮಾಡಿ ಎಂದು ಜನ ಸರ್ಕಾರವನ್ನು ಕೇಳಿಕೊಂಡಿದ್ದಾರೆ.
Advertisement
Advertisement
ಚೀನಾ ಗಡಿಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾದ ಬೆನ್ನಲ್ಲೇ ದೇಶದಲ್ಲಿ ಚೀನಿ ವಸ್ತುಗಳ ಬಹಿಷ್ಕರಿಸಲು ವರ್ತಕರು ಕರೆ ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದ್ದಂತೆ ಜನ ಸರ್ಕಾರ ಚೀನಿ ವಸ್ತುಗಳ ಮೇಲೆ ಆಮದು ಸುಂಕವನ್ನು ಹೆಚ್ಚಿಸಬೇಕು. ಸರ್ಕಾರವೇ ಈ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕೆಂಬ ಆಗ್ರಹ ಕೇಳಿ ಬಂದಿತ್ತು.
Brilliant move. We @CAITIndia hope that the Govt will soon make it mandatory for all Pvt Ecomm players to display “country of origin” on their websites. The consumers have the right to decide before buying which country product they wish to buy.#BoycottChineseProducts @praveendel
— Sumit Agarwal ???????? (@sumitagarwal_IN) June 23, 2020