Thursday, 21st June 2018

Recent News

ಫೇಸ್‍ಬುಕ್, ವಾಟ್ಸಾಪ್ ನಲ್ಲಿ ವಾರ್- ನಾಯಕರನ್ನು ಪರಸ್ಪರ ಹೀಯಾಳಿಸಿದ್ದಕ್ಕೆ ಜೆಡಿಎಸ್ ಸದಸ್ಯರ ಮೇಲೆ `ಕೈ’ ಹಲ್ಲೆ

ರಾಮನಗರ: ಫೇಸ್‍ಬುಕ್ ಹಾಗೂ ವಾಟ್ಸಾಪ್‍ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಕ್ಕೆ ಮಾಗಡಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪುರಸಭೆ ಸದಸ್ಯರು ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ.

ಕಳೆದ ಮೂರು ತಿಂಗಳಿನಿಂದ ಬಂಡಾಯ ಶಾಸಕ ಎಚ್.ಸಿ ಬಾಲಕೃಷ್ಣ ಹಾಗೂ ಜೆಡಿಎಸ್ ನ ಎ. ಮಂಜುನಾಥ್ ಅವರು ಪಕ್ಷಾಂತರ ಹಾಗೂ ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವಾರ್ ಶುರುವಾಗಿದೆ. ತಮ್ಮ ನಾಯಕರುಗಳ ಪರವಾಗಿ ಪೋಸ್ಟ್ ಮಾಡಿ ವಿರೋಧಿಗಳನ್ನ ಜರಿದಿದ್ದಾರೆ.

ಈ ವಿಚಾರವಾಗಿ ಮಂಗಳವಾರ ರಾತ್ರಿ ಮಾಗಡಿ ಪುರಸಭೆಯ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಮಾತಿನ ಚಕಮಕಿ ನಡೆಸಿ ಕೈಕೈ ಮಿಲಾಯಿಸಿದ್ದಾರೆ. ಘಟನೆಯಲ್ಲಿ ಬಂಡಾಯ ಶಾಸಕ ಎಚ್.ಸಿ ಬಾಲಕೃಷ್ಣ ಬೆಂಬಲಿಗರಾದ ಪುರಸಭೆಯ ಮಾಜಿ ಅದ್ಯಕ್ಷ ಪುರುಷೋತ್ತಮ ಹಾಗೂ ಅವರ ಸಹವರ್ತಿಗಳು ಜೆಡಿಎಸ್ ನ ಬಾಲರಘು, ಜವರೇಗೌಡ, ಮುನಿರಾಜು ನಡುವೆ ಮಾತಿನ ಚಕಮಕಿ ನಡೆಸಿ ಹಲ್ಲೆ ಮಾಡಿದ್ದಾರೆ.

ಘಟನೆ ಸಂಬಂಧ ಎರಡು ಬಣದವರು ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *