LatestMain PostNational

38 ವರ್ಷಗಳ ನಂತರ ಪತ್ತೆಯಾಯ್ತು ಆಪರೇಷನ್ ಮೇಘದೂತ್‍ನಲ್ಲಿ ಭಾಗಿಯಾಗಿದ್ದ ಯೋಧನ ಅವಶೇಷ

ಡೆಹ್ರಾಡೂನ್: ದೇಶಕ್ಕೆ ಸ್ವಾತಂತ್ರ್ಯ ದೊರಕಿ ಅಮೃತ ಮಹೋತ್ಸವದ ಸಂದರ್ಭದಲ್ಲಿದ್ದಾಗಲೇ, 38 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಯೋಧರೊಬ್ಬರ ಅವಶೇಷ ಸಿಯಾಚಿನ್‍ನ 16,000 ಅಡಿ ಆಳದಲ್ಲಿ ಪತ್ತೆ ಆಗಿದೆ.

ಆ ಮೃತದೇಹವನ್ನು ಲ್ಯಾನ್ಸ್ ನಾಯ್ಕ್ ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಅವರು ಉತ್ತರಾಖಂಡದ ಹಲ್ದ್ವಾನಿಯಲ್ಲಿನ ನಿವಾಸಿಯಾಗಿದ್ದರು. ಚಂದ್ರಶೇಖರ್‌ಗಾಗಿ ಅವರ ಪತ್ನಿ(65) ಹಾಗೂ ಇಬ್ಬರು ಹೆಣ್ಣುಮಕ್ಕಳು ಸುದೀರ್ಘ 38 ವರ್ಷಗಳಿಂದ ಕಾಯುತ್ತಿದ್ದರು. ಈ ಕಾಯುವಿಕೆ ಇದೀಗ ಅಂತ್ಯಗೊಂಡಿದ್ದು, ಕುಟುಂಬವು ಇಂದು ಚಂದ್ರಶೇಖರ್‌ಗೆ ವಿದಾಯವನ್ನು ಹೇಳುವ ಸಂದರ್ಭ ಎದುರಾಗಿದೆ.

ಸಿಯಾಚಿನ್‍ನಲ್ಲಿ 1984ರ ಆಪರೇಷನ್ ಮೇಘದೂತ್‍ದಲ್ಲಿ ಲ್ಯಾನ್ಸ್ ನಾಯ್ಕ್ ಚಂದ್ರಶೇಖರ್ ಭಾಗಿಯಾಗಿದ್ದರು. ಪಾಕಿಸ್ತಾನ ಕಣ್ಣಿಟ್ಟಿದ್ದ ಪಾಯಿಂಟ್ 5,965 ವಶದಲ್ಲಿರಿಕೊಳ್ಳುವ ಕಾರ್ಯಾಚರಣೆಯಲ್ಲಿದ್ದ ತಂಡದಲ್ಲಿ ಚಂದ್ರಶೇಖರ್ ಇದ್ದರು. ಅವರಿದ್ದ 19 ಕುಮಾವೊನ್ ರೆಜಿಮೆಂಟ್ 1984 ಮೇ 29ರಂದು ಸಿಯಾಚಿನ್ ಗ್ಲೇಸಿಯರ್‌ನಲ್ಲಿ ನಡೆದ ಆಪರೇಷನ್ ಮೇಘದೂತ್‍ನಲ್ಲಿ ಪಾಲ್ಗೊಂಡಿತ್ತು. ಆದರೆ ಅಂದು ನಡೆದ ಭೀಕರ ಹಿಮಪಾತದಲ್ಲಿ ಒಬ್ಬ ಅಧಿಕಾರಿ ಸೇರಿದಂತೆ 19 ಮಂದಿ ಯೋಧರು ಸಿಲುಕಿದ್ದರು. 14 ಯೋಧರು ಪತ್ತೆ ಆಗಿದ್ದರು. ಇನ್ನುಳಿದ 5 ಮಂದಿ ನಾಪತ್ತೆ ಆಗಿದ್ದರು. ನಾಪತ್ತೆ ಆದವರಲ್ಲಿ ಚಂದ್ರಶೇಖರ್ ಕೂಡ ಇದ್ದರು.

ನಾಪತ್ತೆ ಆದವರನ್ನು ಎಷ್ಟೇ ಹುಡುಕಿದರೂ ಅವರು ಸಿಕ್ಕಿರಲಿಲ್ಲ. ಇದೀಗ ಆ. 13ರಂದು ಸೈನಿಕರಿಗೆ ಲ್ಯಾನ್ಸ್ ನಾಯ್ಕ್ ಚಂದ್ರಶೇಖರ್ ಅವರ ಅಸ್ಥಿಪಂಜರದ ಅವಶೇಷಗಳು ಹಳೆಯ ಬಂಕರ್‌ನಲ್ಲಿ ಪತ್ತೆ ಆಗಿದೆ. ಆ ಅಸ್ಥಿಪಂಜರದಲ್ಲಿ ಸೈನ್ಯದ ಸಂಖ್ಯೆಯೊಂದಿಗೆ ಡಿಸ್ಕ್ ಇರುವುದು ಕಂಡುಬಂದಿರುವುದರಿಂದ ಚಂದ್ರಶೇಖರ್ ಅವರೇ ಎನ್ನುವುದು ದೃಢವಾಗಿದೆ. ಇದನ್ನೂ ಓದಿ: ಕೊನೆ ಉಸಿರಿರೋವರೆಗೂ ಮಂಡ್ಯದ ಸೊಸೆಯಾಗಿರುವೆ: ಸುಮಲತಾ ಅಂಬರೀಶ್

ಆಪರೇಷನ್ ಮೇಘದೂತ್‍ದಲ್ಲಿ ಘಟನೆ ನಡೆದಾಗ ಚಂದ್ರಶೇಖರ್‍ನ ಇಬ್ಬರು ಮಕ್ಕಳು ಚಿಕ್ಕವರಾಗಿದ್ದರು. ದುರಂತ ನಡೆದಾಗ ಕಿರಿಯ ಮಗಳಿಗೆ 4 ವರ್ಷ ಹಾಗೂ ಹಿರಿಯವಳಿಗೆ 8 ವರ್ಷ ವಯಸ್ಸಾಗಿತ್ತು. ಇದನ್ನೂ ಓದಿ: ಮಹಾರಾಷ್ಟ್ರ ಸಿಎಂ ಶಿಂದೆ ಸಂಪುಟದಲ್ಲಿ ದೇವೇಂದ್ರ ಫಡ್ನವಿಸ್‌ಗೆ ಗೃಹ, ಹಣಕಾಸು ಖಾತೆ

Live Tv

Leave a Reply

Your email address will not be published.

Back to top button