Thursday, 24th May 2018

2 months ago

ಧಮ್ ಇದ್ರೆ ವೀರಶೈವ ಸಮಾವೇಶಕ್ಕೆ ಬಂದೋಗಿ: ಎಂ.ಬಿ ಪಾಟೀಲರಿಗೆ ಸವಾಲೆಸೆದ ಮಹಿಳೆ

ವಿಜಯಪುರ: ಧಮ್ ಇದ್ರೆ ವೀರಶೈವ ಸಮಾವೇಶಕ್ಕೆ ಬಂದು ಹೋಗಿ ಅಂತ ದಿವ್ಯಾ ಹಾದರಗಿ ಎಂಬವರು ಸಚಿವ ಎಂ.ಬಿ ಪಾಟೀಲರಿಗೆ ಸವಾಲೆಸೆದಿದ್ದಾರೆ. ವಿಜಯಪುರದಲ್ಲಿ ನಡೆಯುತ್ತಿರುವ ವೀರಶೈವ ಲಿಂಗಾಯತ ಸಮಾವೇಶದಲ್ಲಿ ಮಾತನಾಡಿದ ಅವರು, ನೀವು ಇಲ್ಲಿ ಬಂದಿದ್ದೇ ಆದರೆ ಬರೀ ಒಂದು ರೌಂಡ್ ಹಾಕಿ ತೋರಿಸಿ. ನೀವು ನಮ್ಮ ಧರ್ಮಕ್ಕೆ ನೀವು ಕೈ ಹಾಕಿದ್ದು ಸರಿಯಲ್ಲ. ಅದಕ್ಕೆ ಪುರುಷರು ಯಾರು ಬೇಡ. ನಾವು ಮಹಿಳೆಯರು ಸಾಕು. ಒಂದು ಒನಕೆ ಅಥವಾ ಖಡ್ಗ ಕೊಟ್ರೆ ಸಾಕು ನಿಮ್ಮಂಥ ಎಷ್ಟೇ ಧರ್ಮ ವಿರೋಧಿಗಳು […]

2 months ago

ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಪ್ರಸ್ತಾವನೆಯನ್ನು 2013ರಲ್ಲಿ ತಿರಸ್ಕರಿಸಿತ್ತು ಯುಪಿಎ

ನವದೆಹಲಿ: ಜನಗಣತಿ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವಂತೆ ಅಖಿಲ ಭಾರತ ವೀರಶೈವ ಮಹಾಸಭಾ 2010ರಲ್ಲಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು 2013ರಲ್ಲಿ ಯಪಿಎ ಸರ್ಕಾರ ತಿರಸ್ಕರಿಸಿದ ವಿಚಾರ ಈಗ ಬೆಳಕಿಗೆ ಬಂದಿದೆ. ಲಿಂಗಾಯತ ಸಮುದಾಯವು 4 ಕೋಟಿಗೂ ಅಧಿಕ ಸಂಖ್ಯೆಯ ಅನುಯಾಯಿಗಳನ್ನು ಒಳಗೊಂಡಿದ್ದು, ಬೌದ್ಧ, ಸಿಖ್ ಹಾಗೂ ಜೈನ ಧರ್ಮದ ಅನುಯಾಯಿಗಳಿಗಿಂತ ಅಧಿಕ...

ತುಮಕೂರಲ್ಲಿ ರಾಜಕೀಯ ಶತ್ರುಗಳ ಸಮಾಗಮ – ವೀರಶೈವದಿಂದ ಒಂದಾದ ಸೊಗಡು-ಬಸವರಾಜು

2 months ago

ತುಮಕೂರು: ಜಿಲ್ಲೆಯ ಬಿಜೆಪಿಯಲ್ಲಿ ಬದಲಾವಣೆಯ ಗಾಳಿ ಬೀಸುವ ಮುನ್ಸೂಚನೆ ಸಿಕ್ಕಿದೆ. ಬಿಜೆಪಿಯ ರಾಜಕೀಯ ಬದ್ಧ ವೈರಿಗಳು ಎಂದೇ ಬಿಂಬಿತ್ತರಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ಮಾಜಿ ಸಂಸದ ಜಿ.ಎಸ್.ಬಸವರಾಜು ಒಂದಾಗಿದ್ದಾರಾ ಅನ್ನುವ ತೀವ್ರ ಚರ್ಚ ಶುರುವಾಗಿದೆ. ವೀರಶೈವ ಸಮಾಜದ ಮುಖಂಡರು...

ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಕಲಬುರಗಿಯಲ್ಲಿ ಇಂದು ಬೃಹತ್ ರ‍್ಯಾಲಿ

8 months ago

ಕಲಬುರಗಿ: ಪರ ವಿರೋಧದ ಮಧ್ಯೆ ಕಲಬುರಗಿಯಲ್ಲಿಂದು ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಬೃಹತ್ ರ‍್ಯಾಲಿ ನಡೆಸಲಾಗುತ್ತಿದೆ. ಈ ಮೂಲಕ ಬಸವ ತತ್ವದವರು ವೈಧಿಕ ಮಠಾಧೀಶರ ವಿರುದ್ಧ ಮತ್ತೆ ತಿರುಗಿ ಬಿದಿದ್ದಾರೆ. ಇನ್ನು ಈ ರ‍್ಯಾಲಿಯನ್ನು ಯಶಸ್ವಿ ಮಾಡಲು ಸಚಿವ ಎಂ.ಬಿ.ಪಾಟೀಲ್ ಸಂಪೂರ್ಣ ನೇತೃತ್ವವನ್ನು ವಹಿಸಿಕೊಂಡಿದ್ದಾರೆ....

ಸಿದ್ದಗಂಗಾ ಶ್ರೀಗಳ ಜ್ಞಾಪಕ ಶಕ್ತಿ ಕೆಲವರಿಂದ ದುರುಪಯೋಗ: ಮಾತೆ ಮಹಾದೇವಿ

8 months ago

ಬಾಗಲಕೋಟೆ: ಸಿದ್ದಗಂಗಾ ಶ್ರೀಗಳಿಗೆ ವಯೋಮಾನದ ದೃಷ್ಟಿಯಿಂದ ನೆನಪಿನ ಶಕ್ತಿ ಉಳಿದಿಲ್ಲ ಎಂದು ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿಕೆ ನೀಡಿದ್ದಾರೆ. ಸ್ವಾಮೀಜಿಗಳ ಜ್ಞಾಪಕ ಶಕ್ತಿಯನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸಿದ್ದಗಂಗಾ ಶ್ರೀಗಳ ಪಕ್ಕ ಇರುವ ವೀರಶೈವ ಮಹಾಸಭಾದವರು ಒತ್ತಡ ತಂದಿದ್ದಾರೆ. ಪೂಜ್ಯ...

ಏನ್ ಕೇಳಿಸ್ಕೊಂಡ್ಯೋ ಪಾಟೀಲ್, ಇದ್ರಿಂದ ನಿಂಗೂ, ನಮಗೂ ಡ್ಯಾಮೇಜ್: ಸಿಎಂ ಕ್ಲಾಸ್

8 months ago

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ತುಮಕೂರಿನ ಸಿದ್ಧಗಂಗಾ ಶ್ರೀಗಳು ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದಿಟ್ಟ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಅವರನ್ನು ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ಸಂಪುಟ ಸಭೆಯಲ್ಲಿ ಇಂದು ಸಿದ್ದರಾಮಯ್ಯ, ಶ್ರೀಗಳ ಜತೆ...

ಥಕ ಥೈ ಥಕ ಥೈ ಅಂತಾ ಏಕೆ ಕುಣಿತೀಯಾ: ಏಕವಚನದಲ್ಲೇ ಪಾಟೀಲ್ ವಿರುದ್ಧ ಸೋಮಣ್ಣ ಕಿಡಿ

8 months ago

ಬೆಂಗಳೂರು: ನಡೆದಾಡುವ ದೇವರ ವಿಚಾರಕ್ಕೆ ಬಂದ್ರೆ ಸುಟ್ಟು ಭಸ್ಮ ಆಗ್ತೀರಾ ಅಂತ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ವಿಧಾನಪರಿಷತ್ ಸದಸ್ಯ ವಿ.ಸೋಮಣ್ಣ ವಾಗ್ದಾಳಿ ನಡೆಸಿದ್ದಾರೆ. ಎಂ.ಬಿ.ಪಾಟೀಲ್ ಈಗ ನಿನಗೆ ವೀರಶೈವ ಲಿಂಗಾಯತರ ನೆನಪಾಯ್ತಾನೇಪ್ಪಾ? ಈಗ ಥಕ ಥೈ ಥಕ ಥೈ ಅಂತಾ ಏಕೆ...

ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಹಿನ್ನಡೆ, ಎಂಬಿ ಪಾಟೀಲ್‍ಗೆ ಭಾರೀ ಮುಖಭಂಗ

8 months ago

ತುಮಕೂರು: ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ತೀವ್ರ ಹಿನ್ನಡೆಯಾಗಿದ್ದು, ತಮ್ಮ ಹೇಳಿಕೆಯನ್ನ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ತಿರುಚಿದ್ದಾರೆ ಅಂತ ಸಿದ್ದಗಂಗಾ ಮಠ ಅಧಿಕೃತ ಪ್ರಕಟಣೆ ಹೊರಡಿಸಿದೆ. ಲಿಂಗಾಯತ-ವೀರಶೈವ ಎರಡು ಒಂದೇ, ಧರ್ಮವನ್ನ ಒಡೆಯಬೇಡಿ ಎಂದು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಸಚಿವ...