Monday, 19th March 2018

4 days ago

ರಾತ್ರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಗೆ ಬುದ್ಧಿವಾದ ಹೇಳಿದ್ರೂ ಬೆಳಗ್ಗೆ ರೈಲಿಗೆ ತಲೆ ಕೊಟ್ಟ!

ಚಾಮರಾಜನಗರ: ರೈಲ್ವೇ ಹಳಿಗೆ ತಲೆಕೊಟ್ಟು ಅಪರಿಚಿತ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳಲು ಗುರುವಾರ ರಾತ್ರಿಯೇ ಪ್ರಯತ್ನಿಸಿದ್ದ ಅಪರಿಚಿತ ವ್ಯಕ್ತಿಗೆ ಚಾಮರಾಜನಗರದ ರೈಲ್ವೇ ಸಿಬ್ಬದಿ ಬೈದು ಬುದ್ಧಿವಾದ ಹೇಳಿ ಕಳುಹಿಸಿದ್ದರು. ಆದರೆ ಇಂದು ಬೆಳಗ್ಗೆ ಅದೇ ಸ್ಥಳಕ್ಕೆ ಆಗಮಿಸಿದ ಆತ ಚಾಮರಾಜನಗರದಿಂದ ಮೈಸೂರಿಗೆ ತೆರಳುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಯಾರು ಎಂಬ ಮಾಹಿತಿ ತಿಳಿದು ಬಂದಿಲ್ಲ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು […]

7 days ago

3 ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟು ತಾಯಿ ಆತ್ಮಹತ್ಯೆ- 7ರ ಬಾಲಕಿ ಪಾರು

ವಿಜಯಪುರ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮೂವರು ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆ ಇಂಡಿ ರೈಲ್ವೇ ನಿಲ್ದಾಣದ ಬಳಿ ನಡೆದಿದೆ. ಇಂಡಿ ತಾಲೂಕಿನ ಸಾತಪುರ ಗ್ರಾಮದವರಾದ ಲಕ್ಷ್ಮೀ ಪ್ರಕಾಶ ಬೂದಿಹಾಳ(35), 3 ವರ್ಷದ ಮಗು ಬೀರಪ್ಪ ಹಾಗೂ 1 ವರ್ಷದ ಮಗು ಅಂಕುಶ ಮೃತ ದುರ್ದೈವಿಗಳಾಗಿದ್ದಾರೆ. ಸೋಮವಾರ ತಡರಾತ್ರಿ ತಾಯಿ,...

ಟ್ರ್ಯಾಕ್ ದಾಟುವಾಗ ರೈಲು ಡಿಕ್ಕಿ- 6 ಯುವಕರ ಸಾವು

3 weeks ago

ಲಕ್ನೋ: ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದ ಪರಿಣಾಮ ಹಳಿ ದಾಟುತ್ತಿದ್ದ 7 ಜನರಲ್ಲಿ 6 ಯುವಕರು ಸಾವನ್ನಪ್ಪಿರುವ ಘಟನೆ ಭಾನುವಾರದಂದು ಉತ್ತರಪ್ರದೇಶದ ಹಾಪುರ್‍ನಲ್ಲಿ ನಡೆದಿದೆ. ಮೃತರನ್ನು ಸಲೀಮ್, ಆರಿಫ್, ಅಜಯ್, ಅಮೀರ್, ಆಕಾಶ್ ಹಾಗೂ ರಾಹುಲ್ ಎಂದು ಗುರುತಿಸಲಾಗಿದೆ. ಯುವಕರು...

ಚಲಿಸುತ್ತಿದ್ದ ರೈಲು ಏರಲು ಹೋಗಿ ಎರಡೂ ಕಾಲು ಕಳೆದುಕೊಂಡ ಮಹಿಳೆ

4 weeks ago

ರಾಯಚೂರು: ಚಲಿಸುತ್ತಿದ್ದ ರೈಲು ಏರಲು ಹೋಗಿ ಮಹಿಳೆಯೊಬ್ಬರು ತಮ್ಮ ಎರಡೂ ಕಾಲು ಕಳೆದುಕೊಂಡಿರುವ ಘಟನೆ ರಾಯಚೂರಿನ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ರಾಯಚೂರು ತಾಲೂಕಿನ ಯರಗೇರಾ ಗ್ರಾಮದ ಪದ್ಮಮ್ಮ ಎರಡೂ ಕಾಲು ಕಳೆದುಕೊಂಡ ನತದೃಷ್ಟ ಮಹಿಳೆ. ಬೆಂಗಳೂರಿನಿಂದ ರಾಯಚೂರು ಮಾರ್ಗವಾಗಿ ಪುಣೆಗೆ ಹೊರಟಿದ್ದ...

ಹೆಂಡ್ತಿ ಬೇರೆಯವರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ರೈಲಿನ ಮುಂದೆ ಜಿಗಿದು ಪತಿ ಆತ್ಮಹತ್ಯೆ!

1 month ago

ಹೈದರಾಬಾದ್: ಪತ್ನಿ ಬೇರೆಯವರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆಂಬ ವಿಷಯ ತಿಳಿದು ಬೇಸತ್ತ ಪತಿ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶದ ಕರ್ನೂಲ್‍ನಲ್ಲಿ ನಡೆದಿದೆ. ವಿನಯ್ ಕುಮಾರ್(24) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವಿನಯ್ ಗೋನೆಗಾಂಡ್ಲಾ ಗ್ರಾಮದ ನಿವಾಸಿಯಾಗಿದ್ದು, 2017ರ...

ಬಗೆ ಹರಿಯಿತು ಸುವರ್ಣ ರಥ ಆದಾಯ ಹಂಚಿಕೆ ಗೊಂದಲ

1 month ago

ಬೆಂಗಳೂರು: ಸುವರ್ಣ ರಥ(ಗೋಲ್ಡನ್ ಚಾರಿಯಟ್) ಆದಾಯ ಹಂಚಿಕೆಗೆ ಸಂಬಂಧಿಸಿದಂತೆ, ಕೇಂದ್ರ ರೈಲ್ವೇ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಎಸ್‍ಟಿಡಿಸಿ)ನಡುವೆ ಇದ್ದ ಗೊಂದಲ ಬಗೆಹರಿದಿದೆ. ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಕೆಎಸ್‍ಟಿಡಿಸಿ ವ್ಯವಸ್ಥಾಪಕ ನಿರ್ದೆಶಕರ ಮಾತುಕತೆ ಫಲವಾಗಿ ಇನ್ನು...

‘ಸಂತೆಯಲ್ಲಿ ನಿಂತ ಕಬೀರ’ ಚಿತ್ರದ ನಟಿ ಸನುಷಾ ಗೆ ರೈಲಿನಲ್ಲಿ ಲೈಂಗಿಕ ಕಿರುಕುಳ

2 months ago

ತಿರುವನಂತಪುರಂ: ಇತ್ತೀಚಿಗೆ ನಟಿ ಅಮಲಾ ಪೌಲ್ ಮೇಲೆ ಲೈಂಗಿಕ ಕಿರುಕುಳ ನಡೆದಿತ್ತು. ಅದರ ಬೆನ್ನಲ್ಲೇ ಈಗ ಮತ್ತೊಬ್ಬ ನಟಿಯ ಮೇಲೆ ಲೈಂಗಿಕ ಕಿರುಕುಳ ನಡೆದಿದೆ. ಸಂತೆಯಲ್ಲಿ ನಿಂತ ಕಬೀರ ಚಿತ್ರದ ನಟಿ ಸನುಷ ಸಂತೋಷ್ ಗೆ ರೈಲಿನಲ್ಲಿ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ...

ರೈಲಿನ ಫುಟ್ ಬೋರ್ಡ್‍ನಿಂದ ಕೆಳಗೆ ಬಿದ್ದು ಯುವ ನಟ ದುರ್ಮರಣ

2 months ago

ಮುಂಬೈ: ರೈಲಿನಿಂದ ಬಿದ್ದ ಮರಾಠಿಯ ಯುವ ನಟರೊಬ್ಬರು ದುರ್ಮರಣಕ್ಕೀಡಾದ ಘಟನೆ ಸೋಮವಾರ ಬೆಳಗ್ಗೆ ಮುಂಬೈನಲ್ಲಿ ನಡೆದಿದೆ. ಪ್ರಫುಲ್ ಭಲೇರಾವ್(22) ರೈಲು ಅಪಘಾತದಲ್ಲಿ ಸಾವನ್ನಪ್ಪಿದ ನಟ. ಪ್ರಫುಲ್ ಮಲಾಡ್ ನಿಂದ ಗೋರೆಗಾಂವ್ ಗೆ ಹೋಗುತ್ತಿದ್ದ ರೈಲನ್ನು ಏರಿದಾಗ ಈ ಅವಘಡ ಸಂಭವಿಸಿದೆ. ಪ್ರತ್ಯಕ್ಷದರ್ಶಿಯೊಬ್ಬರ...