Thursday, 23rd January 2020

2 months ago

ಕಥಾ ಸಂಗಮದಲ್ಲಿದೆ ಕಾಡುವ ಕಥೆಗಳ ಗುಚ್ಛ!

ಸಿದ್ಧ ಸೂತ್ರದ ಸಿನಿಮಾಗಳ ಸದ್ದಿನ ಸರಹದ್ದಿನೊಳಗೇ ಭಿನ್ನ ಪ್ರಯೋಗಗಳು ಅಬ್ಬರಿಸದಿದ್ದರೆ ಯಾವುದೇ ಭಾಷೆಯ ಚಿತ್ರರಂಗವಾದರೂ ನಿಂತ ನೀರಿನಂತಾಗಿ ಬಿಡುತ್ತದೆ. ಈ ಕಾರಣದಿಂದಲೇ ಹೊಸ ಅಲೆಯ ಚಿತ್ರಗಳು, ಹೊಸ ಪ್ರಯೋಗಗಳ ಮೂಸೆಯಲ್ಲರಳಿಕೊಂಡ ಸಿನಿಮಾಗಳು ಮುಖ್ಯವಾಗಿ ಪರಿಗಣಿಸಲ್ಪಡುತ್ತವೆ. ಈ ನಿಟ್ಟಿನಲ್ಲಿ ರಿಷಬ್ ಶೆಟ್ಟಿ ಸೂತ್ರದಾರಿಕೆಯ ಕಥಾ ಸಂಗಮ ಒಂದು ಪರಿಣಾಮಕಾರಿ ಪ್ರಯತ್ನ. ಈ ಕಾರಣದಿಂದಲೇ ಈ ಸಿನಿಮಾ ಬಗ್ಗೆ ಪ್ರೇಕ್ಷಕರೆಲ್ಲರೂ ತುದಿಗಾಲಲ್ಲಿ ಕಾಯಲಾರಂಭಿಸಿದ್ದರು. ಇದೀಗ ಕಥಾ ಸಂಗಮ ತೆರೆ ಕಂಡಿದೆ. ಒಂದಕ್ಕಿಂತ ಒಂದು ಭಿನ್ನವಾಗಿರುವ, ರುಚಿಕಟ್ಟಾಗಿರುವ ಏಳು ಕಥೆಗಳೊಂದಿಗೆ ತೆರೆಕಂಡಿರುವ […]

2 months ago

‘ಕಥಾ ಸಂಗಮ’ ಡಿಸೆಂಬರ್ 6ರಂದು ರಿಲೀಸ್

ರಿಷಬ್ ಶೆಟ್ಟಿ ಫಿಲಂಸ್ ಹಾಗೂ ಶ್ರೀದೇವಿ ಎಂಟರ್ ಟೈನರ್ಸ್ ಲಾಂಛನದಲ್ಲಿ ರಿಷಬ್ ಶೆಟ್ಟಿ, ಕೆ.ಹೆಚ್ ಪ್ರಕಾಶ್ ಹಾಗೂ ಪ್ರದೀಪ್ ಎನ್.ಆರ್ ಅವರು ನಿರ್ಮಿಸಿರುವ ‘ಕಥಾ ಸಂಗಮ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಏಳು ಕಥೆಗಳ ಸಂಗಮವಾಗಿರುವ ಈ ಚಿತ್ರವನ್ನು ಏಳು ಜನ ನಿರ್ದೇಶಕರು ನಿರ್ದೇಶಿಸಿದ್ದಾರೆ. ಮೊದಲ ಕಥೆಯನ್ನು ಶಶಿಕುಮಾರ್ ನಿರ್ದೇಶಿಸಿದ್ದಾರೆ. ಜಯಂತ್ ಸೀಗೆ ಕಥೆ,...