Friday, 25th May 2018

Recent News

1 hour ago

ನಾಲ್ವರು ದುಷ್ಕರ್ಮಿಗಳಿಂದ ಬಾಲಕಿಗೆ ಚಾಕು ಇರಿತ!

ದಾವಣಗೆರೆ: ಮನೆಯಲ್ಲಿ ಯಾರು ಇಲ್ಲದ ವೇಳೆ ನೀರು ಕೇಳಲು ಹೋಗಿ ನಾಲ್ವರು ದುಷ್ಕರ್ಮಿಗಳು ಬಾಲಕಿಗೆ ಚಾಕುವಿನಿಂದ ಇರಿದ ಘಟನೆ ಜಿಲ್ಲೆಯ ಹೆಚ್.ಕೆ.ಆರ್ ನಗರದಲ್ಲಿ ನಡೆದಿದೆ. ಗುರುವಾರ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಳು. ತಂದೆ-ತಾಯಿ ಕೆಲಸಕ್ಕೆ ಹೋಗಿದ್ದ ಸಂದರ್ಭವನ್ನು ಬಳಸಿಕೊಂಡ ನಾಲ್ಕು ಮಂದಿ ದುಷ್ಕರ್ಮಿಗಳು ಮೊದಲು ಬಾಗಿಲು ಬಡಿದಿದ್ದಾರೆ. ಬಾಗಿಲು ತೆಗೆಯುತ್ತಿದ್ದಂತೆ ಬಾಲಕಿಯ ಕುತ್ತಿಗೆಗೆ ಚಾಕು ಹಾಕಲು ಮುಂದಾಗಿದ್ದಾರೆ. ಈ ವೇಳೆ ಬಾಲಕಿ ಕೈ ಅಡ್ಡ ತಂದಿದ್ದಕ್ಕೆ ಚಾಕು ಕೈಗೆ ಬಿದ್ದಿದೆ. ತಕ್ಷಣಕ್ಕೆ ಬಾಲಕಿ ಕಿರುಚಿಕೊಂಡಿದ್ದರಿಂದ ನಾಲ್ವರು ದುಷ್ಕರ್ಮಿಗಳು […]

15 hours ago

ಪಾಕ್‍ನಲ್ಲಿ ಅಡುಗೆ ಕೆಲಸ ಮಾಡಿ ಭಾರತದ ರಹಸ್ಯವನ್ನು ಐಎಸ್‍ಐಗೆ ತಿಳಿಸಿದ!

ಡೆಹ್ರಾಡೂನ್: ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಉತ್ತರಪ್ರದೇಶದ ಭಯೋತ್ಪಾದನ ನಿಗ್ರಹ ದಳ(ಎಟಿಎಸ್) ಬಂಧಿಸಿದೆ. ಆರೋಪಿಯನ್ನು ಉತ್ತರಾಖಂಡದ ಪಿತ್ತೋರ್‍ಗಢ ಜಿಲ್ಲೆಯ ಕಿರೊಲಾ ಗ್ರಾಮದ ರಮೇಶ್ ಸಿಂಗ್ ಕನ್ಯಾಲ್ (43) ಎಂದು ಗುರುತಿಸಲಾಗಿದೆ. ಅವನು ಪಾಕಿಸ್ತಾನದ ಇಂಟರ್ ಸರ್ವೀಸ್ ಇಂಟೆಲಿಜೆನ್ಸ್‍ಗೆ (ಐಎಸ್‍ಐ)ಗೆ ರಾಷ್ಟ್ರೀಯ ಭದ್ರತಾ ಮಾಹಿತಿಯನ್ನು ನೀಡುತ್ತಿದ್ದ ಎಂದು ವರದಿಯಾಗಿದೆ....

ಬಿಸಿಯೂಟ ಕಳಪೆಯಾಗಿದೆ ಅಂದಿದ್ದ ವಿದ್ಯಾರ್ಥಿಗೆ ರಾಡ್‍ನಿಂದ ಹಲ್ಲೆಗೈದ ಪ್ರಾಂಶುಪಾಲೆ!

2 days ago

(ಸಾಂದರ್ಭಿಕ ಚಿತ್ರ) ಡೆಹ್ರಾಡೂನ್: ಬಿಸಿಯೂಟದ ಗುಣಮಟ್ಟ ಕಳಪೆಯಾಗಿದೆ ಎಂದು ದೂರಿದ ವಿದ್ಯಾರ್ಥಿಯ ಮೇಲೆ ಪ್ರಾಂಶುಪಾಲೆ ಕಬ್ಬಿಣದ ರಾಡ್‍ನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಅಮಾನವೀಯ ಘಟನೆ ಉತ್ತರಾಖಂಡ್ ರಾಜ್ಯದಲ್ಲಿ ನಡೆದಿದೆ. ಡೆಹ್ರಾಡೂನ್ ಜಿಲ್ಲೆಯ ಓಲ್ಡ್ ದಲಾನ್‍ವಾಲಾ ಪ್ರದೇಶ ಸರ್ಕಾರಿ ಶಾಲೆಯಲ್ಲಿ ಈ ಘಟನೆ...

ಸೋದರನನ್ನ ಜೈಲಿಗೆ ಕಳುಹಿಸಲು ತಾನೇ ಶೂಟ್ ಮಾಡ್ಕೊಂಡ -ಕೊನೆಗೆ ಕಂಬಿ ಹಿಂದೆ ತಾನೇ ನಿಂತ

2 days ago

ನವದೆಹಲಿ: 32 ವರ್ಷದ ವ್ಯಕ್ತಿಯೊಬ್ಬ ಸಹೋದರನನ್ನು ಜೈಲಿಗೆ ಕಳುಹಿಸಲು ತನ್ನನ್ನು ತಾನೇ ತಾನೇ ಶೂಟ್ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಆರೋಪಿ ಅಜಯ್ (32), ಈತ ತನ್ನ ಪೂರ್ವಜರ ಆಸ್ತಿಗೆ ತಾನೊಬ್ಬನೆ ಯಜಮಾನ ಆಗಬೇಕೆಂದು ಆಸೆ ಪಟ್ಟಿದ್ದನು. ಇದಕ್ಕೆ ಅಡ್ಡವಾಗಿದ್ದ ಆತನ...

ವಾಟ್ಸಪ್ ಗ್ರೂಪ್ ನಿಂದ ರಿಮೂ ಮಾಡಿದಕ್ಕೆ ಆಡ್ಮಿನ್ ಗೆ ಚಾಕು ಇರಿತ!

2 days ago

ಪುಣೆ: ವಾಟ್ಸಪ್ ಗ್ರೂಪ್ ನಿಂದ ರಿಮೂ ಮಾಡಿದ್ದಕ್ಕೆ ಗ್ರೂಪ್ ಆಡ್ಮಿನ್ ಗೆ ಚಾಕುನಿಂದ ಇರಿದ ಘಟನೆ ಅಹ್ಮದ್ ನಗರದಲ್ಲಿ ನಡೆದಿದೆ. ಇಲ್ಲಿನ ಕೃಷಿ ಕಾಲೇಜು ವಿದ್ಯಾರ್ಥಿಗಳ ನಡುವೆ ಈ ಘಟನೆ ನಡೆಸಿದ್ದು, ಕಾಲೇಜಿನ ವಾಟ್ಸಪ್ ಗ್ರೂಪ್ ಆಡ್ಮಿನ್ ಚೈತನ್ಯ ಶಿವಾಜಿ ಭೋರ್...

ಫೇಸ್‍ ಬುಕ್ ಗೆಳತಿಗಾಗಿ ಸುಪಾರಿ ಕೊಟ್ಟು ಪೋಷಕರ ಹತ್ಯೆಗೈದ!

2 days ago

ನವದೆಹಲಿ: 26 ವರ್ಷದ ಯುವಕನೊಬ್ಬ ಫೇಸ್‍ ಬುಕ್ ಗೆಳತಿಗಾಗಿ ಸುಪಾರಿ ನೀಡಿ ಪೋಷಕರನ್ನು ಹತ್ಯೆ ಮಾಡಿಸಿರುವ ಘಟನೆ ದೆಹಲಿಯ ಜಾಮಿಯಾ ನಗರದಲ್ಲಿ ನಡೆದಿದೆ. ಆರೋಪಿ ಅಬ್ದುಲ್ಲಾ ರೆಹಮಾನ್ ಪೋಷಕರಿಗೆ ಒಬ್ಬನೆ ಮಗನಾಗಿದ್ದು, ರೆಹಮಾನ್ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದನು. ಆದರೆ...

ನಾನು ಯಾರಿಗೂ ಭಾರವಾಗಿರಬಾರದು, ಕಷ್ಟ ಕೊಡಲ್ಲ- ಡೆತ್ ನೋಟ್ ಬರೆದಿಟ್ಟು ಬಿಕಾಂ ವಿದ್ಯಾರ್ಥಿನಿ ನೇಣಿಗೆ ಶರಣು

2 days ago

ಮಡಿಕೇರಿ: ಡೆತ್ ನೋಟ್ ಬರೆದಿಟ್ಟು ಬಿಕಾಂ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನಡೆದಿದೆ. ಪಟ್ಟಣದ ಶಾಂತಿನಗರದ ಶ್ರೀನಿವಾಸ್ ಹಾಗೂ ವಿಜಯ ದಂಪತಿಯ ಪುತ್ರಿ ಶಾಲಿನಿ(19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಯಾರೂ ಇಲ್ಲದ ವೇಳೆ ಮನೆಯ ಕೊಠಡಿಯಲ್ಲಿ ಸೀರೆಯಿಂದ...

ಶೌಚಾಲಯಕ್ಕೆ ಹೋಗಿ ಬರೋದಾಗಿ ಹೇಳಿ ಮಗು ಕೊಟ್ಟು ಪಾರಾರಿ!

2 days ago

ಧಾರವಾಡ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಕ್ಕಳ ಕಳ್ಳರ ಹಾವಳಿ ಜೋರಾಗಿದೆ. ಪೋಷಕರು ತಮ್ಮ ಮಕ್ಕಳು ಎಲ್ಲಿ ಕಳ್ಳತನವಾಗಿ ಬಿಡುತ್ತಾರೋ ಎಂಬ ಆತಂಕದಲ್ಲಿದ್ದಾರೆ. ಆದರೆ ಧಾರವಾಡದಲ್ಲಿ ತಾಯಿಯೊಬ್ಬಳು ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಅಪರಿಚಿತ ಮಹಿಳೆಯೊಬ್ಬರ ಕೈಗೆ ತನ್ನ ಮಗುವನ್ನ ಕೊಟ್ಟು ಪರಾರಿಯಾಗಿದ್ದಾಳೆ....