Tuesday, 26th September 2017

16 hours ago

ಮುಂಬೈನಿಂದ ಅಬುಧಾಬಿಗೆ ಹೋಗಿದ್ದ ಜಗತ್ತಿನ ದಢೂತಿ ಮಹಿಳೆ ಎಮಾನ್ ಇನ್ನಿಲ್ಲ

ಅಬುದಾಭಿ: ವಿಶ್ವದ ದಢೂತಿ ಮಹಿಳೆ ಎನಿಸಿಕೊಂಡಿದ್ದ ಎಮಾನ್ ಅಹ್ಮದ್ ಅಬುದಾಭಿಯಲ್ಲಿ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ತನ್ನ 37ನೇ ಹುಟ್ಟುಹಬ್ಬ ಆಚರಿಸಿಕೊಂಡ ಒಂದು ವಾರದಲ್ಲೇ ಎಮಾನ್ ಮೃತಪಟ್ಟಿದ್ದಾರೆ. ಇಲ್ಲಿನ ಬುರ್ಜೀಲ್ ಆಸ್ಪತ್ರೆಯ ಅಧಿಕಾರಿಗಳು ಎಮಾನ್ ಸಾವನ್ನು ದೃಢಪಡಿಸಿದ್ದಾರೆ. ಹೃದಯ ಕಾಯಿಲೆ, ಕಿಡ್ನಿ ವೈಫಲ್ಯ ಹಾಗೂ ಇನ್ನಿತರೆ ಸಂಬಂಧಿತ ರೋಗದಿಂದ ಎಮಾನ್ ಸಾವನ್ನಪ್ಪಿದ್ದಾರೆಂದು ಹೇಳಿದ್ದಾರೆ. ಎಮಾನ್ ಯುನೈಟೆಡ್ ಅರಬ್ ಎಮಿರೈಟ್ಸ್‍ಗೆ ಬಂದಾಗಿನಿಂದ ಸುಮಾರು 20 ವಿವಿಧ ತಜ್ಞ ವೈದ್ಯರ ತಂಡ ಆಕೆಯ ಆರೋಗ್ಯ ಸ್ಥಿತಿಯ ವಿಚಾರಣೆ ಮಾಡುತ್ತಿದ್ದರು. ಎಮಾನ್ ಕುಟುಂಬಕ್ಕೆ […]

19 hours ago

ಪದ್ಮಾವತಿಯ ಪತಿ ಮಹಾರಾವಲ್ ರತನ್ ಸಿಂಗ್ ಫಸ್ಟ್ ಲುಕ್ ಔಟ್!

ಮುಂಬೈ: ಬಾಲಿವುಡ್‍ನ ಭಾರತೀಯ ಐತಿಹಾಸಿಕ ಕಥಾ ಹಂದರವುಳ್ಳ `ಪದ್ಮಾವತಿ’ ಸಿನಿಮಾದ ಒಂದೊಂದೆ ಲುಕ್‍ಗಳು ಬಿಡುಗಡೆಯಾಗುತ್ತಿವೆ. ಗುರುವಾರ ರಾಣಿ ಪದ್ಮಾವತಿ ಪಾತ್ರದಲ್ಲಿ ಅಭಿನಯಿಸುತ್ತಿರುವ ದೀಪಿಕಾ ಪಡುಕೋಣೆ ಅವರ ಪದ್ಮಾವತಿಯ ಫಸ್ಟ್ ಲುಕ್ ಅನ್ನು ಚಿತ್ರತಂಡ ಅಧಿಕೃತವಾಗಿ ಬಿಡುಗಡೆ ಮಾಡಿತ್ತು. ಇಂದು ಪದ್ಮಾವತಿಯ ಪತಿಯಾಗಿ ಮಹಾರಾವಲ್ ರತನ್ ಸಿಂಗ್‍ನ ಪಾತ್ರದಲ್ಲಿ ನಟಿಸುತ್ತಿರುವ ಶಾಹಿದ್ ಕಪೂರ್ ಅವರ ಫಸ್ಟ್ ಲುಕ್...

ನನಗೂ ಒಬ್ಬ ಬಾಯ್ ಫ್ರೆಂಡ್ ಇದ್ದಾರೆ: ಪ್ರಿಯಾಂಕಾ ಚೋಪ್ರಾ

5 days ago

ಮುಂಬೈ: ಬಾಲಿವುಡ್‍ನ ಬಹು ಬೇಡಿಕೆಯ ನಟಿ ಹಾಗೂ  ಮಲ್ಟಿಟಾಸ್ಕ್ ಗಳನ್ನು ಪ್ರೀತಿಸುವ ಬೆಡಗಿ ಪ್ರಿಯಾಂಕಾ ಚೋಪ್ರಾ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ನನಗೂ ಒಬ್ಬ ಬಾಯ್ ಫ್ರೆಂಡ್ ಇದಾರೆ ಎಂದು ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಇತ್ತೀಚಿಗೆ ಯುನಿಸೆಫ್ ರಾಯಭಾರಿಯಾಗಿ ಆಗಮಿಸಿದ್ದ ಅವರು ಸಿರಿಯಾದಿಂದ ನಿರಾಶ್ರಿತ ಮಕ್ಕಳನ್ನು ಭೇಟಿ...

ರಿಯಾ ಸೇನ್ ತನ್ನ ಟ್ರ್ಯಾಕ್ ಪ್ಯಾಂಟ್ ಬಿಚ್ಚಿದ್ದೇಕೆ? ನಿಶಾಂತ್ ಮಲ್ಕಾನಿ ಹೇಳಿದ್ದು ಹೀಗೆ

6 days ago

ಮುಂಬೈ: ಬಾಲಿವುಡ್‍ಗೆ ಈಗ ತಾನೆ ಎಂಟ್ರಿ ಕೊಡುತ್ತಿರುವ ನಟ ನಿಶಾಂತ್ ಮಲ್ಕಾನಿಗೆ ಸೆಕ್ಸಿ ಹಾಟೆಸ್ಟ್ ಬ್ಯೂಟಿ ರಿಯಾ ಸೇನ್ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ ಎಂಬ ಸುಳಿದಾಡುತ್ತಿತ್ತು. ಸದ್ಯ ಈ ಗಾಸಿಪ್ ಸುದ್ದಿಗೆ ನಟ ನಿಶಾಂತ್ ಸ್ಪಷ್ಟನೆ ನೀಡಿದ್ದಾರೆ. ರಾಗಿಣಿ ಎಂಎಂಎಸ್ ರಿಟರ್ನ್...

ತನ್ನ ಮೇಲೂ ಲೈಂಗಿಕ ದೌರ್ಜನ್ಯವೆಸಗಿದ್ದ ರೇಪಿಸ್ಟ್ ಮಗನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ಳು!

7 days ago

ಮುಂಬೈ: ಮಾದಕ ವ್ಯಸನಿಯಾಗಿದ್ದ ಹಾಗೂ ತನ್ನ ಮೇಲೂ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಮಗನಿಂದ ಬೇಸತ್ತ ತಾಯಿ ಸುಪಾರಿ ಕೊಟ್ಟು ಆತನನ್ನು ಕೊಲೆ ಮಾಡಿಸಿದ್ದಾಳೆ. ಇಲ್ಲಿನ ಪಶ್ಚಿಮ ಭಾಯಂದರ್ ನಿವಾಸಿಯಾದ ಮಹಿಳೆ 50 ಸಾವಿರ ರೂ. ಕೊಟ್ಟು ಆಗಸ್ಟ್ 20ರಂದು ಮಗನನ್ನು ಕೊಲೆ ಮಾಡಿಸಿದ್ದಾಳೆ....

ಇಬ್ಬರು ಹೆಣ್ಣುಮಕ್ಕಳ ಜೊತೆ ದಂಪತಿ ವಿಷ ಸೇವನೆ- ತಂದೆ, ಮಗಳು ಸಾವು

7 days ago

ಮುಂಬೈ: ಒಂದೇ ಕುಟುಂಬದ ನಾಲ್ವರು ಇಂದು ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮುಂಬೈನಲ್ಲಿ ನಡೆದಿದ್ದು, ತಂದೆ ಹಾಗೂ ಮಗಳು ಸಾವನ್ನಪ್ಪಿದ್ದಾರೆ. ಮನೀಷ್(30) ಹಾಗೂ ಪುತ್ರಿ ಪ್ರಗತಿ (7) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಅಲ್ಲದೇ ಪತ್ನಿ ಪಿಂಕಿ(28) ಹಾಗೂ...

ಭೂಗತ ಪಾತಕಿ ದಾವೂದ್ ಬೇಟೆಯತ್ತ ಹೆಜ್ಜೆ – ಮುಂಬೈನಲ್ಲಿ ಡಾನ್ ತಮ್ಮ ಅರೆಸ್ಟ್

7 days ago

ಮುಂಬೈ: ಇಂಗ್ಲೆಂಡ್‍ನಲ್ಲಿರುವ ಆಸ್ತಿ-ಪಾಸ್ತಿ ಜಪ್ತಿ ಬೆನ್ನಲ್ಲೇ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಮತ್ತೊಂದು ಶಾಕ್ ಸಿಕ್ಕಿದೆ. ಸುಲಿಗೆ ಪ್ರಕರಣದಲ್ಲಿ ದಾವೂದ್ ತಮ್ಮ ಇಕ್ಬಲ್ ಕಸ್ಕರ್‍ನನ್ನು ಮಹಾರಾಷ್ಟ್ರದ ಥಾಣೆ ಪೊಲೀಸರು ಬಂಧಿಸಿದ್ದಾರೆ. ಮುಂಬೈನ ನಾಗ್‍ಪಾಡಾದಲ್ಲಿರುವ ಮನೆಯಿಂದ ಎನ್‍ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ನೇತೃತ್ವದ...

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ಮಾಪಕ ಆನಂದ ಅಪ್ಪುಗೋಳ್ ಅರೆಸ್ಟ್

1 week ago

ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಹಕಾರಿ ಬ್ಯಾಂಕ್ ದಿವಾಳಿ ಪ್ರಕರಣದ ಹಿನ್ನೆಯಲ್ಲಿ ತಲೆಮರೆಸಿಕೊಂಡಿದ್ದ ಖ್ಯಾತ ನಿರ್ಮಾಪಕ ಆನಂದ ಅಪ್ಪುಗೋಳ್ ಅವರನ್ನು ಮುಂಬೈನಲ್ಲಿ ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕರ ಠೇವಣಿ ಹಣವನ್ನ ಸಕಾಲಕ್ಕೆ ಪಾವತಿಸಿಲ್ಲ. ಹೀಗಾಗಿ ಠೇವಣಿದಾರರಿಗೆ ನಂಬಿಕೆ ದ್ರೋಹ, ಮೋಸ, ವಂಚನೆ ಮಾಡಿದ...