Saturday, 21st April 2018

Recent News

1 day ago

ಕೆರೆಯಲ್ಲಿ ಬಿದ್ದು ಅಕ್ಕ-ತಂಗಿ ಸಾವು- ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲು!

ಕೋಲಾರ/ಚಿತ್ರದುರ್ಗ: ಕೆರೆಯಲ್ಲಿ ಬಿದ್ದು ಅಕ್ಕ-ತಂಗಿ ಸಾವನ್ನಪ್ಪಿದ ಘಟನೆ ಕೋಲಾರ ತಾಲೂಕಿನ ಹೊಳಲಿ ಗ್ರಾಮದಲ್ಲಿ ನಡೆದಿದೆ. ಭವ್ಯ (10) ಮತ್ತು ಶಿಲ್ಪಾ(7) ಮೃತ ಸಹೋದರಿಯರು. ಶಾಲೆಗೆ ರಜೆ ಹಿನ್ನೆಲೆಯಲ್ಲಿ ಗುರುವಾರ ಆಟವಾಡಲು ಹೋದಾಗ ಇಬ್ಬರು ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಶಿಲ್ಪಾಳ ಶವ ದೊರಕಿದ್ದು, ಭವ್ಯ ಶವ ಪತ್ತೆಗೆ ಅಗ್ನಿ ಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಕೋಲಾರ ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲಾದ ಘಟನೆ ಚಿತ್ರದುರ್ಗ […]

2 weeks ago

3 ತಿಂಗಳ ಹಿಂದೆ ಮದ್ವೆಯಾಗಿದ್ದ ದಂಪತಿ ಜೊತೆ ಇಬ್ಬರು ಮಕ್ಕಳು ಕೆರೆಯಲ್ಲಿ ಮುಳುಗಿ ಸಾವು

ರಾಮನಗರ: ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ರಾಮನಗರ ತಾಲೂಕಿನ ಚಿಕ್ಕೇನಹಳ್ಳಿ ಕೆರೆಯಲ್ಲಿ ನಡೆದಿದೆ. ಶೇಖರ್ (39), ಸುಮಾ(28), ಹಂಸಾ (7) ಮತ್ತು ಧನು (8) ಮೃತ ದುರ್ದೈವಿಗಳು. ಮೂಲತಃ ಚನ್ನಪಟ್ಟಣದ ಹನುಮಂತ ನಗರದ ನಿವಾಸಿಗಳಾದ ಶೇಖರ್ ಮತ್ತು ಸುಮಾ ಇಬ್ಬರು ಮೂರು ತಿಂಗಳ ಹಿಂದೆ ಮದುವೆ ಆಗಿದ್ದರು. ಮದುವೆಯಾದ ಹೊಸತರಲ್ಲಿ ಸುಮಾ...

ಹಬ್ಬಕ್ಕೆ ಸ್ನಾನ ಮಾಡಲು ಕೆರೆಗೆ ತೆರಳಿದ ಐವರು ಬಾಲಕರ ದುರ್ಮರಣ!

1 month ago

ಹೈದರಾಬಾದ್: ಯುಗಾದಿ ಹಬ್ಬದ ದಿನದಂದೇ ಕೆರೆಯಲ್ಲಿ ಮುಳುಗಿ ಐವರು ಬಾಲಕರು ಮೃತಪಟ್ಟಿರುವ ಘಟನೆ ನಾಲ್ಗಾಂಡ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಸಂತೋಷ್ (7), ರಾಕೇಶ್ (5), ನವ್ದೀಪ್ (6), ಸತ್ವಿಕ್ (7) ಮತ್ತು ಸರ್ದಾರ್ ಎಂದು ಗುರುತಿಸಲಾಗಿದೆ. ಈ ಐವರು ಬಾಲಕರು ಕೋಂಡಮಲ್ಲೆಪಲ್ಲಿ...

ಮಂಡ್ಯದಲ್ಲಿ ಮೀನುಗಾರರ ಬಲೆಗೆ ಬಿತ್ತು 1ಕೆ.ಜಿ ತೂಕದ ಏರೋಪ್ಲೇನ್ ಮಾದರಿಯ ಮೀನು

1 month ago

ಮಂಡ್ಯ: ಜಿಲ್ಲೆಯ ಮದ್ದೂರು ಸಮೀಪದ ಮದ್ದೂರಮ್ಮ ಕೆರೆಯಲ್ಲಿ ಅಪರೂಪದ ಏರೋಪ್ಲೇನ್ ಮಾದರಿಯ ಮೀನೊಂದು ಮೀನುಗಾರರ ಬಲೆಗೆ ಸಿಲುಕಿದೆ. ದೇಶಹಳ್ಳಿ ಗ್ರಾಮದ ಮೀನುಗಾರ ನಾಗರಾಜ ನಾಯಕ್ ಅವರು ಎಂದಿನಂತೆ ಮೀನು ಹಿಡಿಯಲು ಕೆರೆಯಲ್ಲಿ ಬಲೆ ಬೀಸಿದ್ದರು. ಮಧ್ಯಾಹ್ನ ಮೀನಿನ ಬಲೆಯನ್ನು ಎಳೆದು ಪರೀಕ್ಷಿಸಿದಾಗ,...

ಈಜಲು ತೆರಳಿದ್ದ ಬಾಲಕರು ಕೆರೆಯಲ್ಲಿ ಮುಳುಗಿ ಸಾವು

1 month ago

ಹಾವೇರಿ: ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲಾದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ನಾಗನೂರು ಕೆರೆಯಲ್ಲಿ ನಡೆದಿದೆ. ಮೃತ ಬಾಲಕರನ್ನು ಸಾಹಿಲ್ ಹಾವೇರಿ(14) ಮತ್ತು ಖಾಜಾ ಮಂತ್ರೋಡಿ(14) ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಪಟ್ಟಣದ ಮೌಲಾಲಿ ಬಡಾವಣೆಯ ನಿವಾಸಿಗಳು ಎನ್ನಲಾಗಿದೆ. ಮಧ್ಯಾಹ್ನ...

ಕೆರೆಯಲ್ಲಿ ಈಜಲು ಹೋದ ಹುಣಸೂರಿನ 10 ತರಗತಿಯ ನಾಲ್ವರು ಮಕ್ಕಳು ಜಲಸಮಾಧಿ!

1 month ago

ಮೈಸೂರು: ಕೆರೆಗೆ ಈಜಲು ಹೋದ ಹತ್ತನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರಂತ ಘಟನೆ ಹುಣಸೂರು ತಾಲ್ಲೂಕಿನ ಹೈರಿಗೆ ಗ್ರಾಮದಲ್ಲಿ ನಡೆದಿದೆ. ಮಂಗಳವಾರ ಮಧ್ಯಾಹ್ನ ಹೈರೆಗೆ ಗ್ರಾಮದ ಕೆರೆಯಲ್ಲಿ ಈಜಾಡಲು ಹೋಗಿದ್ದ ನಾಲ್ವರು ಮಕ್ಕಳು ನಾಪತ್ತೆಯಾಗಿದ್ದರು. ಘಟನೆ ನಡೆದ...

ಮೊಸಳೆಗಳಿದ್ದ ಕೆರೆಯೊಳಗೆ ಜೀವಂತ ನಾಯಿಮರಿಯನ್ನ ಎಸೆದ ಕ್ರೂರಿ

2 months ago

ಜಕಾರ್ತಾ: ನಿರ್ದಯಿ ವ್ಯಕ್ತಿಯೊಬ್ಬ ಮೊಸಳೆಗಳಿಂದ ತುಂಬಿದ್ದ ಕೆರೆಯೊಳಗೆ ಜೀವಂತ ನಾಯಿಮರಿಯನ್ನ ಎಸೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ ಎನ್ನಲಾಗಿದೆ. ವ್ಯಕ್ತಿ ಬ್ಯಾಗಿನಿಂದ ನಾಯಿಮರಿಯನ್ನ ತೆಗೆದುಕಂಡು ನದಿಯ ಕಡೆಗೆ ಹೋಗಿದ್ದಾನೆ. ಆತ ನಾಯಿಮರಿಯ ಕತ್ತನ್ನು...

ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಕೆರೆಯಲ್ಲಿ ಶವವಾಗಿ ಪತ್ತೆ

3 months ago

ಬೆಂಗಳೂರು: ಮೂರು ದಿನದ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ. 8ನೇ ತರಗತಿ ಓದುತ್ತಿದ್ದ ರಾಣಿ ಎಂಬಾಕೆ ಮೂರು ದಿನದ ಹಿಂದೆ ಸುಭಾಷ್ ನಗರದಿಂದ ನಾಪತ್ತೆಯಾಗಿದ್ದಳು. ಆದ್ರೆ ಶನಿವಾರ ಹೊಸರೋಡ್ ಜಂಕ್ಷನ್ ಬಳಿಯ...