Thursday, 19th October 2017

Recent News

4 days ago

ಕೊಪ್ಪಳದಲ್ಲಿ ಕರಡಿ ದಾಳಿಗೊಳಗಾಗಿ ಮಹಿಳೆ ಗಂಭೀರ

ಕೊಪ್ಪಳ: ಮಹಿಳೆಯೊಬ್ಬರ ಮೇಲೆ ಕರಡಿ ದಾಳಿ ಮಾಡಿ ಗಂಭೀರ ಗಾಯಗೊಳಿಸಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ. ಗಂಗಾವತಿ ತಾಲೂಕಿನ ಮುಸಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದಾಳಿಗೊಳಗಾದ ಮಹಿಳೆಯನ್ನು ಹನುಮಮ್ಮ ದ್ಯಾಮಣ್ಣ ಭೋವಿ ಎಂದು ಗುರುತಿಸಲಾಗಿದೆ. ಕರಡಿ ದಾಳಿ ಸುದ್ದಿ ತಿಳಿದು ಗ್ರಾಮಸ್ಥರು ಗಂಭೀರ ಗಾಯಗೊಂಡ ಮಹಿಳೆಯನ್ನು ರಕ್ಷಿಸಿ, ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. 3 ಕರಡಿಗಳು ಗ್ರಾಮದ ಪಕ್ಕದಲ್ಲಿನ ಹೊಲದಲ್ಲೇ ಅಡಗಿ ಕುಳಿತಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕರಡಿ ಹಿಡಿಯಲು ಮುಂದಾಗದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ […]

7 days ago

ಪತಿ, ಅತ್ತೆ, ಮಾವನ ಕಿರುಕುಳದಿಂದ ವಿಷ ಸೇವನೆ- ಸಾವು ಬದುಕಿನ ಮಧ್ಯೆ ಸೊಸೆ ಹೋರಾಟ

ಕೊಪ್ಪಳ: ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಗೃಹಿಣಿಯೊಬ್ಬರು ವಿಷ ಸೇವಿಸಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ. ಜಿಲ್ಲೆಯ ಯಲಬುರ್ಗಾ ಬೋದೂರು ಗ್ರಾಮದ ಚೆನ್ನಬಸವ ಎಂಬವರಿಗೆ ಹಿರೇಹರನಹಳ್ಳಿಯ ನಾಗರತ್ನಾ ಎಂಬವರನ್ನು ಒಂದೂವರೆ ವರ್ಷದ ಹಿಂದೆ ಮದ್ವೆ ಮಾಡಿಕೊಡಲಾಗಿತ್ತು. ಆದ್ರೆ, ನಾಗರತ್ನಗೆ ಅತ್ತೆ ಅಂಬವ್ವ, ಮಾವ ಸಿದ್ದಪ್ಪ, ಪತಿ ಚೆನ್ನಬಸವ ಮೈಮೇಲೆ ಬರೆ...

ನಿಲ್ಲದ ಜನಪ್ರತಿನಿಧಿಗಳ ಬೆಂಬಲಿಗರ ಅಟ್ಟಹಾಸ-ಶಹಾಪುರದಲ್ಲಿ ವಿಷಕುಡಿದ ಮಹಿಳೆ, ಕೊಪ್ಪಳದಲ್ಲಿ ಹಲ್ಲೆ

1 week ago

ಯಾದಗಿರಿ: ರಾಜ್ಯದಲ್ಲಿ ಜನಪ್ರತಿನಿಧಿಗಳ ದಬ್ಬಾಳಿಕೆ ಜೋರಾಗಿದೆ. ಒಂದು ಕಡೆ ಶಾಸಕರ ಕಿರುಕುಳಕ್ಕೆ ಬೇಸತ್ತು ಮಹಿಳೆ ವಿಷಸೇವಿಸಿದ್ರೆ, ಇನ್ನೊಂದು ಕಡೆ ಶಾಸಕರ ಬೆಂಬಲಿಗನ ಹಲ್ಲೆಗೆ ನೊಂದು ಮನೆ ಮಾಲೀಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಶಹಾಪೂರದ ಕೆಜೆಪಿ ಶಾಸಕ ಗುರು ಪಾಟೀಲ್ ಕಿರುಕುಳಕ್ಕೆ ನೊಂದು ಯಾದಗಿರಿಯ...

ಕಾಲು ಜಾರಿ ಕೆಂಡದ ರಾಶಿಗೆ ಬಿದ್ದ ಭಕ್ತ- ರಕ್ಷಿಸಲು ಹೋದ ಸಹಭಕ್ತನಿಗೂ ಗಂಭೀರ ಗಾಯ

1 week ago

ಕೊಪ್ಪಳ: ಕೌಡೇಪೀರ ಕೆಂಡದಲ್ಲಿ ಬಿದ್ದು ಇಬ್ಬರಿಗೆ ಸುಟ್ಟ ಗಾಯವಾಗಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ. ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದಲ್ಲಿ ಇಂದು ನಸುಕಿನ ಜಾವ ಈ ಘಟನೆ ಸಂಭವಿಸಿದೆ. ಚಿಕ್ಕ ಬೆಣಕಲ್ ಗ್ರಾಮದ ಖಾದರ್ ಸಾಬ್ ಹಾಗೂ ಜಮಪೂರ ಗ್ರಾಮದ ಖಾಜಾಸಾಬ್ ಗಾಯಗೊಂಡವರು....

ಕೊಪ್ಪಳದಲ್ಲಿ ಡೋಂಗಿ ಬಾಬಾ ಅರೆಸ್ಟ್: 56 ಲಕ್ಷ ರೂ. ಚಿನ್ನಾಭರಣ ವಶ

1 week ago

ಕೊಪ್ಪಳ: ಅಮಾಯಕ ಜನರಿಗೆ ಮಂಕುಬೂದಿ ಎರಚಿ ವಂಚಿಸುತ್ತಿದ್ದ ಡೋಂಗಿ ಬಾಬಾನನ್ನ ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ. ಯಾರಬ್ ಬಂಧಿತ ಆರೋಪಿ. ಬಂಧಿತನಿಂದ ಪೊಲೀಸರು 56 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ನಿಮ್ಮ ಮನೆಯಲ್ಲಿ ನಿಧಿಯಿದ್ದು ಪೂಜೆ ಮಾಡಿ ತೆಗೆದು ಕೊಡುವುದಾಗಿ ಹೇಳಿ...

ಪತಿ ಮಾಡಿದ ರಾಕ್ಷಸ ಕೃತ್ಯದಿಂದ ಪತ್ನಿಗೆ ನಿತ್ಯ ನರಕಯಾತನೆ- ಕೊಪ್ಪಳದಲ್ಲೊಂದು ಮನಕಲಕುವ ಘಟನೆ

2 weeks ago

ಕೊಪ್ಪಳ: ಇಲ್ಲೊಬ್ಬ ಪತಿರಾಯ ಪತ್ನಿ ಪಾಲಿಗೆ ರಾಕ್ಷಸನಾಗಿದ್ದಾನೆ. ರಾಕ್ಷಸ ಪತಿ ಮಾಡಿದ ಕೃತ್ಯಕ್ಕೆ ಮಹಿಳೆಯೊಬ್ಬರು ಇದೀಗ ನಿತ್ಯ ನರಕಯಾತನೆ ಅನುಭವಿಸುತ್ತಿರೋ ಘಟನೆ ಕೊಪ್ಪಳದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕೊಪ್ಪಳ ತಾಲೂಕಿನ ಬೂದಗುಂಪಾ ಗ್ರಾಮದ ನಿವಾಸಿಯಾಗಿರೋ ಸುಜಾತಾಗೆ ತಾನು ಕಟ್ಟಿಕೊಂಡ ಪತಿಯೇ ಮೈ...

ಪ್ರೀತಿಸಿ ಮದುವೆಯಾದ ಜೋಡಿಗೆ ಗ್ರಾಮದಿಂದ ಬಹಿಷ್ಕಾರ

4 weeks ago

ಕೊಪ್ಪಳ: ಪ್ರೀತಿಸಿ ಮದುವೆಯಾದ ಜೋಡಿಗೆ ಗ್ರಾಮದಿಂದ ಬಹಿಷ್ಕಾರ ಹಾಕಿದ ಘಟನೆ ತಡವಾಗಿ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಡ್ಡಿರಾಂಪೂರ ನಿವಾಸಿಗಳಾದ ಪರಶುರಾಮ್ ಮತ್ತು ಸ್ವರೂಪಾರಾಣಿ ದಂಪತಿಯನ್ನ ಕಳೆದ ಎರಡು ತಿಂಗಳನಿಂದ ಗ್ರಾಮದಿಂದ ಬಹಿಷ್ಕಾರ ಹಾಕಿದ್ದಾರೆ. ಬಹಿಷ್ಕಾರ ಹಾಕಿದ್ದರಿಂದ...

ರೇಷನ್ ಕೊಡಲ್ಲ, ಸಾಲ ರಿನೀವಲ್ ಆಗಲ್ಲ- ಕಾಂಗ್ರೆಸ್ ಸಮಾವೇಶಕ್ಕೆ ಬರಲ್ಲ ಎಂದವರಿಗೆ ಬೆದರಿಕೆ

4 weeks ago

ಕೊಪ್ಪಳ: ಸರ್ಕಾರದ ಸಮಾವೇಶಕ್ಕೆ ಜನರನ್ನು ಕರೆತರಲು ಕೈ ಪಾಳೆಯ ಕಸರತ್ತು ನಡೆಸಿದೆ. ಕಾಂಗ್ರೆಸ್ ಸಮಾವೇಶಕ್ಕೆ ಬರಲ್ಲ ಎಂದ ಜನರಿಗೆ ಕಾಂಗ್ರೆಸ್ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ. ಇಂದು ಕೊಪ್ಪಳದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶ ನಡೆಯುತ್ತಿದ್ದು, ಈ ಸಮಾವೇಶಕ್ಕೆ ಬರ್ಲಿಲ್ಲ ಅಂದ್ರೆ...