Friday, 15th December 2017

Recent News

3 days ago

ಸೊಳ್ಳೆ ಬತ್ತಿ ಹಚ್ಚಿಕೊಂಡು ಲಾರಿಯಲ್ಲಿ ಮಲಗಿದ್ದ ಚಾಲಕ ಸಜೀವ ದಹನ

ಬೆಂಗಳೂರು: ನಸುಕಿನ ಜಾವದಲ್ಲಿ ಕಂಟೈನರ್ ಲಾರಿಯೊಂದು ಹೊತ್ತಿ ಉರಿದ ಪರಿಣಾಮ ಚಾಲಕ ಸಜೀವ ದಹನವಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದೊಡ್ಡೇರಿ ಗ್ರಾಮದ ಬಳಿ ನಡೆದಿದೆ. ಘಟನೆಯಲ್ಲಿ ರಾಜಸ್ಥಾನ ಮೂಲದ ಲಾರಿ ಚಾಲಕ ಸುರೆಂದರ್ ಸಾವನ್ನಪ್ಪಿದ್ದಾರೆ. ರಾತ್ರಿ ಪಾರ್ಕಿಂಗ್ ಲಾಟ್ ನಲ್ಲಿ ಲಾರಿ ನಿಲ್ಲಿಸಿದ್ದ ಸುರೆಂದರ್, ಮಲಗುವ ಮುನ್ನ ಸೊಳ್ಳೆ ಬತ್ತಿ ಹಚ್ಚಿಕೊಂಡು ಮಲಗಿದ್ದಾರೆ. ಸೊಳ್ಳೆ ಬತ್ತಿಯ ಕಿಡಿಯಿಂದ ಲಾರಿ ಧಗಧಗನೆ ಹೊತ್ತಿ ಉರಿದಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಘಟನೆ […]

6 days ago

ವಿಡಿಯೋ: ರಸ್ತೆ ದಾಟುವಾಗ ಟ್ರಕ್ ಕೆಳಗೆ ಸಿಲುಕಿದ್ರೂ ಮಹಿಳೆ ಪಾರು!- ಡ್ರೈವರ್‍ಗೆ ಭೇಷ್ ಅಂದ್ರು ಜನ

ಬೀಜಿಂಗ್: ಮಹಿಳೆಯೊಬ್ಬರು ರಸ್ತೆ ದಾಟುವಾಗ ಟ್ರಕ್ ಕೆಳಗೆ ಸಿಲುಕಿದ್ರೂ ಪವಾಡ ಸದೃಶವಾಗಿ ಪಾರಾಗಿರೋ ಘಟನೆ ಚೀನಾದಲ್ಲಿ ನಡೆದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇಲ್ಲಿನ ಮಾಧ್ಯಮವೊಂದು ಫೇಸ್ ಬುಕ್ ನಲ್ಲಿ ವಿಡಿಯೋವನ್ನ ಹಂಚಿಕೊಂಡಿದೆ. ಮಹಿಳೆ ಮೊದಲು ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗಿದ್ದಾರೆ. ನಂತರ ಕೈಯಲ್ಲಿ ಏನೋ ಹಿಡಿದು ಮರಳಿ ಮತ್ತೊಂದು ಬದಿಗೆ...

ಅಪಘಾತವಾಗಿ ನಿಂತಿದ್ದ ಸಾರಿಗೆ ಬಸ್‍ಗೆ ಹಿಂಬದಿಯಿಂದ ಲಾರಿ ಡಿಕ್ಕಿ- ವಾಹನಗಳ ಮಧ್ಯೆ ಸಿಲುಕಿ ಬಸ್ ಚಾಲಕ ಸಾವು

1 week ago

ಬೆಂಗಳೂರು: ಅಪಘಾತವಾಗಿ ನಿಂತಿದ್ದ ತಮಿಳುನಾಡು ಸಾರಿಗೆ ಬಸ್‍ಗೆ ಹಿಂಬದಿಯಿಂದ ಲಾರಿ ಬಂದು ಗುದ್ದಿದ ಪರಿಣಾಮ ತಮಿಳುನಾಡು ಸಾರಿಗೆ ಬಸ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಚಂದಾಪುರ ಸಮೀಪ ನಡೆದಿದೆ. ಮೃತ ಚಾಲಕನನ್ನು ಶಿವಕುಮಾರ್(35) ಎಂದು ಗುರುತಿಸಲಾಗಿದೆ....

ಎದುರುಗಡೆ ಬರುತ್ತಿದ್ದ ವಾಹನ ತಪ್ಪಿಸಲು ಹೋಗಿ ಕ್ರೂಸರ್ ಪಲ್ಟಿ- 10 ಮಂದಿಗೆ ಗಾಯ

3 weeks ago

ಕೊಪ್ಪಳ: ಕ್ರೂಸರ್ ಪಲ್ಟಿ ಹೊಡೆದ ಪರಿಣಾಮ ಹತ್ತು ಪ್ರಯಾಣಿಕರಿಗೆ ಗಾಯವಾಗಿ ಅದೃಷ್ಟವಶಾತ್ ಭಾರಿ ದುರಂತವೊಂದು ತಪ್ಪಿರೋ ಘಟನೆ ಕೊಪ್ಪಳ ದಲ್ಲಿ ನಡೆದಿದೆ. ಕೊಪ್ಪಳ ತಾಲೂಕಿನ ದದೇಗಲ್ ಬಳಿ ಕ್ರೂಸರ್ ಪಲ್ಟಿ ಹೊಡೆದಿದೆ. ಎದುರಿಗೆ ವಾಹನವೊಂದು ಬರುತ್ತಿದ್ದಂತೆ ಅದನ್ನ ತಪ್ಪಿಸಲು ಹೋಗಿ ಕ್ರೂಸರ್...

2 ಗಂಟೆಯಾದ್ರೂ ಬಸ್ ಹೊರಡಲಿಲ್ಲ- ಪ್ರಶ್ನಿಸಿದ್ದಕ್ಕೆ ಮಹಿಳೆ ಜೊತೆ ಬಸ್ ಚಾಲಕ, ಕಂಡಕ್ಟರ್ ಕಿರಿಕ್

3 weeks ago

ಬೆಂಗಳೂರು: ಮಹಿಳಾ ಪ್ರಯಾಣಿಕರೊಬ್ಬರ ಬಳಿ ಬಸ್ ಚಾಲಕ ಮತ್ತು ಕಂಡಕ್ಟರ್ ಅನುಚಿತವಾಗಿ ನಡೆದುಕೊಂಡಿರುವ ಘಟನೆ ಬೆಂಗಳೂರಿನ ಶಾಂತಿನಗರದಲ್ಲಿ ನಡೆದಿದೆ. ಅಲಹಬಾದ್ ನಿಂದ ಬೆಂಗಳೂರಿಗೆ ಬಂದಿದ್ದ ಡಾಕ್ಟರ್ ಪಟೇಲ್ ಎನ್ನುವ ಎಂಬ ಮಹಿಳೆ ತಡರಾತ್ರಿ ಸುಮಾರು 1 ಗಂಟೆ ವೇಳೆಗೆ ನಗರದ ಶಾಂತಿನಗರ...

ಪಲ್ಟಿಯಾಗಿದ್ರಿಂದ ಲಾರಿಯ ಹಿಂಬದಿ ಕಲ್ಲುಚಪ್ಪಡಿ ಮೇಲೆ ಕುಳಿತಿದ್ದ ವ್ಯಕ್ತಿ ದುರ್ಮರಣ

4 weeks ago

ಚಿಕ್ಕಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿ ಕಲ್ಲುಚಪ್ಪಡಿಗಳನ್ನ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ, ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಘಟನೆ ಚಿಕ್ಕಬಳ್ಳಾಪುರ ನಗರದ ಹೊರವಲಯದ ಮಂಚನಬಲೆ ಸೇತುವೆ ಬಳಿ ನಡೆದಿದೆ. ಕುರ್ಲಹಳ್ಳಿ ಗ್ರಾಮದ ಅನಿಲ್ ಕುಮಾರ್ (35) ಮೃತ ವ್ಯಕ್ತಿ. ಅಪಘಾತದಲ್ಲಿ...

ಬೀದರ್ ನಲ್ಲಿ ವಾಹನ ಸವಾರನ ಮೇಲೆ ಮನಬಂದಂತೆ ಥಳಿಸಿದ ಪೊಲೀಸರು

4 weeks ago

ಬೀದರ್: ಸಿಲಿಕಾನ್ ಸಿಟಿಯಲ್ಲಿ ಎಸಿಪಿಯೊಬ್ಬರು ಹೋಟೆಲ್ ಮಾಲೀಕರಿಗೆ ಮನಬಂದಂತೆ ಥಳಿಸಿದ್ದ ಪ್ರಕರಣ ಮಾಸುವ ಮುನ್ನವೇ ವಾಹನ ಸವಾರರೊಬ್ಬರ ಮೇಲೆ ಬೀದರ್ ಪೊಲೀಸರು ಮನಬಂದಂತೆ ಥಳಿಸಿದ್ದಾರೆ. ಈ ಘಟನೆ ಬೀದರ್ ನಗರದ ಮೈಲೂರು ಕ್ರಾಸ್ ಬಳಿ ನಡೆದಿದೆ. ವಾಹನ ಸವಾರನ ಮೇಲೆ ಹಲ್ಲೆ...

ರೋಗಿ ಇಲ್ಲದಿದ್ರೂ ಸೈರನ್ ಹಾಕ್ಕೊಂಡು ವೇಗವಾಗಿ ಬಂದು ಕಾರಿಗೆ ಗುದ್ದಿದ ಅಂಬುಲೆನ್ಸ್ ಚಾಲಕ

4 weeks ago

ತುಮಕೂರು: ನಗರದ ಅಂತರಸನಹಳ್ಳಿ ಸೇತುವೆ ಬಳಿ ಅಂಬುಲೆನ್ಸ್ ನಲ್ಲಿ ರೋಗಿಗಳು ಇಲ್ಲದೇ ಇದ್ದರೂ ವೇಗವಾಗಿ ಬಂದ ಚಾಲಕ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಆಂಬುಲೆನ್ಸ್ ಬೆಳಧರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿದ್ದು ಎಂದು ಹೇಳಲಾಗಿದೆ. ಕಾರಿಗೆ ಡಿಕ್ಕಿ ಹೊಡೆದ ಬಳಿಕ ಸ್ಥಳೀಯರು...