Monday, 20th November 2017

Recent News

1 hour ago

ಜೆಡಿಎಸ್ ಬಂಡಾಯ ಶಾಸಕರಿಂದ ಇಂದು ಶಕ್ತಿಪ್ರದರ್ಶನ – ಕೈ ಟಿಕೆಟ್‍ಗಾಗಿ ಚಲುವರಾಯಸ್ವಾಮಿ ತಂತ್ರ

ಮಂಡ್ಯ: ಜೆಡಿಎಸ್ ನಿಂದ ಅಮಾನತ್ತಾದ ಶಾಸಕ ಚಲುವರಾಯಸ್ವಾಮಿ ಇದೇ ಪ್ರಥಮ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಇಂದು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡುತ್ತಿದ್ದಾರೆ. ಸರ್ಕಾರಿ ಕಾರ್ಯಕ್ರಮವೇ ಆದರೂ ಪರೋಕ್ಷವಾಗಿ ಚೆಲುವರಾಯಸ್ವಾಮಿ ಜೆಡಿಎಸ್ ವರಿಷ್ಠರ ವಿರುದ್ಧ ನಡೆಸುತ್ತಿರುವ ಶಕ್ತಿ ಪ್ರದರ್ಶನ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಖಾಸಗಿ ವೈದ್ಯರ ವಿಧೇಯಕ ಮಂಡನೆಯನ್ನೇ ಮುಂದೂಡಲಾಗಿದೆ ಎಂಬ ಚರ್ಚೆ ಶುರುವಾಗಿದೆ. ಈಗಾಗಲೇ ನಾಗಮಂಗಲ ತಾಲೂಕಿನಲ್ಲಿ ಫ್ಲೆಕ್ಸ್ […]

17 hours ago

ಏನಯ್ಯ ಪ್ರಮೋದ್ ಬಿಜೆಪಿ ಸೇರ್ತಿಯಂತೆ- ಸಿಎಂ ಪ್ರಶ್ನೆಗೆ ಸಚಿವ ಉತ್ತರಿಸಿದ್ದು ಹೀಗೆ

ಮಂಗಳೂರು: ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರುತ್ತಾರೆ ಎಂಬ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಸಂಪೂರ್ಣ ಅಲ್ಲಗಳೆದಿದ್ದಾರೆ. ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪ್ರಮೋದ್ ಈ ಬಗ್ಗೆ ನೂರು ಸಾರಿ ಸ್ಪಷ್ಟನೆ ಕೊಟ್ಟಿದ್ದಾರೆ. ಆದ್ರೂ ಬಿಜೆಪಿಯವರು ಬೇಕೆಂದೇ ಇಂಥ ಹೇಳಿಕೆ ನೀಡಿ ಪ್ರಮೋದ್ ಇಮೇಜ್ ಹಾಳು ಮಾಡುತ್ತಿದ್ದಾರೆ. ಇದು ಮಧ್ವರಾಜ್ ತೇಜೋವಧೆ ಮಾಡುವ ಯತ್ನ...

ಮಂಡ್ಯದಲ್ಲಿ ರಮ್ಯಾ ಮನೆ ಮಾಡಿದ ಗುಟ್ಟು ರಟ್ಟಾಯ್ತು!

3 days ago

ಬೆಂಗಳೂರು: ನಾನು ನಿಲ್ಲುವುದಾದ್ರೆ ಅದು ಸಂಸದೆ ಸ್ಥಾನಕ್ಕೆ ಮಾತ್ರ ಎಂದು ಮಾಜಿ ಸಂಸದೆ ರಮ್ಯಾ ಹೇಳಿದ್ದಾರೆ. ಈ ಮೂಲಕ ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಮಂಡ್ಯದಲ್ಲಿ ಮತ್ತೆ ಮನೆ ಮಾಡಿದ ಗುಟ್ಟು ರಟ್ಟಾಗಿದೆ. ಹೌದು. ರಮ್ಯಾ ಅವರು ಈ ಮಾತನ್ನು...

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕು: ಅಖಿಲೇಶ್ ಯಾದವ್

4 days ago

ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಹೆಚ್ಚಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲವು ಸಾಧಿಸಲಿ ಎಂದು ನಮ್ಮ ಕಾರ್ಯಕರ್ತರಿಗೆ ತಿಳಿಸಿದ್ದೇವೆ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ತಿಳಿಸಿದ್ದಾರೆ. ನಮ್ಮ ಪಕ್ಷದಿಂದ ಅಭ್ಯರ್ಥಿಗಳು...

`ಪಪ್ಪು’ ಬದಲಾಗಿ ಈ ಪದವನ್ನು ಬಳಸಲಿದೆ ಬಿಜೆಪಿ

4 days ago

ಗಾಂಧಿನಗರ: ಗುಜರಾತ್ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆಯಲ್ಲಿ `ಪಪ್ಪು’ ಎಂಬ ಪದವನ್ನು ಬಳಸದಂತೆ ಚುನಾವಣಾ ಆಯೋಗ ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಜಾಹೀರಾತಿನಲ್ಲಿ ‘ಯುವರಾಜ್’ ಎಂಬ ಪದವನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಯುವರಾಜ್ ಎಂಬ ಪದ ಬಳಕೆ ಮಾಡಲು ಚುನಾವಣಾ ಆಯೋಗದಿಂದ ಅನುಮತಿ...

ಚುನಾವಣೆಯಲ್ಲಿ ನಿಲ್ಲಬೇಕು ಅಂತ ವರುಣಾ ಕ್ಷೇತ್ರದಲ್ಲಿ ಕೆಲಸ ಮಾಡ್ತಿಲ್ಲ: ಯತೀಂದ್ರ

4 days ago

ಮಂಡ್ಯ: ನಾನು ಚುನಾವಣೆಗೆ ನಿಲ್ಲಬೇಕು ಅಂತಾ ವರುಣಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿಲ್ಲ. ಮುಖ್ಯಮಂತ್ರಿಗಳು ಬ್ಯೂಸಿ ಆಗಿರುವದರಿಂದ ಅವರ ಪರವಾಗಿ ವರುಣಾ ಕ್ಷೇತ್ರದ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದೇನೆ ಎಂದು ಸಿಎಂ ಪುತ್ರ ಡಾ. ಯತೀಂದ್ರ ತಿಳಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸುವ ವಿಚಾರ ಇನ್ನೂ ತೀರ್ಮಾನವಾಗಿಲ್ಲ....

ಸರ್ಕಾರಿ ಆಸ್ಪತ್ರೆ ಚೆನ್ನಾಗಿದ್ರೆ ಖಾಸಗಿ ಆಸ್ಪತ್ರೆಗೆ ಯಾರು ಹೋಗ್ತಾರೆ: ಎಚ್‍ಡಿಡಿ ಪ್ರಶ್ನೆ

5 days ago

ಹಾಸನ: ಸರ್ಕಾರಿ ಆಸ್ಪತ್ರೆ ಚೆನ್ನಾಗಿದ್ದರೆ ಖಾಸಗಿ ಆಸ್ಪತ್ರೆಗೆ ಯಾರು ಹೋಗುತ್ತಾರೆ ಎಂದು ರಾಜ್ಯ ಸರ್ಕಾರವನ್ನು ಮಾಜಿ ಪ್ರಧಾನಿ ದೇವೇಗೌಡ ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರದ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸರ್ಕಾರಕ್ಕೆ ಈಗ ಮಸೂದೆ ತರುವ...

ಬಿಜೆಪಿ ಇನ್ನ್ಮುಂದೆ `ಪಪ್ಪು’ ಎಂಬ ಪದವನ್ನು ಬಳಸುವಂತಿಲ್ಲ!

5 days ago

ಗಾಂಧಿನಗರ: ಗುಜರಾತ್ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ತನ್ನ ಜಾಹೀರಾತುಗಳಲ್ಲಿ `ಪಪ್ಪು’ ಎಂಬ ಪದವನ್ನು ಬಳಸದಂತೆ ಚುನಾವಣಾ ಆಯೋಗ ತಿಳಿಸಿದೆ. ಚುನಾವಣೆಯಲ್ಲಿ ಬಳಸುವ ಎಲ್ಲ ಜಾಹೀರಾತುಗಳ ಸ್ಕ್ರಿಪ್ಟ್ ನ್ನು ಒಂದ ತಿಂಗಳ ಮುಂಚಿತವಾಗಿಯೇ ಚುನಾವಣಾ ಆಯೋಗದ ಮಾಧ್ಯಮ ಕಮೀಟಿಗೆ ಕಳುಹಿಸಲಾಗಿತ್ತು....