Thursday, 23rd January 2020

2 months ago

ರೈತರ ಪ್ರೀತಿ ಗಿಟ್ಟಿಸಿಕೊಂಡ ರಣಹೇಡಿ!

ಮನು ಕೆ ಶೆಟ್ಟಿಹಳ್ಳಿ ನಿರ್ದೇಶನದ ರಣಹೇಡಿ ಕಳೆದ ವಾರ ಬಿಡುಗಡೆಗೊಂಡಿತ್ತು. ಅನ್ನದಾತರ ಬದುಕಿನ ಕಥೆ ಎಂದ ಮೇಲೆ ಅದರತ್ತ ಒಂದು ಆಕರ್ಷಣೆ ಇದ್ದೇ ಇರುತ್ತದೆ. ಅಷ್ಟಕ್ಕೂ ಕನ್ನಡದ ಪ್ರೇಕ್ಷಕರೂ ಕೂಡ ಇಂತಹ ನೆಲದ ಕಂಪಿನ ಕಥೆಗಳಿಗಾಗಿ ಸದಾ ಕಾತರಿಸುತ್ತಿರುತ್ತಾರೆ. ಅದಕ್ಕೆ ತಕ್ಕುದಾದ ಕಥೆಯೊಂದಿಗೆ ಬಂದ ಈ ಚಿತ್ರಕ್ಕೆ ಮೊದಲ ದಿನವೇ ಪ್ರೇಕ್ಷಕರ ಪ್ರೀತಿ ಸಿಕ್ಕಿದೆ. ಆ ನಂತರದಲ್ಲಿ ದಿನ ಕಳೆದಂತೆ ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಾ ಸಾಗಿ ಬಂದ ರಣಹೇಡಿ ಕ್ರಮೇಣ ರಾಜ್ಯದ ರೈತರ ಪ್ರೀತಿಯನ್ನೂ ಪಡೆದುಕೊಂಡಿದೆ. […]