Thursday, 21st September 2017

Recent News

1 week ago

ತಮಿಳುನಾಡು ಪೊಲೀಸರಿಂದ 20 ಕೋಟಿ ರೂ. ಆಮಿಷ: ಶಾಸಕ ಬಾಲಾಜಿ

ಮಡಿಕೇರಿ: ತಮಿಳುನಾಡು ಪೊಲೀಸರು ಪಳನಿಸ್ವಾಮಿ ಸರ್ಕಾರಕ್ಕೆ ಬೆಂಬಲ ನೀಡುವಂತೆ ಹೇಳಿದ್ದು ಮಾತ್ರವಲ್ಲದೇ 20 ಕೋಟಿ ರೂ. ಹಣವನ್ನು ನೀಡುವ ಆಮಿಷ ಒಡ್ಡಿದ್ದಾರೆ ಎಂದು ಶಾಸಕ ಬಾಲಾಜಿ ಹೇಳಿದ್ದಾರೆ. ಒಂದು ವಾರದ ಬಳಿಕ ಸೋಮವಾರಪೇಟೆಯಲ್ಲಿರುವ ಪ್ಯಾಂಡಿಟನ್ ರೆಸಾರ್ಟ್ ನಿಂದ ಹೊರಬಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ ಕರೂರು ಅರವಕುರುಚ್ಚಿ ಶಾಸಕ ಬಾಲಾಜಿ ಸೆಂದಿಲ್, ಪಳನಿಸ್ವಾಮಿ ಅವರನ್ನು ನಾವೆಲ್ಲರೂ ಸೇರಿ ಮುಖ್ಯಮಂತ್ರಿ ಮಾಡಿದ್ದೆವು. ಆದರೆ ಈಗ ಪನ್ನೀರ್ ಸೆಲ್ವಂ ಜೊತೆ ಸೇರಿ ಟಿಟಿಡಿ ದಿನಕರನ್ ಹಾಗೂ ಶಶಿಕಲಾ ಅವರಿಗೆ ದ್ರೋಹ ಎಸಗಿದ್ದಾರೆ […]

1 week ago

ಕೊಡಗಿನಲ್ಲಿ ಬೆಳ್ಳಂಬೆಳಗ್ಗೆ ನಡುಗಿದ ಭೂಮಿ- ಸತತ 2 ಬಾರಿ ಕಂಪನದ ಅನುಭವ

ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಬಲ್ಲಮಾವಟಿ ಸೇರಿದಂತೆ ಗ್ರಾಮದ ಸುತ್ತಮುತ್ತ ಇಂದು ಬೆಳಿಗ್ಗೆ 7:30 ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. 1.5ರಷ್ಟು ತೀವ್ರತೆಯ ಭೂಕಂಪನವಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ ಸುತ್ತಮುತ್ತಲಿನ ಜನರು ಭೂಕಂಪನದಿಂದ ಮನೆಯೊಳಗೆ ಇದ್ದವರು ಭಯಭೀತರಾಗಿ ಹೊರಗೆ ಓಡಿದ್ದಾರೆ. ಮಂಚ, ಟಿ.ವಿ. ಸ್ಟ್ಯಾಂಡ್, ಟೇಬಲ್, ಪಾತ್ರೆಗಳು ಹೀಗೆ...

ಮಡಿಕೇರಿಯಲ್ಲಿ ರೇಷ್ಮೆ ಮಂಡಳಿ ಅಧ್ಯಕ್ಷ ರಮೇಶ್ ‘ಕೈ’ ಲೀಲೆ

1 month ago

ಮಡಿಕೇರಿ: ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮಾಜಿ ಜಿಲ್ಲಾ ಅಧ್ಯಕ್ಷ ಹಾಗೂ ಹಾಲಿ ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ ರಮೇಶ್ ಅವರು ಎಮ್‍ಎಲ್‍ಸಿ ವೀಣಾ ಅಚ್ಚಯ್ಯ ಅವರ ಕೈಹಿಡಿದುಕೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಮಡಿಕೇರಿ ಕೋಟೆ ಆವರಣದಲ್ಲಿ ನಡೆದ 71 ನೇ...

ವರ್ಷಧಾರೆಗೆ ಮೈದುಂಬಿ ಹರಿಯುತ್ತಿದೆ ಕೊಡಗಿನ ಮಲ್ಲಳ್ಳಿ ಜಲಪಾತ: ವಿಡಿಯೋ ನೋಡಿ

1 month ago

ಮಡಿಕೇರಿ: ಕೊಡಗಿನಲ್ಲಿ ಮಳೆಗಾಲ ಶುರುವಾದರೆ ಸಾಕು ಗಿರಿಕಾನನದ ನಡುವಿನಿಂದ ಧುಮ್ಮುಕ್ಕೊ ಜಲಧಾರೆಗಳ ವಯ್ಯಾರವನ್ನ ನೋಡೋಕೆ ಎರಡು ಕಣ್ಣುಗಳು ಸಾಲುವುದಿಲ್ಲ. ಈ ಕೊಡಗಿನ ಅತಿ ಸುಂದರ ಜಲಕನ್ಯೆ ಮಲ್ಲಳ್ಳಿ ಜಲಪಾತ ಮಳೆಗೆ ತುಂಬಿ ಹರಿಯುತ್ತಿದ್ದು ನಯನ ಮನೋಹರವಾಗಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ....

ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆ

2 months ago

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಶುಕ್ರವಾರದಿಂದ ಮಳೆಯ ಆರ್ಭಟ ಜೋರಾಗಿದೆ. ಕಳೆದ ರಾತ್ರಿಯಿಂದಲೂ ಧಾರಾಕಾರ ಮಳೆಯಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮುಂಗಾರು ಮಳೆಯ ಆರ್ಭಟ ಕಡಿಮೆಯಾಗಿದ್ದರೂ ಕೂಡ ಶುಕ್ರವಾರದಿಂದ ವರುಣ ಅಬ್ಬರಿಸುತ್ತಿದ್ದಾನೆ. ಮಳೆಯಿಂದಾಗಿ ಬೆಳಗ್ಗೆ ಶಾಲಾ ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಪರದಾಡುವಂತಾಗಿತ್ತು. ಮಡಿಕೇರಿ...

ಕೊಡವರಿಂದ ಅದ್ಧೂರಿಯಾಗಿ ಕಕ್ಕಡ ಹಬ್ಬ ಆಚರಣೆ-ಫೋಟೋಗಳಲ್ಲಿ ನೋಡಿ

2 months ago

ಕೊಡಗು: ಜಿಲ್ಲೆಯಲ್ಲಿ ಇಂದು ಕೊಡವ ಸಮುದಾಯದ ಜನರು ಎಲ್ಲಡೆ ‘ಕಕ್ಕಡ ಪದಿನೆಟ್’ ಎಂದು ಕರೆಯಲಾಗುವ ಆಟಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. 18 ಔಷದ ಗುಣಗಳನ್ನು ಹೊಂದಿರುವ ಮದ್ದು ಸೊಪ್ಪನ್ನು ಮನೆಗೆ ತಂದು ಅದರಿಂದ ರುಚಿ ರುಚಿಯಾದ ಖಾದ್ಯಗಳನ್ನು ತಯಾರು ಮಾಡುತ್ತಾರೆ....

ಹೊಸಕಾಡಿನಲ್ಲಿ ಹೊನ್ನಿನಂಥ ಬೆಳೆ ಬೆಳೆದ ಕೊಡಗಿನ ಗಿರಿಜನ ಕುಟುಂಬದ ರೈತ ಮಹೇಶ್

2 months ago

ಮಡಿಕೇರಿ: ಗಿರಿಜನರು ಎಂದಾಕ್ಷಣ ಸಾಮಾನ್ಯವಾಗಿ ನೆನಪಾಗೋದು ಸಂಕಷ್ಟದ ಬದುಕು. ಮುರುಕಲು ಗುಡಿಸಲು, ಕೂಲಿ ಮಾಡಿಕೊಂಡು ಒಪ್ಪತ್ತಿನ ಊಟಕ್ಕೂ ಪರದಾಡುವ ಅವರ ಸ್ಥಿತಿಗತಿ. ಆದ್ರೆ, ಮಡಿಕೇರಿಯ ಇವತ್ತಿನ ಪಬ್ಲಿಕ್ ಹೀರೋ ಆಗಿರೋ ಮಹೇಶ್ ಅನ್ನೋವ್ರು ಸ್ವಾವಲಂಬಿ ಬದುಕು ಕಟ್ಟಿಕೊಂಡು ಮಾದರಿ ರೈತರಾಗಿದ್ದಾರೆ. ಹೌದು....

ಕೊಡಗಿನಲ್ಲಿ ಭಾರೀ ಮಳೆ: ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿ

3 months ago

ಮಡಿಕೇರಿ: ಕೊಡಗಿನಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಕಾವೇರಿ, ಲಕ್ಷ್ಮಣತೀರ್ಥ ನದಿಗಳು ತುಂಬಿ ಹರಿಯುತ್ತಿದೆ. ಮಳೆಯ ಪ್ರಮಾಣ ಇದೇ ರೀತಿ ಮುಂದುವರಿದಲ್ಲಿ ಪ್ರವಾಹ ಏರ್ಪಡುವ ಸಾಧ್ಯತೆಗಳಿದೆ. ಕಾವೇರಿಯ ಉಗಮ ಸ್ಥಾನವಾದ ಕಾವೇರಿ ಮತ್ತು ಭಾಗಮಂಡಲ ಕ್ಷೇತ್ರದಲ್ಲಿ ಭಾರೀ ವರ್ಷಾಧಾರೆಯಿಂದ ತ್ರಿವೇಣಿ...