ನವದೆಹಲಿ: ನಾನು ಕೋಲಾರದಲ್ಲಿ (Kolara) ಹಣ ಖರ್ಚು ಮಾಡಿ ಕೆಲಸ ಮಾಡಿದ್ದೇನೆ. ಅಲ್ಲಿ ಸ್ಪರ್ಧಿಸುವ ಆಸೆ ಇತ್ತು. ಆದರೆ ಸಿದ್ದರಾಮಯ್ಯ (Siddaramaiah) ಅವರು ಸ್ಪರ್ಧಿಸುವ ಕಾರಣದಿಂದಲೇ ಚಿಕ್ಕಪೇಟೆಗೆ ಸ್ಥಳಾಂತರಗೊಂಡಿದ್ದೇನೆ. ಈಗ ನಾನು ಅವರ ವಿರುದ್ಧ ಜೆಡಿಎಸ್‌ನಿಂದ ಸ್ಪರ್ಧೆ ಮಾಡುವುದಿಲ್ಲ. ಅವರು ನನಗೆ ದೇವರಿದ್ದಂತೆ. ಅವರ ಅವಶ್ಯಕತೆ ರಾಜ್ಯಕ್ಕಿದೆ ಎಂದು ಉದ್ಯಮಿ ಕೆಜಿಎಫ್ ಬಾಬು (KGF Babu) ಪ್ರತಿಕ್ರಿಯಿಸಿದ್ದಾರೆ.
ಜೆಡಿಎಸ್‌ನಿಂದ (JDS) ಕೋಲಾರದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಮಾತನಾಡಿದ ಅವರು, ನನ್ನ ತಾತ, ತಂದೆ – ತಾಯಿ ಎಲ್ಲರೂ ಕಾಂಗ್ರೆಸ್‌ನಲ್ಲಿದ್ದವರು (Congress). ನಾನೂ ಕಾಂಗ್ರೆಸ್‌ನಲ್ಲಿದ್ದೇನೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆಯುವುದಿಲ್ಲ. ಜೆಡಿಎಸ್‌ನಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಅಪ್ಪ, ಮಗಳ ರಾಜಕಾರಣಕ್ಕೆ ಅಂತ್ಯ ಹಾಡಲು ವಿಜಯಸಂಕಲ್ಪ ಅಭಿಯಾನ: ನಳಿನ್ ಕುಮಾರ್ ಕಟೀಲ್
ವಿಧಾನ ಪರಿಷತ್ ಚುನಾವಣಾ ಸೋಲಿನ ಬಳಿಕ ಕೋಲಾರದಲ್ಲಿ ಸ್ಪರ್ಧೆ ಮಾಡಲು ಬಯಸಿದ್ದೆ. ಅದಕ್ಕಾಗಿ ಕೆಲಸವನ್ನೂ ಆರಂಭಿಸಿದ್ದೆ. ಆದರೆ ಅಲ್ಲಿಂದ ಸಿದ್ದರಾಮಯ್ಯ ಸ್ಪರ್ಧಿಸುವ ಸುಳಿವು ಸಿಕ್ಕ ಹಿನ್ನೆಲೆ ನಾನು ಚಿಕ್ಕಪೇಟೆಯಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಈಗ ಕೋಲಾರಕ್ಕೆ ಮರಳುವ ಯಾವುದೇ ಉದ್ದೇಶವಿಲ್ಲ ಎಂದರು.
ಜೆಡಿಎಸ್ ರಾಜ್ಯಧ್ಯಕ್ಷ ಸಿ.ಎಂ ಇಬ್ರಾಹಿಂ ನನ್ನ ಭೇಟಿ ಮಾಡಿದ್ದು ನಿಜ. ಕಾಂಗ್ರೆಸ್‌ಗೆ ಮುಸ್ಲಿಂ ಮತಗಳು ಬೇಕು, ನಾಯಕರು ಬೇಡ. ನಮ್ಮ ಪಕ್ಷಕ್ಕೆ ಬಂದರೆ ಕೇಳಿದ ಕ್ಷೇತ್ರಕ್ಕೆ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ. ಆದರೂ ನಾನು ಕಾಂಗ್ರೆಸ್ ಬಿಡುವುದಿಲ್ಲ. ಸದ್ಯಕ್ಕೆ ಅಮಾನತು ಮಾಡಿದ್ದಾರೆ. ಅದನ್ನು ತೆರವು ಮಾಡುವ ಭರವಸೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಕೋಲಾರದಲ್ಲಿ ಸಿದ್ದು ಸ್ಪರ್ಧೆ ಖಚಿತವಾದ ಬೆನ್ನಲ್ಲೇ ದಲಿತ ಸಿಎಂ ಕೂಗು – ಸಿದ್ದು ಸೋಲಿಸಿ, ದಲಿತ CM ಹಾದಿ ಸುಗಮಗೊಳಿಸಿ ಅಭಿಯಾನ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k