ಬೀಜಿಂಗ್: 9ನೇ ಮಹಡಿಯಿಂದ 2ನೇ ಮಹಡಿಗೆ ಬಿದ್ದು ಅಲ್ಲಿಂದ ಕೆಳಗೆ ಬಿದ್ದರೂ ಸಣ್ಣಪುಟ್ಟ ಗಾಯಗಳಾಗಿ ಮಹಿಳೆಯೊಬ್ಬರು ಪವಾಡಸದೃಶವಾಗಿ ಪಾರಾಗಿರುವ ಘಟನೆ ಚೀನಾದಲ್ಲಿ ನಡೆದಿದೆ.
ಡಿಸೆಂಬರ್ 7 ರಂದು ಉತ್ತರ ಚೀನಾ ಯಾನ್ಶವ್ ನ ಅತಿಥಿಗಳಿರುವ ಹೋಟೆಲ್ ನ 9ನೇ ಮಹಡಿಯಿಂದ ಮಹಿಳೆ ಬಿದ್ದಿದ್ದಾರೆ. ನಂತರ ಮಹಿಳೆ 9ನೇ ಮಹಡಿಯಿಂದ ನೇರವಾಗಿ 2ನೇ ಮಹಡಿಗೆ ಬಿದ್ದಿದ್ದಾರೆ. ನಂತರ ಮಹಿಳೆ ಅಲ್ಲಿಂದ ತೆವಳಿಕೊಂಡು ಬಂದು ಮತ್ತೊಮ್ಮೆ ಬಿದ್ದಿದ್ದಾರೆ.
- Advertisement 2
https://www.youtube.com/watch?time_continue=18&v=B6u76IWBTW4
- Advertisement 3
ಮಹಿಳೆ ಕಟ್ಟಡದಿಂದ ಬೀಳುವುದನ್ನು ನೋಡಿ ಸ್ಥಳೀಯರು ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ. ಮಹಿಳೆ ಕಟ್ಟಡದಿಂದ ಬೀಳುವುದನ್ನು ನೋಡಿದ ಜನರು ಆಕೆ ಬೀಳುವ ವೇಳೆ ಹಿಡಿದು ರಕ್ಷಿಸಿದ್ದಾರೆ. ನಂತರ ಪೊಲೀಸರು ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
- Advertisement 4
ಮಹಿಳೆ ಕಟ್ಟಡದಿಂದ ಜಿಗಿದಿದ್ದು ಯಾಕೆ ಎನ್ನುವುದಕ್ಕೆ ಕಾರಣ ತಿಳಿದು ಬಂದಿಲ್ಲ ಹಾಗೂ ಸಣ್ಣಪುಟ್ಟ ಗಾಯಗಳಾಗಿದೆ ಎಂದು ವರದಿಯಾಗಿದೆ.