ದೇಶೀಯ ಮಾರುಕಟ್ಟೆಗೆ ಸ್ಯಾಮ್‍ಸಂಗ್ 2 ಫೋನ್ ರಿಲೀಸ್: ಬೆಲೆ ಎಷ್ಟು? ಗುಣವೈಶಿಷ್ಟ್ಯಗಳೇನು?

ನವದೆಹಲಿ: ಸ್ಯಾಮ್‍ಸಂಗ್ ದೇಶೀಯ ಮಾರುಕಟ್ಟೆಗೆ  ಗೆಲಾಕ್ಸಿ ಎ5, ಎ7 ಫೋನ್‍ಗಳನ್ನು ಬಿಡುಗಡೆ ಮಾಡಿದೆ.

ಗೆಲಾಕ್ಸಿ ಎ5 ಫೋನಿಗೆ 28,990 ರೂ. ನಿಗದಿ ಮಾಡಿದರೆ, ಗೆಲಾಕ್ಸಿ ಎ7ಗೆ 33,490 ರೂ. ಬೆಲೆಯನ್ನು ನಿಗದಿ ಮಾಡಿದೆ. ಎರಡೂ ಫೋನ್‍ಗಳು ಮಾರ್ಚ್ 15ರ ನಂತರ ಖರೀದಿಗೆ ಲಭ್ಯವಿದ್ದು, ಸ್ಯಾಮ್‍ಸಂಗ್ ಇ ಸ್ಟೋರ್‍ನಲ್ಲಿ ಪ್ರಿ ಬುಕ್ಕಿಂಗ್ ಮಾಡಬಹುದು. ಈ ಎರಡೂ ಫೋನ್‍ಗಳು ರಷ್ಯಾದಲ್ಲಿ ಮೊದಲು ಬಿಡುಗಡೆಯಾಗಿತ್ತು.

ಈ ಎರಡೂ ಫೋನ್ ಗಳು 4 ಜಿ ಎಲ್ ಟಿಯಿ ತಂತ್ರಜ್ಞಾನವನ್ನು ಒಳಗೊಂಡಿದ್ದು, ಜಿಯೋ ಸಿಮ್ ಹಾಕಬಹುದಾಗಿದೆ.

ಗೆಲಾಕ್ಸಿ ಎ5(2017) ಗುಣವೈಶಿಷ್ಟ್ಯಗಳು
ಬಾಡಿ ಮತ್ತು ಡಿಸ್ಪ್ಲೇ: 146.1*71.4*7.9 ಮಿಮೀ ಗಾತ್ರ, 157 ಗ್ರಾಂ ತೂಕವಿರುವ ಫೋನ್ ಸಿಂಗಲ್ ಸಿಮ್ ಮತ್ತು ಡ್ಯುಯಲ್ ನ್ಯಾನೋ ಸಿಮ್)ಹಾಕಬಹುದು. ಧೂಳು ಮತ್ತು ಜಲ ನಿರೋಧಕ, 5.2 ಇಂಚಿನ ಸೂಪರ್ ಅಮೋಲೆಡ್ ಕೆಪಾಸಿಟೆಟಿವ್ ಸ್ಕ್ರೀನ್(1080*1920 ಪಿಕ್ಸೆಲ್, 424 ಪಿಪಿಐ) ಹೊಂದಿದ್ದು, ಕಾರ್ನಿಂಗ್ ಗೊರಿಲ್ಲ ಗ್ಲಾಸ್- 4ನೊಂದಿಗೆ ಬಂದಿದೆ.

ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ ಮಾರ್ಶ್‍ಮೆಲೋ ಆಪರೇಟಿಂಗ್ ಸಿಸ್ಟಂ, ಅಕ್ಟಾಕೋರ್ ಪ್ರೊಸೆಸರ್, ಮಲಿ ಗ್ರಾಫಿಕ್ಸ್ ಪ್ರೊಸೆಸರ್, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 32 ಜಿಬಿ ಆಂತರಿಕ ಮೆಮರಿ, 3 ಜಿಬಿ ರಾಮ್ ಹೊಂದಿದೆ.

ಕ್ಯಾಮೆರಾ, ಬ್ಯಾಟರಿ:
16 ಎಂಪಿ ಹಿಂದುಗಡೆ ಕ್ಯಾಮೆರಾ, 16 ಎಂಪಿ ಮುಂದುಗಡೆ ಕ್ಯಾಮೆರಾ ಹೊಂದಿರುವ ಫೋನಿನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದೆ. ಫಾಸ್ಟ್ ಬ್ಯಾಟರಿ ಚಾರ್ಜಿಂಗ್, ತೆಗೆಯಲು ಸಾಧ್ಯವಿಲ್ಲದ 3000 ಎಂಎಎಚ್ ಬ್ಯಾಟರಿಯನ್ನು ಸ್ಯಾಮಸಂಗ್ ಈ ಫೋನಿಗೆ ನೀಡಿದೆ.

ಗೆಲಾಕ್ಸಿ ಎ7(2017) ಗುಣ ವೈಶಿಷ್ಟ್ಯಗಳು
ಬಾಡಿ, ಡಿಸ್ಪ್ಲೇ:
156.8*77.6*7.9 ಮಿ.ಮೀ ಡಿಸ್ಪ್ಲೇ, ಸಿಂಗಲ್ ಅಥವಾ ಡ್ಯುಯಲ್ ನ್ಯಾನೋ ಸಿಮ್ ಸ್ಲಾಟ್, ಧೂಳು ಮತ್ತು ಜಲ ನಿರೋಧಕವನ್ನು ಹೊಂದಿದೆ. 5.7 ಇಂಚಿನ ಸೂಪರ್ ಅಮೊಲೆಡ್ ಸ್ಕ್ರೀನ್(1080*1920 ಪಿಕ್ಸೆಲ್,386 ಪಿಪಿಐ) ಕಾರ್ನಿಂಗ್ ಗೊರಿಲ್ಲ ಗ್ಲಾಸ್ 4ನ್ನು ಒಳಗೊಂಡಿದೆ.

ಪ್ಲಾಟ್‍ಫಾರಂ, ಮೆಮೊರಿ:
ಆಂಡ್ರಾಯ್ಡ್ 6 ಮಾರ್ಶ್‍ಮೆಲೋ ಒಎಸ್, ಅಕ್ಟಾಕೋರ್ ಪ್ರೊಸೆಸರ್, ಮಲಿ ಗ್ರಾಫಿಕ್ಸ್ ಪ್ರೊಸೆಸರ್, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 32 ಜಿಬಿ ಆಂತರಿಕ ಮೆಮೊರಿ, 3 ಜಿಬಿ ರಾಮ್ ಹೊಂದಿದೆ.

ಕ್ಯಾಮೆರಾ, ಬ್ಯಾಟರಿ:
16 ಎಂಪಿ ಹಿಂದುಗಡೆ, 16 ಎಂಪಿ ಮುಂದುಗಡೆ ಕ್ಯಾಮೆರಾ, 3600 ಎಂಎಎಚ್ ತೆಗೆಯಲು ಸಾಧ್ಯವಿಲ್ಲದ ಬ್ಯಾಟರಿ, ಫಾಸ್ಟ್ ಬ್ಯಾಟರಿ ಚಾರ್ಜಿಂಗ್, ಫಿಂಗರ್ ಪ್ರಿಂಟ್ ಸೆನ್ಸರ್ ಒಳಗೊಂಡಿದೆ.

You might also like More from author

Leave A Reply

Your email address will not be published.

badge