Monday, 25th June 2018

Recent News

ರೇಸ್-3 ಚಿತ್ರದಲ್ಲಿ ಈ ಎರಡೂ ಸೀನ್ ಮಾಡಲ್ಲ ಎಂದ ಸಲ್ಮಾನ್!

ಮುಂಬೈ: ಸಲ್ಮಾನ್ ಖಾನ್ ಚಿತ್ರದಲ್ಲಿ ನಟಿಸುವಾಗ ಅವರು ತಮ್ಮ ಕೆಲವು ತತ್ವಗಳನ್ನು ಪಾಲಿಸುತ್ತಾರೆ. ಫ್ಯಾಮಿಲಿ ಆಡಿಯನ್ಸ್ ಗಳನ್ನು ಹೆಚ್ಚು ಸೆಳೆಯುವ ಸಲ್ಮಾನ್ ಈಗ ರೇಸ್-3 ಚಿತ್ರದಲ್ಲಿ ಡ್ರಗ್ಸ್ ಡೀಲರ್ ಹಾಗೂ ಹಾಟ್ ಸೀನ್‍ಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ಮೊದಲು ಸಲ್ಮಾನ್ ಖಾನ್ ತಮ್ಮ ಚಿತ್ರದಲ್ಲಿ ಖಳ ನಟನ ಪಾತ್ರ ಹಾಗೂ ಕಿಸ್ಸಿಂಗ್ ಸೀನ್ ಮಾಡುವುದಿಲ್ಲ ಎಂದು ತಿಳಿಸಿದ್ದರು. ಆದರೆ ಈಗ ಸಲ್ಮಾನ್ ಚಿತ್ರತಂಡ ಜೊತೆ ಮಾತನಾಡಿ ರೇಸ್-3 ಚಿತ್ರದಲ್ಲಿ ಡ್ರಗ್ಸ್ ಡೀಲರ್ ಪಾತ್ರದಲ್ಲಿ ಹಾಗೂ ಹಾಟ್ ಸೀನ್‍ಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ ಎಂದು ಪತ್ರಿಕೆಯೊಂದು ಪ್ರಕಟಿಸಿದೆ.

ರೇಸ್ ಮತ್ತು 2 ಚಿತ್ರದಲ್ಲಿ ಅನಿಲ್ ಕಪೂರ್ ನಟಿಸಿದ್ದರು. ಆದರೆ ಈ ಬಾರಿ ಅವರಿಲ್ಲದ ಕಾರಣ ಚಿತ್ರದ ನಿರ್ದೇಶಕ ರೆಮೋ ಡಿ ಸೋಜಾ ಹಾಗೂ ನಿರ್ಮಾಪಕ ರಮೇಶ್ ಟೌರಾನಿಗೆ ಚಿತ್ರದಲ್ಲಿ ಕೆಲವು ಹಾಸ್ಯ ದೃಶ್ಯಗಳನ್ನು ಸೇರಿಸುವುದಾಗಿ ಸಲ್ಮಾನ್ ಹೇಳಿದ್ದಾರೆ.

ರೇಸ್ ಹಾಗೂ ರೇಸ್-2 ಚಿತ್ರದಲ್ಲಿ ಸಾಕಷ್ಟು ಹಾಟ್ ಸೀನ್‍ಗಳಿದ್ದವು. ಆದರೆ ಸಲ್ಮಾನ್ ರೇಸ್-3ಯಲ್ಲಿ ಒಂದೇ ಒಂದು ಹಾಟ್ ಸೀನ್ ಇರಬಾರದು. ಈ ಸಿನಿಮಾ ಕೌಟುಂಬಿಕ ಸಿನಿಮಾ ರೀತಿ ಇರಬೇಕು. ಫ್ಯಾಮಿಲಿ ಆಡಿಯನ್ಸ್ ನೋಡುವ ಹಾಗೇ ಇರಬೇಕು ಎಂದು ತಿಳಿಸಿದ್ದಾರೆ.

ಸಲ್ಮಾನ್ ಡ್ರಗ್ಸ್ ಡೀಲರ್ ಮಾಡುವ ಪಾತ್ರ ಸಿನಿಮಾದಲ್ಲಿ ಇತ್ತು. ಆದರೆ ಈ ಸೀನ್ ಮಾಡಲು ಸಲ್ಮಾನ್ ನಿರಾಕರಿಸಿದ್ದಾರೆ. ಅಭಿಮಾನಿಗಳಿಗೆ ಚಿತ್ರದಿಂದ ಕೆಟ್ಟ ಸಂದೇಶ ರವಾನೆಯಾಗಬಹುದು ಎನ್ನುವ ಭಯದಿಂದಾಗಿ ಸಲ್ಮಾನ್ ತಿಳಿಸಿದ ಕಾರಣ ಈ ದೃಶ್ಯಗಳನ್ನು ಚಿತ್ರದಿಂದ ತೆಗೆದು ಹಾಕಲಾಗಿದೆ ಎನ್ನಲಾಗಿದೆ.

ಚಿತ್ರದಲ್ಲಿ ಜಾಕ್ವೇಲಿನ್ ಫರ್ನಾಂಡಿಸ್ ಪೊಲೀಸ್ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ನಾನು ಪೊಲೀಸ್ ಪಾತ್ರ ನಿರ್ವಹಿಸುತ್ತಿಲ್ಲ. ನನ್ನ ಪಾತ್ರದ ಬಗ್ಗೆ ಹೆಚ್ಚು ಹೇಳಲಾರೆ ಎಂದು ಜಾಕ್ವೇಲಿನ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *