Wednesday, 23rd May 2018

Recent News

ಯಡಿಯೂರಪ್ಪ ಸರ್ಕಾರದಿಂದ ಆತ್ಮಹತ್ಯೆ ಭಾಗ್ಯ ಅಂದ್ರು ಡಿವಿಎಸ್ – ವೇದಿಕೆಯಲ್ಲಿದ್ದ ಬಿಎಸ್‍ವೈ ತಬ್ಬಿಬ್ಬು

ಮೈಸೂರು: ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ 3.5 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಮುಖ್ಯಮಂತ್ರಿ ನಮಗೆ ಬೇಕಾ ಎಂದು ಪ್ರಶ್ನಿಸಿ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಎಡವಟ್ಟು ಮಾಡಿಕೊಂಡಿದ್ದಾರೆ.

ಪರಿವರ್ತನಾ ಯಾತ್ರೆಯಲ್ಲಿ ಭಾಷಣ ಮಾಡುವ ಸಂದರ್ಭದಲ್ಲಿ ಸಿದ್ದರಾಮಯ್ಯ ಎಂದು ಹೇಳುವ ಭರದಲ್ಲಿ ಬಿಎಸ್‍ವೈ ಹೆಸರನ್ನು ಪ್ರಸ್ತಾಪ ಮಾಡಿದ್ದರು. ಡಿವಿಎಸ್ ಈ ರೀತಿ ಹೇಳಿದ್ದನ್ನು ನೋಡಿ ವೇದಿಕೆಯಲ್ಲಿದ್ದ ಬಿಎಸ್ ಯಡಿಯೂರಪ್ಪ ಒಮ್ಮೆ ತಬ್ಬಿಬ್ಬು ಆದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತಾ ಅಂದ್ರೆ ಕನಸಲ್ಲೂ ಗಡಗಡ ನಡುಗುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ದೊಡ್ಡ ಕಾರ್ಯಕ್ರಮಗಳನ್ನು ನಡೆಸುತ್ತಿರುವಾಗಲೇ ಬಂದ್ ನಡೆಸಲು ಪ್ರೇರಣೆ ನೀಡಿದ್ದಾರೆ. ಮಹದಾಯಿ ವಿಚಾರವಾಗಿ ಉತ್ತರ ಕರ್ನಾಟಕದಲ್ಲಿ ಬಂದ್ ಮಾಡೋದು ಅಥವಾ ರಾಜಧಾನಿಯಲ್ಲಿ ಬಂದ್ ಮಾಡೋದು ಸ್ವಾಭಾವಿಕ. ಆದರೆ ಬಿಜೆಪಿಯ ದೊಡ್ಡ ಕಾರ್ಯಕ್ರಮ ಇದೆ ಎಂದು ಬಂದ್ ಮಾಡುತ್ತಿರುವ ಉದ್ದೇಶವೇ ಸಿದ್ದರಾಮಯ್ಯ ಅವರ ಕಾಗ್ರೆಸ್ ಪ್ರೇರಿತ ಬಂದ್ ಆಗಿದೆ ಅಂತಾ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಾಲ್ಕೂವರೆ ವರ್ಷಗಳಲ್ಲಿ ಸಿದ್ದರಾಮಯ್ಯ ಸರ್ಕಾರ ಏನೂ ಮಾಡಿಲ್ಲ. ಹೀಗಾಗಿ ಸೋಲು ಕಟ್ಟಿಟ್ಟ ಬುತ್ತಿ ಎಂದು ಅವರಿಗೆ ಗೊತ್ತಾಗಿದ್ದರಿಂದ ಸಿದ್ದರಾಮಯ್ಯ ಈ ರೀತಿ ಮಾಡುತ್ತಿದ್ದಾರೆ. ಈ ರೀತಿಯ ರಾಜಕೀಯ ದ್ವೇಷ ಒಳ್ಳೆಯದಲ್ಲ. ಒಂದು ದೇಶದ ಪ್ರಧಾನಿ ರಾಜ್ಯಕ್ಕೆ ಬರುವಾಗ ಶಾಂತಿ ಸುವ್ಯವಸ್ಥೆ ಕಾಪಾಡುವ ಬದಲು ರಾಜಕೀಯ ದ್ವೇಷ ಮಾಡೋದು ಸರಿಯಲ್ಲ. ಇದು ಅವರಿಗೇ ತಿರುಗುಬಾಣ ಆಗುತ್ತದೆ. ಮಹದಾಯಿ ಹೋರಾಟಗಾರರು ಮತ್ತು ಉತ್ತರ ಕರ್ನಾಟಕದ ಜನ ನಮ್ಮ ಪರವಾಗಿದ್ದು ಕನ್ನಡ ಪರ ಹೋರಾಟಗಾರರೇ ಬಂದ್‍ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಸದಾನಂದ ಗೌಡ ಆಕ್ರೋಶ ಹೊರಹಾಕಿದ್ರು.

ಅಧಿಕಾರಿಗಳನ್ನು ಪದೇ ಪದೇ ವರ್ಗಾವಣೆ ಮಾಡುವುದರಿಂದ ಅವರಿಗೆ ಕೆಲಸ ಮಾಡಲು ಆಗಲ್ಲ. ಅಧಿಕಾರಿಗಳ ಮೇಲೆ ಸವಾರಿ ಮಾಡುತ್ತ, ಸ್ವ ಇಚ್ಚೆಯಂತೆ ಕುಣಿಸುವುದರಿಂದ ಆಡಳಿತ ಕೆಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

Leave a Reply

Your email address will not be published. Required fields are marked *