ಸಿಮ್ ಆಯ್ತು ಜಿಯೋ ಸೆಟ್‍ಟಾಪ್ ಬಾಕ್ಸ್: ವಿಶೇಷತೆ ಏನು? ಬೆಲೆ ಎಷ್ಟು? ಆರಂಭ ಯಾವಾಗ?

ಮುಂಬೈ: ಉಚಿತ ಕರೆಗಳನ್ನು ನೀಡಿ ಕಡಿಮೆ ಬೆಲೆಯಲ್ಲಿ ಡೇಟಾ ನೀಡಿ ದೇಶದಲ್ಲಿ ಟೆಲಿಕಾಂ ಕಂಪೆನಿಗಳ ನಡುವೆ ಡೇಟಾ ಸಮರಕ್ಕೆ ಕಾರಣವಾಗಿದ್ದ ಜಿಯೋ ಈಗ ಸೆಟ್‍ಟಾಪ್ ಮಾರುಕಟ್ಟೆಯ ಕ್ಷೇತ್ರದತ್ತ ಗಮನ ಹರಿಸಿದ್ದು ಶೀಘ್ರವೇ ಈ ಸೇವೆ ಗ್ರಾಹಕರಿಗೆ ಸಿಗಲಿದೆ.

ಹೌದು. ಜಿಯೋ ಕಂಪೆನಿಯ ಸೆಟ್‍ಟಾಪ್ ಬಾಕ್ಸ್ ಗಳ ಫೋಟೋಗಳು ಈಗ ಆನ್‍ಲೈನ್ ನಲ್ಲಿ ಲೀಕ್ ಆಗಿದೆ. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಮಾಹಿತಿ ಪ್ರಕಾರ ಈ ಸೆಟ್‍ಟಾಪ್ ಮೇಲೆ ‘ನಾಟ್ ಫಾರ್ ರಿಟೇಲ್’ ಎಂಬ ಬರಹ ಇದ್ದು, ಪ್ರಸ್ತುತ ಪರೀಕ್ಷೆ ನಡೆಸುತ್ತಿದೆ.

ಸೆಟ್‍ಟಾಪ್ ಬಾಕ್ಸ್ ನಲ್ಲಿ ಏನಿದೆ?
ಸೆಟ್‍ಟಾಪ್ ಬಾಕ್ಸ್ ಅನ್ನು ಜಿಯೋ ಫೈಬರ್ ಅಥವಾ ಡಿಶ್‍ಗೆ ಕನಕ್ಟ್ ಮಾಡಬಹುದಾಗಿದೆ. ರಿಮೋಟ್ ಕಂಟ್ರೋಲ್ ನಲ್ಲಿ ಮೈಕ್ ಬಟನ್ ಇದ್ದು, ಧ್ವನಿ ಮೂಲಕ ಟಿವಿಯನ್ನು ನಿಯಂತ್ರಿಸುವ ವ್ಯವಸ್ಥೆ ಇರಲಿದೆ ಎಂದು ಹೇಳಲಾಗುತ್ತಿದೆ. ಬಾಕ್ಸ್ ಹಿಂದುಗಡೆ ಎಚ್‍ಡಿಎಂಐ ಪೋರ್ಟ್, ಯುಎಸ್‍ಬಿ ಪೋರ್ಟ್, ಆಡಿಯೋ, ವಿಡಿಯೋ ಔಟ್‍ಪುಟ್ ಪೋರ್ಟ್ ಗಳಿವೆ. ಇದರ ಜೊತೆಗೆ ಎಥರ್‍ನೆಟ್ ಪೋರ್ಟ್ ಇದ್ದು ಗ್ರಾಹಕರು ಬ್ರಾಡ್‍ಬ್ಯಾಂಡ್ ಕೇಬಲ್ ಅನ್ನು ಕನೆಕ್ಟ್ ಮಾಡಬಹುದಾಗಿದೆ. ಮುಂದುಗಡೆ ಯುಎಸ್‍ಬಿ ಪೋರ್ಟ್ ಇದ್ದು, ಗ್ರಾಹಕರು ಯುಎಸ್‍ಬಿ ಡ್ರೈವ್‍ಗಳನ್ನು ಹಾಕಬಹುದಾಗಿದೆ.

ಬೇರೆ ವಿಶೇಷ ಏನಿದೆ?
ನೀವು ಸ್ಮಾರ್ಟ್ ಫೋನ್ ಮೂಲಕಜಿಯೋ ಟಿವಿ ಆ್ಯಪ್ ಬಳಸುತ್ತಿದ್ದರೆ ನೋಡಿರುತ್ತೀರಿ. ಅದರಲ್ಲಿ ಟಿವಿ ವಾಹಿನಿಯ ಕಾರ್ಯಕ್ರಮವನ್ನು ನೀವು ವೀಕ್ಷಿಸದೇ ಇದ್ದರೂ ನಂತರವೂ ಸ್ಟ್ರೀಮ್ ಮಾಡಬಹುದಾಗಿದೆ. ವಾಹಿನಿಗಳಲ್ಲಿ 7 ದಿನಗಳ ಕಾಲ ಯಾವ ಗಂಟೆಯಲ್ಲಿ ಏನು ಪ್ರಸಾರವಾಗಿದೆ ಅವೆಲ್ಲ ಕಾರ್ಯಕ್ರಮಗಳು ಜಿಯೋ ಟಿವಿ ಆ್ಯಪ್‍ನಲ್ಲಿ ಸಿಗುತ್ತದೆ. ಈ ವಿಶೇಷತೆಯೂ ಜಿಯೋ ಸೆಟ್ ಟಾಪ್ ಬಾಕ್ಸ್ ನಲ್ಲಿ ಇರಲಿದೆ ಎನ್ನುವ ವದಂತಿಯು ಇದೆ.

ಆರಂಭದಲ್ಲಿ 300 ಚಾನೆಲ್‍ಗಳು ಮತ್ತು 50ಕ್ಕೂ ಅಧಿಕ ಎಚ್‍ಡಿ ಚಾನೆಲ್‍ಗಳು ಇರಲಿವೆ ಎಂದು ಹೇಳಲಾಗುತ್ತಿದೆ. ಇಷ್ಟೇ ಅಲ್ಲದೇ ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ಜೊತೆಯೂ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಜಿಯೋ ಹಾಟ್‍ಸ್ಟಾರ್ ಜೊತೆ ಪಾರ್ಟ್ ನರ್ ಆಗಿದ್ದು, ಗ್ರಾಹಕರಿಗೆ ಹಾಟ್ ಸ್ಟಾರ್ ವಿಡಿಯೋ ನೋಡುವ ಅವಕಾಶ ಸಿಗಲಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ ಅಮೆರಿಕ ಪ್ರಮುಖ ಚಾನೆಲ್‍ಗಳು ಇದರಲ್ಲಿ ಸಿಗಲಿದೆ.

ಇದನ್ನೂ ಓದಿ :ಪ್ರೈಮ್ ಮೆಂಬರ್‍ಶಿಪ್ ಡೆಡ್‍ಲೈನ್ ಅವಧಿ ವಿಸ್ತರಣೆ: ಏನಿದು ಜಿಯೋ ಸಮ್ಮರ್ ಸರ್‍ಪ್ರೈಸ್ ಆಫರ್? ಗ್ರಾಹಕರಿಗೆ ಲಾಭವೇ?

ಬಿಡುಗಡೆ ಯಾವಾಗ?
ಈ ಸೇವೆಯನ್ನು ಜಿಯೋ ಯಾವಾಗ ಬಿಡುಗಡೆ ಮಾಡಲಿದೆ ಎನ್ನುವುದನ್ನು ಅಧಿಕೃತವಾಗಿ ತಿಳಿಸಿಲ್ಲ. ಆದರೆ 2017ರ ಮೇ ವೇಳೆ ಈ ಸೇವೆ ಬಿಡುಗಡೆಯಾಗುವ ಸಾಧ್ಯತೆಯಿದೆ.

ಬೆಲೆ ಎಷ್ಟು? ಪ್ಲಾನ್ ಹೇಗಿದೆ?
ಸೆಟ್ ಟಾಪ್ ಬಾಕ್ಸ್ ಗೆ 1800 ರೂ. ಇದ್ದು, ಕಡಿಮೆ ಬೆಲೆಯ ಪ್ಲಾನ್‍ಗೆ 180 ರೂ. ಇರಲಿದೆ. ಈ ಪ್ಲಾನ್‍ನಲ್ಲೇ 300ಕ್ಕೂ ಅಧಿಕ ಚಾನೆಲ್‍ಗಳನ್ನು ವೀಕ್ಷಿಸಬಹುದಾಗಿದೆ. ಜಿಯೋ ಸೇವೆ ಆರಂಭಗೊಂಡಾಗ ಹೇಗೆ 3 ತಿಂಗಳ ಉಚಿತ ಆಫರ್ ನೀಡಿತ್ತೋ ಅದೇ ರೀತಿಯಾಗಿ ಈ ಸೆಟ್‍ಟಾಪ್ ಖರೀದಿಸಿದ ಗ್ರಾಹಕರಿಗೆ ಮೂರು ತಿಂಗಳು ಉಚಿತವಾಗಿ 300ಕ್ಕೂ ಅಧಿಕ ವಾಹಿನಿಗಳನ್ನು ವೀಕ್ಷಿಸುವ ಸೌಲಭ್ಯವನ್ನು ಜಿಯೋ ನೀಡಲಿದೆ.

ಇದನ್ನೂ ಓದಿ: ಡೇಟಾ ಸ್ಪೀಡ್ ಟೆಸ್ಟ್ ವಾರ್: ಏರ್‍ಟೆಲ್ ವಿರುದ್ಧ ಜಿಯೋ ದೂರು, ದೂರು ನೀಡಿದ್ದು ಯಾಕೆ? ಇಲ್ಲಿದೆ ಪೂರ್ಣ ಮಾಹಿತಿ

You might also like More from author

Leave A Reply

Your email address will not be published.

badge