Wednesday, 23rd May 2018

Recent News

ಪ್ರಕಾಶ್ ರೈ ದೊಡ್ಡ ನಟ, ಜನರ ಪರವಾಗಿ ಹೋರಾಟ ನಡೆಸ್ತಿದ್ದಾರೆ: ಗಿರೀಶ್ ಕಾರ್ನಾಡ್

ಧಾರವಾಡ: ನಟ ಪ್ರಕಾಶ್ ರೈ ದೊಡ್ಡ ಅಭಿನೇತಾ, ಕೋಟ್ಯಾಂತರ ರೂಪಾಯಿ ಹಣ ಗಳಿಸಿದ್ದಾರೆ. ಪ್ರಕಾಶ್ ರೈ ಮನಸ್ಸು ಮಾಡಿದ್ದರೆ ಆರಾಮವಾಗಿ ಇರಬಹುದಿತ್ತು. ಆದರೆ ಅದನ್ನು ಮಾಡದೆ ಜನರ ಪರವಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಜ್ಞಾನಪೀಠ ಪುರಸ್ಕೃತ ಡಾ.ಗಿರೀಶ್ ಕಾರ್ನಾಡ್ ಹೇಳಿದ್ದಾರೆ.

ನಗರದ ಸೃಜನಾ ರಂಗಮಂದಿರದಲ್ಲಿ ಕರ್ನಾಟಕ ಕಾಲೇಜಿನ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಾರ್ನಡ್, ನಮ್ಮ ಸಚಿವರ ಹೇಳಿಕೆ ಸಂವಿಧಾನದ ವಿರೋಧಿಯಾಗಿದ್ದು, ರೈ ಏಕೆ ಸಚಿವರ ಹೇಳಿಕೆಗೆ ಉತ್ತರ ಕೊಡಬೇಕು ಅಂದರೆ ಅವರಿಗೆ ದೇಶದ ಆಗು ಹೋಗುಗಳ ಮೇಲೆ ಕಾಳಜಿ ಹೊಂದಿದ್ದರಿಂದ ರೈ ಪ್ರತಿಕ್ರಿಯೆ ನೀಡಿದ್ದಾರೆ ಅಂತಾ ಅಂದ್ರು.

ಪ್ರಕಾಶ್ ರೈ ಮಾತನಾಡಿದ ಮಠದ ವೇದಿಕೆಯನ್ನು ಶುದ್ಧೀಕರಣ ಮಾಡಿರುವುದು ಸರಿಯಲ್ಲ. ನೀವು ಗೋ ಮೂತ್ರ ನಂಬುತ್ತಿರೋ, ಬಿಡುತ್ತಿರೋ ಗೊತ್ತಿಲ್ಲ. ಆದರೆ ಅದನ್ನು ಒಪ್ಪಿಕೊಳ್ಳುವ ಬಿಡುವ ಸ್ವಾತಂತ್ರ್ಯ ಎಲ್ಲರಿಗೂ ಇದೆ ಎಂದರು.

ನಮ್ಮ ದೇಶದ ಸಂವಿಧಾನವನ್ನು ಮೇಲ್ವರ್ಗದ ಜನರು ಮಾತ್ರ ರಚನೆ ಮಾಡಿಲ್ಲ, ಅಂಬೇಡ್ಕರ್ ಅವರನ್ನು ಕರೆದುಕೊಂಡು ಸಂವಿಧಾನ ರಚನೆ ಮಾಡಲು ಅವಕಾಶ ನೀಡಿದ್ದರು. ಸಚಿವರು ನಮ್ಮ ಸಂವಿಧಾನ ಬಗ್ಗೆ ಏನು ಮಾತನಾಡಿದರು. ಇದಕ್ಕೆ ನಟ ಪ್ರಕಾಶ ರೈ ಪ್ರತಿಕಿಯೆ ನೀಡಿದರು. ಹಾಗೆಯೇ ಚಿತ್ರ ನಟ ಇರ್ಪಾನ್ ಖಾನ್ ಕೂಡ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ. ದೇಶದ ಬೆಳವಣಿಗೆ ಅನಾಥರ, ಶಕ್ತಿಹೀನರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಚೆನ್ನಾಗಿ ಬೆಳೆಯುತ್ತಿದೆ, ನನಗೆ ಸಂವಿಧಾನದ ಬಗ್ಗೆ ಅಭಿಮಾನವಿದೆ. ಪಾಕಿಸ್ತಾನದಲ್ಲಿ ಮಿಲಟರಿ ಆಡಳಿತ ಬಂದಾಗ, ನಮ್ಮಲ್ಲಿ ಆ ರೀತಿಯ ಕಠಿಣ ಆಡಳಿತ ವ್ಯವಸ್ಥೆ ಬರಬೇಕೆಂದು ಹಲವರು ಇಚ್ಚಿಸಿದ್ದರು. ಅದು ನಮ್ಮ ದೇಶದಲ್ಲಿ ಸಾಧ್ಯವಾಗಲ್ಲ, ಯಾಕೆಂದ್ರೆ ನಾವು ಪ್ರಜಾಪ್ರಭುತ್ವದಲ್ಲಿದ್ದೇವೆ. ನಾನು ಕೇವಲ ಪಾಕಿಸ್ತಾನದ ಬಗ್ಗೆ ಮಾತ್ರ ಹೇಳ್ತಾಯಿರೋದು, ಅಲ್ಲಿ ನಾನು ಅಪಾರ ಗೆಳಯರನ್ನು ಹೊಂದಿದ್ದೇನೆ. ಪಾಕಿಸ್ತಾನದಲ್ಲಿ ಎರಡು ಪಂಥಗಳಿದ್ದು, ಒಂದು ಸುನ್ನಿ ಸಮುದಾಯದವರು ಇತರರ ಶಾಲೆ, ಮಸೀದಿಗಳನ್ನ ಸುಡುತ್ತಾರೆ. ವಿಶ್ವದಲ್ಲಿ ಶಿಯಾ ಮುಸ್ಲಿಂ ಸಮುದಾಯದ ಜನರು ಭಾರತದಲ್ಲಿ ಮಾತ್ರ ಸುರಕ್ಷಿತರಾಗಿದ್ದಾರೆ. ಇದನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದರು.

ದೇಶದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ ಎಂದು ಅಲ್ಲಗಳೆಯುವ ಹಾಗಿಲ್ಲ. ಏಕೆಂದರೆ ನನಗೆ ಆರು ಪೊಲೀಸರು ಭದ್ರತೆ ಕೊಡುವ ಪರಿಸ್ಥಿತಿ ಬೇಸರದ ಸಂಗತಿ. ರಾಜಕಾರಣ ಅಪಾಯಕಾರಿಯಾಗಿ ಬೆಳವಣಿಗೆಯಮನ್ನು ಪಡೆಯುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸದ ವೇಳೆಯೂ ಆಕ್ಸಿಜನ್ ಕಿಟ್ ಧರಿಸಿದ್ದ ಅವರು, ನನಗೆ ನಟ ಸಲ್ಮಾನ್ ಅವರು ಟೈಗರ್ ಜಿಂದಾ ಹೈ ಚಿತ್ರಕ್ಕೆ ಕರೆದಗಾಲೂ ಚಿತ್ರೀಕರಣದ ವೇಳೆಯಲ್ಲಿ ನಾನು ಆಕ್ಸಿಜನ್ ಕಿಟ್ ಹಾಕಿಕೊಂಡು ನಟಿಸಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *