3ನೇ ಮಹಡಿಯಿಂದ ಬೀಳ್ತಿದ್ದ ಮಗುವನ್ನ ಹಿಡಿಯಲೆತ್ನಿಸಿದ್ಳು ಶಾಲಾ ಬಾಲಕಿ – ಮುಂದೇನಾಯ್ತು? ವಿಡಿಯೋ ನೋಡಿ

ಬೀಜಿಂಗ್: 3ನೇ ಮಹಡಿಯಿಂದ ಕೆಳಗೆ ಬೀಳುತ್ತಿದ್ದ ಮಗುವನ್ನ ಶಾಲಾ ಬಾಲಕಿಯೊಬ್ಬಳು ಹಿಡಿದುಕೊಳ್ಳಲು ಯತ್ನಿಸೋ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

ಈ ಘಟನೆ ಚೀನಾದ ಹೆನಾನ್ ಪ್ರಾಂತ್ಯದ ಕ್ಸಿಂಗ್‍ಯಾಂಗ್‍ನಲ್ಲಿ ಮೇ 9 ರಂದು ನಡೆದಿದ್ದು, ಇದರ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಲಕಿಯ ಹೆಸರು ಚೆನ್ ಕೆಯು, ಈಕೆ 6ನೇ ತರಗತಿ ಓದುತ್ತಿದ್ದಾಳೆಂದು ಚೈನಾ ಪ್ಲಸ್ ಪತ್ರಿಕೆ ವರದಿ ಮಾಡಿದೆ.

ರಸ್ತೆಯಲ್ಲಿ ಇತರೆ ಬಾಲಕಿಯರೊಂದಿಗೆ ಚೆನ್ ನಡೆದುಕೊಂಡು ಹೋಗುತ್ತಿದ್ದಾಗ ಎಲ್ಲರೂ ಕಟ್ಟಡವೊಂದರ ಬಳಿ ನಿಂತು ಮೇಲೆ ನೋಡುತ್ತಿರ್ತಾರೆ. ಕೆಲವು ಸೆಕೆಂಡ್‍ಗಳ ಕಾಲ ಚೆನ್ ಕೂಡ ಅಲ್ಲೇ ನಿಂತು ನೋಡಿದ್ದಾಳೆ. ನಂತರ ತನ್ನ ಎರಡೂ ಕೈ ಚಾಚಿ ಕಟ್ಟಡದ ಬಳಿ ಓಡುತ್ತಾಳೆ. ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಮಗು ಕೆಳಗೆ ಬೀಳುತ್ತದೆ. ನಂತರ ಚೆನ್ ಓಡಿಹೋಗಿ ಮಗುವನ್ನ ಎತ್ತಿಕೊಂಡು ಗಾಯವೇನಾದ್ರೂ ಆಯಿತಾ ಅಂತ ನೋಡೋದನ್ನ ವಿಡಿಯೋದಲ್ಲಿ ಕಾಣಬಹುದು.

ಕೆಳಗೆ ಬೈಕ್‍ಗಳು ನಿಂತಿದ್ದರಿಂದ ಅದರ ಮೇಲೆ ಮೊದಲು ಬಿದ್ದು ನಂತರ ಮಗು ನೆಲಕ್ಕೆ ಬಿದ್ದಿದ್ದರಿಂದ ದೊಡ್ಡ ಅನಾಹುತವಾಗೋದು ತಪ್ಪಿದೆ. ಮಹಡಿಯಿಂದ ಕೆಳಗೆ ಬಿದ್ದ 2 ವರ್ಷದ ಮಗು ತನ್ನ ತಾಯಿಗಾಗಿ ಹುಡುಕಾಡುತ್ತಾ ಕಿಟಿಕಿಯ ಮೇಲೆ ಹತ್ತಿದ್ದು, ಈ ವೇಳೆ ಕೆಳಗೆ ಬಿದ್ದಿದೆ. ಘಟನೆ ನಡೆದ ನಂತರ ಮಗುವನ್ನ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಯಾವುದೇ ಗಂಭೀರ ಗಾಯಗಳಾಗಿಲ್ಲ ಅಂತ ವೈದ್ಯರು ಹೇಳಿರೋದಾಗಿ ವರದಿಯಾಗಿದೆ.

You might also like More from author

Leave A Reply

Your email address will not be published.

badge