Wednesday, 20th June 2018

Recent News

ಕಣ್ಸನ್ನೆ ಬೆಡಗಿ ಪ್ರಿಯಾಗೆ ಬಾಲಿವುಡ್ ನಿಂದ ಆಫರ್ ಗಳ ಸುರಿಮಳೆ!

ಮುಂಬೈ: ತನ್ನ ಕೇವಲ ಒಂದು ಕಣ್ಣ ಸನ್ನೆಯಿಂದ ನ್ಯಾಷನಲ್ ಕ್ರಷ್ ಆಗಿರೋ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್‍ಗೆ ಬಾಲಿವುಡ್ ಅಂಗಳದಿಂದ ಆಫರ್ ಗಳು ಹರಿದು ಬರುತ್ತಿವೆ ಎಂದು ವರದಿಯಾಗಿದೆ.

ಪ್ರಿಯಾ ಮಲಯಾಳಂನ ‘ಓರು ಅಡಾರ್ ಲವ್’ ಸಿನಿಮಾದಲ್ಲಿ ನಟಿಸಿದ್ದು, ಚಿತ್ರ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ. ಓರು ಅಡಾರ್ ಲವ್ ಚಿತ್ರವನ್ನು ಪ್ರಿಯಾರಿಗಾಗಿಯೇ ನೋಡಲು ಚಿತ್ರಮಂದಿರಗಳಿಗೆ ತೆರಳಲು ಜನರು ಕಾತುರರಾಗಿದ್ದಾರೆ. ಈ ಮೊದಲು ಸಾಮನ್ಯ ನಟಿಯಾಗಿದ್ದ ಪ್ರಿಯಾ ಒಂದು ಕಣ್ಣ ಸನ್ನೆಯ ಮೂಲಕ ಅಂತರಾಷ್ಟ್ರೀಯ ಖ್ಯಾತಿಯನ್ನು ಪಡೆದುಕೊಳ್ಳುವ ಮೂಲಕ ಸಂಚಲನ ಮೂಡಿಸಿದ್ದಾರೆ.

ಮೂಲಗಳ ಪ್ರಕಾರ, ಈಗಾಗಲೇ ಬಾಲಿವುಡ್‍ನ ಹಲವು ನಿರ್ಮಾಪಕರು ಪ್ರಿಯಾರನ್ನು ಸಂಪರ್ಕಿಸುತ್ತಿದ್ದಾರೆ ಎನ್ನಲಾಗಿದೆ. ಪ್ರಿಯಾ ಮಲಯಾಳಂ ಜೊತೆ ಹಿಂದಿಯನ್ನು ಸ್ಪಷ್ಟವಾಗಿ ಮಾತನಾಡಬಲ್ಲವರಾಗಿದ್ದು, ಬಾಲಿವುಡ್ ನ ನಿರ್ಮಾಪಕರು ಪ್ರಿಯಾರನ್ನ ಸಂಪರ್ಕ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.

ಚಿತ್ರತಂಡ 1.32 ಸೆಕೆಂಡ್ ನ ಹಾಡಿನ ವಿಡಿಯೋ ಬಿಡುಗಡೆ ಮಾಡಿದ್ದು, ಪ್ರಿಯಾ ಅವರ ಕಣ್ಣಿನ ನೋಟ ಎಂಥವರನ್ನು ಕ್ಷಣಕಾಲ ಮಗ್ನಗೊಳಿಸುವಂತೆ ಮಾಡುತ್ತದೆ. ಚಿತ್ರದಲ್ಲಿ ಈ ಹಾಡನ್ನು ತನ್ನ ಹಳೆಯ ಪ್ರೀತಿಯನ್ನು ನೆನಪು ಮಾಡಿಕೊಳ್ಳುವ ಸನ್ನಿವೇಶದಲ್ಲಿ ಮೂಡಿಬಂದಿದೆ. ಹೈಸ್ಕೂಲ್ ನಲ್ಲಿ ಉಂಟಾದ ಮೊದಲ ಲವ್ ಕುರಿತಾಗಿ ಮುಗ್ಧವಾಗಿ ಹಾಡನ್ನು ಚಿತ್ರೀಕರಿಸಲಾಗಿದೆ. ಚಿತ್ರದ ಹಾಡಿಗೆ ಸಿಕ್ಕ ಪ್ರತಿಕ್ರಿಯೆ ಕಂಡ ಚಿತ್ರದ ನಿರ್ದೇಶಕರು, ಚಿತ್ರ ತಂಡ ಮತ್ತು ಅಭಿಮಾನಿಗಳಿಗೆ ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದರು.

ಒಂದು ಹಾಡಿನ ವಿಡಿಯೋ ಮೂಲಕ ನ್ಯಾಷನಲ್ ಸೆನ್ಸೇಷನ್ ಸೃಷ್ಟಿಸಿರೋ ಮಲೆಯಾಳಂ ನಟಿ ಪ್ರಿಯಾ ಪ್ರಕಾಶ್ ಸಾಮಾಜಿಕ ಜಾಲತಾಣದಲ್ಲಿ ದಾಖಲೆ ಬರೆದಿದ್ದಾರೆ. ಇನ್  ಸ್ಟಾಗ್ರಾಮ್ ನಲ್ಲಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಅವರನ್ನು ಹಿಂದಿಕ್ಕಿ ಮುಂದೆ ಸಾಗಿದ್ದಾರೆ. ಪ್ರಿಯಾ ಅವರ ಇನ್ ಸ್ಟಾಗ್ರಾಮ್ ಖಾತೆಯನ್ನ ಕೇವಲ ಒಂದೇ ದಿನದಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚಿನ ಅಭಿಮಾನಿಗಳು ಫಾಲೋ ಮಾಡಿದ್ದರು. ಈ ಮೂಲಕ ಒಂದೇ ದಿನದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಫಾಲೋ ಆಗಿರುವ ವಿಶ್ವದ ಮೂರನೇ ಸೆಲೆಬ್ರಿಟಿ ಎನ್ನುವ ಹೆಗ್ಗಳಿಕೆಗೆ ಪ್ರಿಯಾ ಪಾತ್ರರಾಗಿದ್ದರು.

Leave a Reply

Your email address will not be published. Required fields are marked *