ಬೆಂಗಳೂರು: ನಾಡಿನ ಎಲ್ಲ ಭಕ್ತವೃಂದ ಮಹಾಶಿವರಾತ್ರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.
ಶಿವರಾತ್ರಿಯಂದು ಈಶ್ವರನ ಧ್ಯಾನ ಮಾಡುತ್ತಾ, ಉಪವಾಸ, ಜಾಗರಣೆ ಮಾಡಿ ಶಿವನನ್ನು ಸ್ಮರಿಸುವ ಪ್ರಯುಕ್ತ ಎಲ್ಲಾ ದೇಗುಲಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದಿವೆ. ಬೆಂಗಳೂರಿನ ಗಿರಿನಗರದಲ್ಲಿರುವ ವಾಸವೀ ದೇವಾಲಯದಲ್ಲಿ ಶಿವರಾತ್ರಿಯ ಪ್ರಯುಕ್ತ 8 ಅಡಿಯ ಶಿವನ ಲಿಂಗವನ್ನ ಪ್ರತಿಷ್ಠಾಪಿಸಲಾಗಿತ್ತು. ಈ ಲಿಂಗದ ವಿಶೇಷವೆನೆಂದೆರೆ ಇದನ್ನು ಸಣ್ಣ ಸಣ್ಣ 1008 ಲಿಂಗಗಳಿಂದ ಮಾಡಿದ್ದ ಶಿವನ ಲಿಂಗವಾಗಿದೆ. ಈ ವಿಶೇಷ ಲಿಂಗ ನೋಡಲು ತುಂಬಾ ಸುಂದರವಾಗಿ ಕಾಣುತ್ತಿತ್ತು. ಅಷ್ಟೇ ಅಲ್ಲದೇ ದೇವಾಲಯದ ವಿಗ್ರಹಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
- Advertisement 2
- Advertisement 3
ಮಂಗಳವಾರ ಸಂಜೆ 6 ಗಂಟೆಯಿಂದ ಇಂದು ಬೆಳಗ್ಗೆ 6 ಗಂಟೆಯವರೆಗೆ ಈಶ ಯೋಗಾ ಕೇಂದ್ರದಲ್ಲಿ ನಿರಂತರ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದವಾಗಿ ರುದ್ರಾಕ್ಷಿಯ ಮಣಿಗಳನ್ನು ನೀಡಲಾಯಿತು. ರಾತ್ರಿ ಬಾಲಿವುಡ್ ಗಾಯಕ ಸೋನು ನಿಗಮ್, ದಲೇರ್ ಮೆಹಂದಿ, ಸಿಯಾನ್ ರೋಲ್ಡನ್ ಮತ್ತು ತಂಡದವರು ಸಂಗಡಿಗರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು.
- Advertisement 4
ಕಳೆದ ವರ್ಷ ಈಶ ಯೋಗಾ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 112 ಅಡಿ ಎತ್ತರದ ಬೃಹತ್ ಆದಿಯೋಗಿಯ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು.