Sunday, 20th August 2017

Recent News

ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಹುಚ್ಚ ವೆಂಕಟ್

ಬೆಂಗಳೂರು: ಫಿನಾಯಿಲ್ ಸೇವಿಸಿ ನಟ ಹುಚ್ಚ ವೆಂಕಟ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಭಾನುವಾರ ಸಂಜೆ ಮಾಧ್ಯಮಗಳಿಗೆ, ನಾನು ಯುವತಿಯೊಬ್ಬಳ್ಳನ್ನು ಪ್ರೀತಿಸುತ್ತಿದ್ದೆ. ಆದರೆ ಆಕೆ ನನ್ನ ಪ್ರೀತಿಯನ್ನು ತಿರಸ್ಕರಿಸಿದ್ದಕ್ಕೆ ಫಿನಾಯಿಲ್ ಕುಡಿಯುತ್ತೇನೆ ಎಂದು ಸಂದೇಶವನ್ನು ಕಳುಹಿಸಿದ್ದರು

ಕೂಡಲೇ ವೆಂಕಟ್ ಅವರಿಗೆ ಪಬ್ಲಿಕ್ ಟಿವಿ ಕರೆ ಮಾಡಿದ್ದು ಅವರ ಸ್ನೇಹಿತರು ಪಿಕ್ ಮಾಡಿ, ವೆಂಕಟ್ ಫಿನಾಯಿಲ್ ಕುಡಿದಿದ್ದಾರೆ. ಈಗ ಆಸ್ಪತ್ರೆಗೆ ದಾಖಲಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇದೀಗ ಹುಚ್ಚ ವೆಂಕಟ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲೂ ಪ್ರೀತಿ , ಪ್ರೇಮ ಎಂದು ಕೂಗಾಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹುಚ್ಚ ವೆಂಕಟ್ ಅವರು ಈ ರೀತಿ ಹುಚ್ಚಾಟ ಮಾಡುವುದು ಇದೇ ಮೊದಲೆನಲ್ಲ. ಈ ಹಿಂದೆ ನಟಿ ರಮ್ಯಾ ಅವರನ್ನು ಪ್ರೀತಿಸುತ್ತಿದ್ದೆ ಎಂದು ಹೇಳಿದ್ದರು.

Leave a Reply

Your email address will not be published. Required fields are marked *