Sunday, 22nd April 2018

Recent News

ಜೂಲನ್ ಗೋಸ್ವಾಮಿ ಭರ್ಜರಿ ಬೌಲಿಂಗ್: ಭಾರತಕ್ಕೆ 229ರನ್‍ಗಳ ಗುರಿ

 

ಲಾರ್ಡ್ಸ್: ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಗೆಲ್ಲಲು ಇಂಗ್ಲೆಂಡ್ 229 ರನ್ ಗಳ ಗುರಿಯನ್ನು ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ವೇಗದ ಬೌಲರ್ ಜೂಲನ್ ಗೋಸ್ವಾಮಿ ಮಾರಕ ದಾಳಿಗೆ ತತ್ತರಿಸಿ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿದೆ.

ಆರಂಭದಲ್ಲಿ ರಾಜೇಶ್ವರಿ ಗಾಯಕ್ವಾಡ್ ಮೊದಲ ವಿಕೆಟ್ ಕಿತ್ತರೆ, ನಂತರ ಪೂನಮ್ ಯಾದವ್ ಎರಡು ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡಿಗೆ ಹೊಡೆತ ನೀಡಿದ್ದರು.

63 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಸಾರಾ ಟೇಲರ್ ಮತ್ತು ನಟಲೈ ಸೀವರ್ 4 ವಿಕೆಟಿಗೆ 83 ರನ್ ಗಳ ಜೊತೆಯಾಟವಾಡಿದರು. ಸಾರಾಟ ಟೇಲರ್ ಜೂಲನ್ ಗೋಸ್ವಾಮಿ ಬೌಲಿಂಗ್ ನಲ್ಲಿ ಕೀಪರ್‍ಗೆ ಕ್ಯಾಚ್ ನೀಡಿ ಔಟಾದರೆ ನಂತರದ ಎಸೆತದಲ್ಲಿ ಫ್ರಾನ್ ವಿಲ್ಸನ್ ಎಲ್‍ಬಿಗೆ ಔಟಾದರು.

ನಟಲೈ ಸೀವರ್ 51 ರನ್ ಗಳಿಸಿದರೆ, ಕ್ಯಾಥರೀನ್ ಬ್ರಂಟ್ 34 ರನ್ ಗಳಿಸಿದರು. ಜೂಲನ್ ಗೋಸ್ವಾಮಿ 10 ಓವರ್ ನಲ್ಲಿ ಮೂರು ಓವರ್ ಮೇಡನ್ ಮಾಡಿ 23 ರನ್ ನೀಡಿ 3 ವಿಕೆಟ್ ಕಿತ್ತರು. ಪೂನಂ ಯಾದವ್2 ವಿಕೆಟ್ ಪಡೆದರೆ, ರಾಜೇಶ್ವರಿ ಗಾಯಕ್ವಾಡ್ 1 ವಿಕೆಟ್ ಪಡೆದರು.

 

Leave a Reply

Your email address will not be published. Required fields are marked *