Friday, 15th December 2017

Recent News

24 mins ago

ಖ್ಯಾತ ಕಾದಂಬರಿಕಾರ ಎಸ್‍ಎಲ್ ಭೈರಪ್ಪ ಗೆ ನೃಪತುಂಗ ಸಾಹಿತ್ಯ ಪ್ರಶಸ್ತಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನೀಡುವ 2017ನೇ ಸಾಲಿನ ನೃಪತುಂಗ ಪ್ರಶಸ್ತಿಗೆ ಖ್ಯಾತ ಕಾದಂಬರಿಗಾರ ಎಸ್ ಎಲ್ ಭೈರಪ್ಪ ಭಾಜನರಾಗಿದ್ದಾರೆ. ನೃಪತುಂಗ ಪ್ರಶಸ್ತಿಯು ಏಳು ಲಕ್ಷ ನಗದು, ಫಲಕ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯಲ್ಲಿ ಡಾ. ಎಸ್‍ಎಲ್ ಭೈರಪ್ಪ ಅವರನ್ನು ಆಯ್ಕೆ ಮಾಡಿರುವುದಾಗಿ ಕಸಾಪ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ನೃಪತುಂಗ ಸಾಹಿತ್ಯ ಪ್ರಶಸ್ತಿ ಯನ್ನು ಕನ್ನಡದ ಜ್ಞಾನಪೀಠ […]

24 mins ago

ಕುಖ್ಯಾತ ರೌಡಿ ಯಶವಂತನ ಮೇಲೆ ಪೊಲೀಸ್ ಫೈರಿಂಗ್-ಅಕ್ರಮ ಪಿಸ್ತೂಲ್ ಮಾರಾಟ ಜಾಲ ಬೆಳಕಿಗೆ

ಕಲಬುರಗಿ: ಜಿಲ್ಲೆಯ ಕುಖ್ಯಾತ ರೌಡಿ ಯಶವಂತನ ಮೇಲೆ ಪೊಲೀಸರು ಗುಂಡು ಹಾರಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ. ಕಲಬುರಗಿಯಲ್ಲಿ ಕೆಇಬಿ ಕಾಂಟ್ರಾಕ್ಟರ್ ನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದ ರೌಡಿ ಯಶವಂತ, ಕಳೆದ 2 ತಿಂಗಳಿಂದ ತಲೆ ಮರೆಸಿಕೊಂಡು ಓಡಾಡ್ತಿದ್ದ. ಜೊತೆಗೆ ಅಕ್ರಮ ಪಿಸ್ತೂಲ್ ಮಾರಾಟ ದಂಧೆಯಲ್ಲೂ ತೊಡಗಿದ್ದ ಎನ್ನಲಾಗಿದೆ. ಈ ಹಿನ್ನೆಲೆಯ ಯಶವಂತ ಕಲಬುರಗಿ ಹೊರವಲಯದ ತಾವರಗೇರಾ...

ಸಾಕಿ ಸಲಹಿದ್ದ ಅಕ್ಕನಿಗೆ ಕ್ಯಾನ್ಸರ್ – ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ!

1 hour ago

ಬೆಂಗಳೂರು: ಬ್ಯಾಂಕ್ ಉದ್ಯೋಗಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ವಿಜಯನಗರ ಸಮೀಪದ ಪ್ರಶಾಂತ್ ನಗರದಲ್ಲಿ ನಡೆದಿದೆ. ಹರ್ಷಿತ್ ಶೆಟ್ಟಿ (32)ಆತ್ಮಹತ್ಯೆಗೆ ಶರಣಾದ ದುರ್ದೈವಿ. ತನ್ನನ್ನು ಸಾಕಿ ಸಲಹಿದ್ದ ಸೋದರಿಗೆ ಕ್ಯಾನ್ಸರ್ ಬಂದಿದ್ದರಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ. ಮೃತ ಹರ್ಷಿತ್ ತಾಯಿ 2002ರಲ್ಲಿ,...

ತಪರಾಕಿ ಸಿದ್ದರಾಮಯ್ಯನವರೇ ಸಾಕಾ, ಬೇಕಾ?-ಸಿಎಂ ವಿರುದ್ಧ ಅನಂತ್ ಕುಮಾರ್ ಹೆಗಡೆ ಕಿಡಿ

2 hours ago

ಕಾರವಾರ: ಶಿರಸಿ ಗಲಾಟೆ ಸಂಬಂಧ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ವೊಂದನ್ನು ಹಾಕಿ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ. ಇಷ್ಟು ಸಾಕಾ ಇನ್ನೂ ಬೇಕಾ ತಪರಾಕಿ ಸಿದ್ದರಾಮಯ್ಯನವರೇ? ಹೇಮಂತ್ ನಿಂಬಾಳ್ಕರ್, ರಾಮಲಿಂಗಾರೆಡ್ಡಿ ಹಾಗೂ ಕೆಂಪಯ್ಯರಂಥ ಜನರಿದ್ದರೆ ಮುಂದಿದೆ...

ಸತ್ತವರ ಓಟುಗಳನ್ನು ಹಾಕಿ ನನ್ನ ಗೆಲ್ಲಿಸಿದ್ದಾರೆ ಎಂದಿದ್ದ ಸಿಎಂ ವಿರುದ್ಧ ವರ್ಷವಾದ್ರೂ ಇಲ್ಲ ತನಿಖೆ- ಕಾನೂನು ಮರೆತ್ರಾ ಮೈಸೂರು ಡಿಸಿ?

2 hours ago

ಮೈಸೂರು: ಸತ್ತವರ ಓಟುಗಳನ್ನು ಹಾಕಿ ನನ್ನನ್ನು ಗೆಲ್ಲಿಸಿದ್ದಾರೆ ಎಂದಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ವರ್ಷವಾದ್ರೂ ಯಾವುದೇ ಕ್ರಮ ಕೈಗೊಳ್ಳದೆ ಮೈಸೂರು ಜಿಲ್ಲಾಧಿಕಾರಿ ರಂದೀಪ್ ಕಾನೂನು ಮರೆತರಾ ಎಂಬ ಪ್ರಶ್ನೆ ಎದ್ದಿದೆ. ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಸಿಎಂ ಸಿದ್ದರಾಮಯ್ಯ, ಸತ್ತವರ ಓಟುಗಳನ್ನು ಹಾಕಿ...

ಬಜರಂಗದಳ ಕಾರ್ಯಕರ್ತನಿಂದ ಕಿರುಕುಳ- ನೇತ್ರಾವತಿ ನದಿಗೆ ಬಿದ್ದು ಸಾಲಗಾರ ಆತ್ಮಹತ್ಯೆ

2 hours ago

ಮಂಗಳೂರು: ಬಜರಂಗದಳ ಮುಖಂಡನ ಕಿರುಕುಳದಿಂದ ಸಾಲಗಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗರೋಡಿಯ ತಾರಾನಾಥ್ ಆತ್ಮಹತ್ಯೆಗೆ ಶರಣಾಗಿರುವವರು. ಇವರು ತಮ್ಮ ಕಾರನ್ನು ಬಜರಂಗದಳದ ಮುಖಂಡ ಪ್ರಮೋದ್ ಪಂಪ್‍ವೆಲ್‍ಗೆ ಫೈನಾನ್ಸ್ ನಲ್ಲಿ ಅಡವಿಟ್ಟು ಸುಮಾರು 2.5 ಲಕ್ಷ...

ಚುನಾವಣಾ ‘ಚಾಣಕ್ಯ’ರಾದ ಅಮಿತ್ ಶಾ, ಮೋದಿಗೇ ಗೆಲುವು ಅಂದಿದ್ದೇಕೆ ಟುಡೇಸ್ ಚಾಣಕ್ಯ?

2 hours ago

ಅಹಮದಾಬಾದ್: ಗುಜರಾತ್ ಗೆ ಓಖಿ ಚಂಡಮಾರುತ ಅಪ್ಪಳಿಸಿಲ್ಲ ನಿಜ. ಆದರೆ ಗಾಂಧಿ ನಾಡಲ್ಲಿ ಚಾಣಕ್ಯದ್ವಯರಾದ ಪ್ರಧಾನಿ ನರೇಂದ್ರ ದಾಮೋದರ ಮೋದಿ-ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಂತ್ರಗಾರಿಕೆಯ ಫಲವಾಗಿ ಸೃಷ್ಟಿಯಾದ ಸುಂಟರಗಾಳಿಯಲ್ಲಿ ಕೇಸರಿ ಕೂಟ ಸತತ ಆರನೇ ಬಾರಿಗೆ ಅಧಿಕಾರದ ಗದ್ದುಗೆ...

ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಉಡುಪಿಯ ಮಹಿಳೆ

13 hours ago

ಉಡುಪಿ: ಎರಡು ದಿನಗಳ ಹಿಂದೆ ಜಿಲ್ಲೆಯ ಕೋಟದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಮೆದುಳು ನಿಷ್ಕ್ರಿಯಗೊಂಡ ಪರಿಣಾಮ ಅವರ ಬಹು ಅಂಗಾಂಗಗಳನ್ನು ದಾನ ಮಾಡಲಾಗಿದ್ದು, ಕುಟುಂಬ ಸದಸ್ಯರ ಈ ನಿರ್ಧಾರ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಜಿಲ್ಲೆಯ...