2 hours ago

ಖರ್ಜುರದ ಪ್ಯಾಕೆಟ್‍ಗಳಲ್ಲಿ ಡ್ರಗ್ಸ್ ಸಾಗಣೆ- 85 ಲಕ್ಷದ ಡ್ರಗ್ಸ್ ವಶಕ್ಕೆ

– ಅನುಮಾನ ಬಾರದಂತೆ ಪ್ಯಾಕ್ ಮಾಡುತ್ತಿದ್ದ ಆರೋಪಿಗಳು ಕೋಲ್ಕತ್ತಾ: ಅಂತಾರಾಷ್ಟ್ರೀಯ ಡ್ರಗ್ಸ್ ಸಾಗಾಣಿಕೆ ದಂಧೆಯನ್ನು ಕೋಲ್ಕತ್ತಾ ಪೊಲೀಸ್ ವಿಶೇಷ ಕಾರ್ಯಪಡೆ ಬೇಧಿಸಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಜಾಕೀರ್ ಹುಸೇನ್ ಹಾಗೂ ಈತನ ಸಹಚರರಾದ ಮಾಶುಕ್ ಅಹ್ಮದ್ ಹಾಗೂ ಪ್ರಶಾಂತ ದಾಸ್ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 85 ಲಕ್ಷ ರೂ. ಬೆಲೆಯ 10 ಕೆ.ಜಿ. ಚರಸ್ ವಶಕ್ಕೆ ಪಡೆದಿದ್ದಾರೆ. ಡ್ರಗ್ಸ್ ಸಾಗಿಸಲು ಆರೋಪಿಗಳು ಖರ್ಜುರದ ಚಿತ್ರವಿರುವ ಬಾಕ್ಸ್ ಹಾಗೂ ಕವರ್ ಗಳನ್ನು ಬಳಸುತ್ತಿದ್ದರು ಎಂದು ಆರೋಪಿಸಲಾಗಿದೆ. ಮೊದಲು ಜಾಕೀರ್ […]

3 hours ago

ಉನ್ನಾವೋ ಅತ್ಯಾಚಾರ ಪ್ರಕರಣ- ನಿರ್ಲಕ್ಷ್ಯ ತೋರಿದ 7 ಪೊಲೀಸರು ಸಸ್ಪೆಂಡ್

ಲಕ್ನೋ: ಉನ್ನಾವೋ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಪೊಲೀಸ್ ಅಧಿಕಾರಿಗಳನ್ನು ಉತ್ತರ ಪ್ರದೇಶ ಸರ್ಕಾರವು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಏಳೂ ಜನ ಪೊಲೀಸರು ವೃತ್ತಿಯಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಅಷ್ಟೇ ಅಲ್ಲದೆ ಉನ್ನಾವೋ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣ ಹಾಗೂ ಕಾನೂನು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಅಧಿಕಾರಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲಾಗುತ್ತಿದೆ ಎಂದು...

ವರದಕ್ಷಿಣೆ ನೀಡದ್ದಕ್ಕೆ ಅಪ್ರಾಪ್ತೆ ಗೆಳತಿಯನ್ನ ಜೀವಂತವಾಗಿ ಸುಟ್ಟ ಪ್ರಿಯಕರ

7 hours ago

ಅಗರ್ತಲಾ: ವರದಕ್ಷಿಣೆ ತಂದಿಲ್ಲವೆಂದು ಪ್ರಿಯಕರ ಹಾಗೂ ಅವನ ತಾಯಿ ಸೇರಿ 17ರ ಬಾಲಕಿಯನ್ನು ಜೀವಂತವಾಗಿ ಸುಡುವ ಮೂಲಕ ವಿಕೃತಿ ಮೆರೆದಿದ್ದಾರೆ. ದಕ್ಷಿಣ ತ್ರಿಪುರಾ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಬಾಲಕಿಯ ದೇಹ ಶೇ.90ರಷ್ಟು ಸುಟ್ಟಿದ್ದು, ಶನಿವಾರ ಜಿ.ಪಿ.ಪಂತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವಿಪರೀತ...

ನದಿಗೆ ಹಾರಿದ ಮಹಿಳೆ- ಜೀವವನ್ನೇ ಪಣಕ್ಕಿಟ್ಟು ರಕ್ಷಿಸಿದ ಎಎಸ್‍ಐ

7 hours ago

ಹೈದರಾಬಾದ್: ಸೈಬರಾಬಾದ್ ಎನ್‍ಕೌಂಟರ್ ಮೂಲಕ ಹೈದರಾಬಾದ್ ಪೊಲೀಸರು ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದರು. ಅದೇ ರೀತಿ ಇದೀಗ ಎಎಸ್‍ಐ ಮಹಿಳೆಯ ಪ್ರಾಣ ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಕೆ.ಮಾಣಿಕ್ಯಲ ರಾವ್ ಅವರು ನದಿಗೆ...

ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಅಂತ್ಯಕ್ರಿಯೆ- ಕೊನೆಗೂ ಬರಲಿಲ್ಲ ಯೋಗಿ ಆದಿತ್ಯನಾಥ್

8 hours ago

ಲಕ್ನೋ: ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ ಉತ್ತರ ಪ್ರದೇಶದ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಅಂತ್ಯಸಂಸ್ಕಾರ ಇಂದು ನೆರವೇರಿತು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬರುವವರೆಗೂ ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಮೃತ ಸಂತ್ರಸ್ತೆಯ ಕುಟುಂಬಸ್ಥರು ಪಟ್ಟು ಹಿಡಿದಿದ್ದರು. ಆದರೆ ಯೋಗಿ ಆದಿತ್ಯನಾಥ್...

ಅತ್ಯಾಚಾರ, ಭ್ರಷ್ಟಾಚಾರ, ಭಯೋತ್ಪಾದನೆ ನೆಹರು ಕುಟುಂಬದ ಕೊಡುಗೆ: ಸಾಧ್ವಿ ಪ್ರಾಚಿ

9 hours ago

ನವದೆಹಲಿ: ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ವಿಶ್ವ ಹಿಂದು ಪರಿಷದ್ ನಾಯಕಿ ಸಾಧ್ವಿ ಪ್ರಾಚಿ, ಅತ್ಯಾಚಾರ, ಭ್ರಷ್ಟಾಚಾರ, ಭಯೋತ್ಪಾದನೆ ಎಲ್ಲವೂ ಸಮಾಜಕ್ಕೆ ನೆಹರು ಕುಟುಂಬದ ಕೊಡುಗೆ ಎಂದು ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಾಧ್ವಿ ಪ್ರಾಚಿ, ಭಾರತ ಅತ್ಯಾಚಾರದ...

ಮನುಷ್ಯರಂತೆಯೇ ಬಟ್ಟೆ ತೊಳೆಯುತ್ತೆ ಚಿಂಪಾಜಿ

9 hours ago

– ಹೇಳಿಕೊಡದಿದ್ದರೂ, ನೋಡಿಯೇ ಕಲಿತ ಬುದ್ಧಿವಂತ ನವದೆಹಲಿ: ಬುದ್ಧಿವಂತ ಪ್ರಾಣಿ, ಮನುಷ್ಯರು ಮಾಡಿದ್ದನ್ನು ಅನುಸರಿಸುವ ಪ್ರಾಣಿ ಎಂದು ಕರೆಸಿಕೊಳ್ಳುವ ಚಿಂಪಾಂಜಿ ಪಝಲ್ ಸೇರಿದಂತೆ ವಿವಿಧ ರೀತಿಯ ಚಟುವಟಿಕೆ ಮಾಡುವುದನ್ನು ನೋಡಿದ್ದೀರಿ. ಇದೀಗ ಮಾನವರಂತೆ ಬಟ್ಟೆಯನ್ನೂ ತೊಳೆದಿದ್ದು, ವಿಡಿಯೋ ಸಖತ್ ವೈರಲ್ ಆಗಿದೆ....

ಮದುವೆ ಮಾಡಿಸಿಲ್ಲ ಎಂದು ಹನುಮನ ಮೂರ್ತಿಯನ್ನು ಧ್ವಂಸಗೊಳಿಸಿದ ಯುವಕ

10 hours ago

ಜೈಪುರ: ತನಗೆ ಮದುವೆ ಮಾಡಿಸಿಲ್ಲ ಎಂದು ಯುವಕನೋರ್ವ ಗುಡಿಯಲ್ಲಿದ್ದ ಹನುಮನ ಮೂರ್ತಿಯನ್ನು ಧ್ವಂಸಗೊಳಿಸಿರುವ ಘಟನೆ ರಾಜಸ್ಥಾನ ಜೈಪುರ ಜಿಲ್ಲೆಯ ಛೊಮು ಪಟ್ಟಣದಲ್ಲಿ ನಡೆದಿದೆ. ಭೂಷಣ್ ಹನುಮನ ಮೂರ್ತಿ ಧ್ವಂಸಗೊಳಿಸಿದ ಯುವಕ. ಮದುವೆ ಮಾಡಿಸು ಎಂದು ಹನುಮಂತನನ್ನು ಭೂಷಣ್ ಪ್ರತಿದಿನ ಪೂಜಿಸುತ್ತಿದ್ದನು. ತನ್ನ...