Wednesday, 23rd August 2017

Recent News

2 weeks ago

ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಅಲ್ಲಿಪೂರ ವಾರಿತಾಂಡಾದ ಮಕ್ಕಳಿಗೆ ಕೊನೆಗೂ ಸಿಕ್ತು ಬಿಸಿಯೂಟ

ಯಾದಗಿರಿ: ಎಲ್ಲಾ ಸರ್ಕಾರಿ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆಯಿದೆ. ಆದರೆ ಯಾದಗಿರಿ ತಾಲೂಕಿನ ಅಲ್ಲಿಪೂರ ವಾರಿತಾಂಡದ ಸರ್ಕಾರಿ ಪ್ರಾಥಮೀಕ ಶಾಲೆಯ ಮಕ್ಕಳಿಗೆ ಎರಡು ವರ್ಷಗಳಿಂದ ಮಧ್ಯಾಹ್ನದ ಬಿಸಿಯೂಟ ಸಿಗುತ್ತಿರಲಿಲ್ಲ. ಈ ಕುರಿತು ಪಬ್ಲಿಕ್ ಟಿವಿ ಜೂನ್ 27ರಂದು ವಿಸ್ತೃತವಾಗಿ ವರದಿ ಮಾಡಿತ್ತು. ಪಬ್ಲಿಕ್ ಟಿವಿಯ ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಶಾಲೆಯ ಆವರಣದಲ್ಲಿದ್ದ ಪಾಳು ಬಿದ್ದಿದ್ದ ಬಿಸಿಯೂಟ ಕೊಠಡಿಯನ್ನು ದುರಸ್ತಿಗೊಳಿಸಿ ಅಡುಗೆ ಮಾಡಲು ಬೇಕಾಗುವ ವ್ಯವಸ್ಥೆಯನ್ನು ಮಾಡಿದ್ದಾರೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆ […]

3 weeks ago

ಯಾದಗಿರಿಯಲ್ಲಿ ಧಾರಾಕಾರ ಮಳೆ: ರೈತರ ಮೊಗದಲ್ಲಿ ಸಂತಸ

ಯಾದಗಿರಿ: ಬಿಸಿಲ ನಾಡು ಯಾದಗಿರಿಯಲ್ಲಿ ಇಂದು ಬೆಳಗ್ಗೆ ಅರ್ಧಗಂಟೆಗಳ ಕಾಲ ಧಾರಾಕಾರ ಮಳೆ ಸುರಿದಿದ್ದು ಜಿಲ್ಲೆಯ ರೈತರಲ್ಲಿ ಮಂದಹಾಸ ಮೂಡಿಸಿದೆ. ಮುಂಗಾರು ಬೆಳೆಗೆ ವಾಡಿಕೆ ಮಳೆ ಆಗಿಲ್ಲ. ಹೀಗಾಗಿ ಯಾದಗಿರಿ, ಶಾಹಪೂರ, ಸೂರಪೂರ ಹಾಗೂ ಗುರಮಿಟ್ಕಲ್ ಭಾಗದಲ್ಲಿ ಬಿತ್ತನೆ ಮಾಡಿದ ರೈತರ ಬೆಳೆಗೆ ಮಳೆ ಬಂದು ಕೊಂಚನೆಮ್ಮದಿ ನೀಡಿದೆ. ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ನಗರದಲ್ಲಿ ಜನಜೀವನ...

ಈ ಶಾಲೆಯ ಮಕ್ಕಳು 2 ವರ್ಷದಿಂದ ಬಿಸಿಯೂಟದ ರುಚಿಯನ್ನೇ ಕಂಡಿಲ್ಲ!

4 weeks ago

ಯಾದಗಿರಿ: ಶಾಲೆ ಪ್ರಾರಂಭವಾಗಿ ಎರಡು ವರ್ಷ ಕಳೆದ್ರೂ ಯಾದಗಿರಿ ತಾಲೂಕಿನ ಅಲ್ಲಿಪೂರ ವಾರಿ ತಾಂಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳೂ ಇದೂವರೆಗೂ ಬಿಸಿಯೂಟದ ರುಚಿಯನ್ನು ಮಾತ್ರ ಕಂಡಿಲ್ಲ. ಹೌದು. ಈ ಹಿಂದೆ ಶಿಕ್ಷಕರು ಇಲ್ಲವೆಂಬ ಕಾರಣ ನೀಡಿ ಅಲ್ಲಿಪೂರದ ಶಾಲೆಯನ್ನು...

ಟ್ರಾಕ್ಟರ್‍ಗೆ ಬೈಕ್ ಡಿಕ್ಕಿ: ಸ್ಥಳದಲ್ಲಿ ಇಬ್ಬರ ಸಾವು

1 month ago

ಯಾದಗಿರಿ: ಟ್ರಾಕ್ಟರ್‍ಗೆ ಬೈಕ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಬೈಕ್ ಸವಾರ ಮತ್ತು ಹಿಂಬದಿ ಸವಾರ ಇಬ್ಬರೂ ಸಾವನ್ನಪ್ಪಿರುವ ಘಟನೆ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನಳ್ಳಿ ಗ್ರಾಮದ ಮಡಿವಾಳಪ್ಪ (27), ಗೊಲ್ಲಾಳಪ್ಪ(26) ಮೃತಪಟ್ಟ ವ್ಯಕ್ತಿಗಳು....

ಶಾಲೆ ಆರಂಭವಾಗಿ 2 ತಿಂಗ್ಳಾದ್ರೂ ವಿದ್ಯಾರ್ಥಿಗಳಿಗೆ ಇನ್ನೂ ಸಿಕ್ಕಿಲ್ಲ ಪಠ್ಯಪುಸ್ತಕ

1 month ago

ಯಾದಗಿರಿ: ಸರ್ಕಾರ ಮಕ್ಕಳಿಗೆ ಶಿಕ್ಷಣ ನೀಡಲು ಕೋಟ್ಯಾಂತರ ರೂಪಾಯಿ ವೆಚ್ಛ ಮಾಡುತ್ತಿದೆ. ಆದರೆ ಶಿಕ್ಷಣ ಇಲಾಖೆ ಎಡವಟ್ಟಿನಿಂದ ಸರ್ಕಾರದ ಹಣ ಪೋಲಾಗುವಂತಾಗಿದೆ. ಯಾಕಂದ್ರೆ ಬಡ ಗ್ರಾಮೀಣ ಮಕ್ಕಳ ಕೈಗೆ ಇನ್ನೂ ಉಚಿತ ಪಠ್ಯಪುಸ್ತಕ ಸಿಕ್ಕಿಲ್ಲ. ಶಾಲೆ ಆರಂಭವಾಗಿ ಎರಡು ತಿಂಗಳು ಗತಿಸಿದ್ರೂ...

ಟಂಟಂಗೆ ಟ್ರ್ಯಾಕ್ಟರ್ ಡಿಕ್ಕಿ: ಓರ್ವ ಸಾವು, 7 ಜನರಿಗೆ ಗಾಯ

1 month ago

ಯಾದಗಿರಿ: ಚಾಲಕನ ನಿಯಂತ್ರಣ ತಪ್ಪಿ ಟಂಟಂಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು 7 ಜನರಿಗೆ ಗಾಯಗಳಾದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಯಾದಗಿರಿ ತಾಲೂಕಿನ ಚಿನ್ನಕಾರ ಬಳಿ ಈ ಘಟನೆ ಸಂಭವಿಸಿದೆ. ಕರಣಗಿ ನಿವಾಸಿ ಭದ್ರಪ್ಪ...

ಮಕ್ಕಳಾಗದ್ದಕ್ಕೆ ಪತ್ನಿಗೆ ವಿಷ ಕೊಟ್ಟು ಹತ್ಯೆಗೈದ ಪೊಲೀಸ್!

1 month ago

ಯಾದಗಿರಿ: ಮಕ್ಕಳಾಗದ್ದಕ್ಕೆ ಪತ್ನಿಗೆ ಪೇದೆ ಪತಿ ವಿಷ ಕೊಟ್ಟು ಸಾಯಿಸಿದ ಅಮಾನವೀಯ ಘಟನೆ ಯಾದಗಿರಿಯ ಗ್ರಾಮೀಣ ಠಾಣೆಯ ಪೊಲೀಸ್ ವಸತಿ ಗೃಹದಲ್ಲಿ ನಡೆದಿದೆ. ಈ ಘಟನೆ ಭಾನುವಾರ ನಡೆದಿದ್ದು, ಸೋಮವಾರ ಪತ್ನಿ ಹಣಮಂತಿ ಚಿಕಿತ್ಸೆ ಫಲಕಾರಿಯಾಗದೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ....

ಕುಡಿಯಲು ಹಣ ಕೊಡಲಿಲ್ಲವೆಂದು ತಾಯಿಯನ್ನೇ ದೊಣ್ಣೆಯಿಂದ ಹೊಡೆದು ಕೊಂದ!

1 month ago

ಯಾದಗಿರಿ: ಮದ್ಯ ಕುಡಿಯಲು ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಮಗನೇ ತಾಯಿಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ನಡೆದಿದೆ. ಅಮಾತೆವ್ವ ಕಂಪ್ಲಿ(70) ಮಗನಿಂದಲೇ ಹತಳಾದ ತಾಯಿ. ಅಮಾತೆವ್ವರ ಮಗ ರಾಮಣ್ಣ ತಾಯಿಗೆ ಪ್ರತಿಬಾರಿಯೂ ಕುಡಿಯಲು ಹಣ...