Monday, 20th November 2017

Recent News

44 mins ago

ಮಧ್ಯರಾತ್ರಿ ಹೊತ್ತಿ ಉರಿದ ಅಟೋಮೊಬೈಲ್ ಅಂಗಡಿ!

ವಿಜಯಪುರ: ಜಿಲ್ಲೆಯಲ್ಲಿ ಅಟೋಮೊಬೈಲ್ ಅಂಗಡಿಯೊಂದು ಮಧ್ಯರಾತ್ರಿ ಹೊತ್ತಿ ಉರಿದಿದೆ. ವಿಜಯಪುರ ಜಿಲ್ಲೆ ನಾಲ್ವತವಾಡ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಸಂಗಣ್ಣ ಕುಂಬಾರ್ ಅವರಿಗೆ ಸೇರಿದ ಗುರುದೇವ ಸದಾನಂದ ಅಟೋ ಮೊಬೈಲ್ ಶಾಪ್ ಸುಟ್ಟು ಕರಕಲಾಗಿದೆ. ಘಟನೆಯಿಂದ 15 ಲಕ್ಷ ರೂ. ಅಧಿಕ ಹಾನಿಯಾಗಿದೆ ಎಂಬುದಾಗಿ ತಿಳಿದುಬಂದಿದೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ.

2 days ago

ಮೌಢ್ಯಕ್ಕೆ ಜೈ- ಛಟ್ಟಿ ಅಮವಾಸ್ಯೆ ಹಿನ್ನೆಲೆ ಸಭೆಯನ್ನು ಮೂಂದೂಡಿದ ಕಾಂಗ್ರೆಸ್ ಜಿ.ಪಂ. ಅಧ್ಯಕ್ಷೆ

ವಿಜಯಪುರ: ರಾಜ್ಯದಲ್ಲಿ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ಸಿಎಂ ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದಾರೆ. ಆದರೆ ವಿಜಯಪುರದ ಜಿಲ್ಲಾ ಪಂಚಾಯತ್‍ನ ಕಾಂಗ್ರೆಸ್ ಅಧ್ಯಕ್ಷೆ ನೀಲಮ್ಮ ಮೇಟಿ ಇಂದು ನಡೆಯಬೇಕಿದ್ದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯನ್ನು ಛಟ್ಟಿ ಅಮವಾಸ್ಯೆ ಹಿನ್ನೆಲೆಯಲ್ಲಿ ಮುಂದೂಡಿ ಮೌಢ್ಯಕ್ಕೆ ಜೈ ಎಂದಿದ್ದಾರೆ. ಎಲ್ಲ ಸದಸ್ಯರು ಅಮವಾಸ್ಯೆ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಹೋಗಬೇಕೆಂದು ಒತ್ತಡ ಹಾಕಿದ್ದರಿಂದ ಇಂದು...

ರಾಜಕಾರಣಿಗಳನ್ನು ಹಾಳು ಮಾಡಿದ್ದೇ ಮತದಾರರು: ಎಂಬಿ ಪಾಟೀಲ್

6 days ago

ವಿಜಯಪುರ: ಚುನಾವಣೆ ವೇಳೆಯಲ್ಲಿ ರಾಜಕಾರಣಿಗಳು ನೀಡುವ ಹಣದ ಆಸೆಗೆ ಬಲಿಯಾಗಿ, ಮತದಾರರು ರಾಜಕಾರಣಿಗಳನ್ನು ಹಾಳು ಮಾಡುತ್ತಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ತಾಲೂಕಿನ ಅಡವಿ ಸಂಗಾಪುರ ಗ್ರಾಮದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಕುರಿತು ಮಾತನಾಡಿದ ಅವರು, ಚುನಾವಣೆ...

ಮಕ್ಕಳ ದಿನಾಚರಣೆ ಅಂಗವಾಗಿ ವಿಜಯಪುರ ಸರ್ಕಾರಿ ಶಾಲೆಯ ಮಕ್ಕಳಿಗೆ ಬಂಪರ್ ಗಿಫ್ಟ್

6 days ago

ವಿಜಯಪುರ: ಖಾಸಗಿ ಶಾಲೆಗಳ ಭರಾಟೆಯಲ್ಲಿ ಸರ್ಕಾರಿ ಶಾಲೆಗಳು ವಿಮುಕ ಆಗಿ ಹೊರಟಿವೆ. ಸರ್ಕಾರಿ ಶಾಲೆಗಳಿಗೆ ಜನರು ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಾರೆ. ಆದರೆ ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಸಚಿವ ಎಂ.ಬಿ.ಪಾಟೀಲ್ ಪ್ಲಾನ್ ಮಾಡಿದ್ದಾರೆ. ಸಾಮಾನ್ಯವಾಗಿ ಮಕ್ಕಳ ದಿನಾಚರಣೆ ಬಂದಾಗ...

ಜೆಡಿಎಸ್ ಸ್ವಾಭಿಮಾನ ಯಾತ್ರೆಯಲ್ಲಿ 50 ಸಾವಿರ ರೂ. ಎಗರಿಸಿದ ಕಳ್ಳನಿಗೆ ಬಿತ್ತು ಭರ್ಜರಿ ಗೂಸಾ

1 week ago

ವಿಜಯಪುರ: ಜೆಡಿಎಸ್ ಆಯೋಜಿಸಿರುವ ಉತ್ತರ ಕರ್ನಾಟಕ ಕನ್ನಡಿಗರ ಸ್ವಾಭಿಮಾನ ಯಾತ್ರೆ ಸಮಾವೇಶದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಜೆಡಿಎಸ್ ಕಾರ್ಯಕರ್ತನ ಕಿಸೆ ಕತ್ತರಿಸಿ ಹಣ ಕದಿಯಲು ಯತ್ನಿಸಿದ ಕಳ್ಳನನ್ನು ಸಾರ್ವಜನಿಕರು ಹಿಡಿದು ಥಳಿಸಿದ್ದಾರೆ. ನಗರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ನಡೆಯುತ್ತಿದ್ದ ಯಾತ್ರೆಯ ಸಮಾವೇಶದಲ್ಲಿ...

ಟ್ರ್ಯಾಕ್ಟರ್ ಪಲ್ಟಿ ಸ್ಥಳದಲ್ಲಿಯೇ ಇಬ್ಬರ ದುರ್ಮರಣ- 6 ಮಂದಿಗೆ ಗಂಭೀರ ಗಾಯ

2 weeks ago

ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದು, ಆರು ಜನರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಜಯಪುರ ತಾಲೂಕಿನ ಸಾರವಾಡ ಗ್ರಾಮದ ಬಳಿ ನಡೆದಿದೆ. ಮೂಲತಃ ಹೈದರಾಬಾದ್ ನಿವಾಸಿಗಳಾದ ಬೇಗಂ ತೆಗ್ಗೆಳ್ಳಿ (28) ಹಾಗೂ...

ಭಾರತೀಯ ಸೇನೆಗೆ ಮುಧೋಳ ಆಯ್ಕೆ- ಬಾಗಲಕೋಟೆ, ವಿಜಯಪುರ ಜನರಿಂದ ಮೆಚ್ಚುಗೆ

2 weeks ago

ವಿಜಯಪುರ: ಬಾಗಲಕೋಟೆ ಜಿಲ್ಲೆಯ ಮುಧೋಳ ನಾಯಿಗಳು ರಾಜ್ಯ ಪೊಲಿಸ್ ಇಲಾಖೆಯಲ್ಲಿ ಅಪರಾಧ ಪ್ರಕರಣಗಳ ತನಿಖೆಗೆ ಬಳಸಿಕೊಳ್ಳಲಾಗ್ತಿತ್ತು. ಈ ನಾಯಿಗಳು ಇದೀಗ ಭಾರತೀಯ ಸೇನೆಗೂ ಆಯ್ಕೆ ಆಗಿದೆ. ಇದು ವಿಜಯಪುರ-ಬಾಗಲಕೋಟೆ ಜಿಲ್ಲೆಯ ಹಿರಿಮೆ ಹೆಚ್ಚಿಸಿದೆ. ಈ ತಳಿಯ ನಾಯಿಗಳ ಮೇಲೆ ವಿಜಯಪುರದ ಪ್ರಾಣೇಶ...

ಸಚಿವ ಎಂಬಿ ಪಾಟೀಲ್ ಸೇರಿದಂತೆ 4 ಸಚಿವರ ಫೋನ್ ಕದ್ದಾಲಿಕೆ ಆಗಿದ್ಯಂತೆ – ಮೋದಿ ಮೇಲೆ ಕೈ ಪಡೆ ಅನುಮಾನ

2 weeks ago

ವಿಜಯಪುರ: ಐಟಿ ಅಧಿಕಾರಿಗಳು ನಮ್ಮ ಕರೆಗಳನ್ನು ಕದ್ದಾಲಿಕೆ ಮಾಡುತ್ತಿದ್ದಾರೆಂದು ರಾಜ್ಯ ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ. ವಿಜಯಪುರದ ಭಲೇಶ್ವರದಲ್ಲಿ ಮಾತನಾಡಿದ ಪಾಟೀಲ್, ಐಟಿ ಅಧಿಕಾರಿಗಳು ಒಂದು ವರ್ಷದಿಂದ ನನ್ನ ಫೋನ್ ಟ್ಯಾಪ್ ಮಾಡಿದ್ದಾರೆ. ಅಲ್ಲದೆ ನನ್ನ...