Wednesday, 28th June 2017

Recent News

2 days ago

ರುಬ್ಬುವ ಕಲ್ಲು ಎತ್ತಿ ಹಾಕಿ ತಂದೆಯಿಂದಲೇ ಮಗನ ಬರ್ಬರ ಹತ್ಯೆ!

ಕಾರವಾರ: ಮನೆಗೆ ಹಣ ನೀಡುತ್ತಿಲ್ಲ ಎಂದು ಆರೋಪಿಸಿ ತಂದೆಯೇ ಮಗನನ್ನು ಕೊಲೆ ಮಾಡಿದ ಅಮಾನುಷ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ನಡೆದಿದೆ. ಈ ಘಟನೆ ಅಂಕೋಲಾ ತಾಲೂಕಿನ ಹಾರವಾಡ ಸೀಬರ್ಡ್ ಕಾಲೋನಿಯಲ್ಲಿ ನಡೆದಿದೆ. ವಿನೋದ ಪಾಂಡುರಂಗ ಹರಿಕಂತ್ರ (20) ಎಂಬಾತನ್ನು ತಂದೆ ಪಾಂಡುರಂಗ ನಾರಾಯಣ ಹರಿಕಂತ್ರ (45) ಕೊಲೆ ಮಾಡಿದ್ದಾನೆ. ವಿನೋದ್ ಮೊರಬದ ಅಜ್ಜಿ ಮನೆಯಲ್ಲಿದ್ದು, ಎರಡು ತಿಂಗಳ ಹಿಂದೆಯಿಂದಷ್ಟೇ ಮನೆಯಲ್ಲಿಯೇ ಪೋಷಕರ ಜೊತೆ ಉಳಿದುಕೊಂಡಿದ್ದನು. ಹೀಗಾಗಿ ಮನೆಗೆ ಹಣ ನೀಡುತ್ತಿಲ್ಲ ಎಂದು ಸಿಟ್ಟುಗೊಂಡ ತಂದೆ […]

4 days ago

ಜನರ ಹಣವನ್ನು ಖಾತೆಗೆ ಜಮಾ ಮಾಡದೆ ಸುಮಾರು 1 ಕೋಟಿ ರೂ. ವಂಚಿಸಿ ಪರಾರಿಯಾದ ಅಂಚೆ ಸಿಬ್ಬಂದಿ

ಕಾರವಾರ: ಜನರ ಹಣವನ್ನು ಖಾತೆಗೆ ಜಮಾ ಮಾಡದೇ ವಂಚಿಸಿ ಅಂಚೆ ಸಿಬ್ಬಂದಿ ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬೈತಕೋಲ್‍ನ ಅಂಚೆ ಕಚೇರಿಯಲ್ಲಿ ನೆಡೆದಿದೆ. ಲಕ್ಷ್ಮಣ್ ಗೋವಿಂದ ನಾಯ್ಕ ಎಂಬಾತ ವಂಚಿಸಿ ಪರಾರಿಯಾದ ಶಾಖಾ ಅಂಚೆ ಪಾಲಕನಾಗಿದ್ದಾನೆ. ಮೋಸ ಹೋದ ಖಾತೇದಾರರು ಅಂಚೆ ಕಚೇರಿಯಲ್ಲಿ ಜಮಾಯಿಸಿದ್ದರು. ಕಳೆದ ಬುಧವಾರದಂದು ಖಾತೆದಾರರೊಬ್ಬರು ತಮ್ಮ ಹಣವನ್ನು ಕೇಂದ್ರ...

ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಅಬ್ಬರ

2 weeks ago

ಮಂಗಳೂರು: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಇಂದಿನಿಂದ ಜೂನ್ 16ರವರೆಗೆ ಮಳೆ ಮತ್ತಷ್ಟು ತೀವ್ರವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ. ದಕ್ಷಿಣ...

ದುಬೈ ಕೆಲಸಕ್ಕೆ ಗುಡ್‍ಬೈ- ಬುದ್ಧಿಮಾಂದ್ಯ ಮಕ್ಕಳ ಪಾಲಿನ ತ್ರಿವಿಧ ದಾಸೋಹಿ ಕಾರವಾರದ ಸಿರಿಲ್

3 weeks ago

ಕಾರವಾರ: ಸಮಾಜ ಸೇವೆಗಾಗಿ ವಿದೇಶದಲ್ಲಿ ಸಿಕ್ಕಿರುವ ಕೆಲಸವನ್ನು ಬಿಟ್ಟು ತಾಯ್ನಾಡಿನಲ್ಲಿ ಬುದ್ಧಿಮಾಂದ್ಯರ ಸೇವೆ ಮಾಡುತ್ತಿರುವ ವ್ಯಕ್ತಿಯೇ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಅಳ್ವೆಕೋಡಿಯ ನಿವಾಸಿ ಸಿರಿಲ್ ಲೋಪಿಸ್ ನಮ್ಮ ಪಬ್ಲಿಕ್ ಹೀರೋ. ಬಡತನದಲ್ಲಿ ಹುಟ್ಟಿ ಕಷ್ಟಪಟ್ಟು...

ಸಮುದ್ರ ದಂಡೆಯ ಮೇಲೆ ಸೆಲ್ಫೀ ತೆಗೆಯಲು ಹೋದ ಯುವಕ ನೀರುಪಾಲು

3 weeks ago

ಕಾರವಾರ: ಸಮುದ್ರ ದಂಡೆಯ ಮೇಲೆ ಸೆಲ್ಫೀ ತೆಗೆದುಕೊಳ್ಳಲು ಹೋದ ಯುವಕನೊಬ್ಬ ನೀರಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುವ ಘಟನೆ ಕಾರವಾರ ತಾಲೂಕಿನ ಅಂಕೋಲಾದ ಹನಿ ಬೀಚ್‍ನಲ್ಲಿ ನಡೆದಿದೆ. ಗುರುದರ್ಶನ್ ಶೇಠ್ ಸಮುದ್ರದಲ್ಲಿ ಕೊಚ್ಚಿ ಹೋದ ವಿದ್ಯಾರ್ಥಿ. ಸ್ಥಳದಲ್ಲಿದ್ದ ಗುರುದರ್ಶನ್ ಗೆಳೆಯರು ಈತನನ್ನು ರಕ್ಷಿಸಲು...

ಗೋಕರ್ಣದಲ್ಲಿ ಸಮುದ್ರಪಾಲಾಗುತ್ತಿದ್ದ ಐವರು ವಿದ್ಯಾರ್ಥಿಗಳನ್ನ ರಕ್ಷಿಸಿದ ಪೊಲೀಸ್ ಪೇದೆ

3 weeks ago

ಕಾರವಾರ: ಸಮುದ್ರದಲ್ಲಿ ನೀರುಪಾಲಾಗುತ್ತಿದ್ದ ಐವರನ್ನು ಪೊಲೀಸ್ ಪೇದೆಯೊಬ್ಬರು ಪ್ರವಾಸಿ ಮಿತ್ರರ ಸಹಾಯದಿಂದ ರಕ್ಷಿಸುವ ಮೂಲಕ ಸಮಯ ಪ್ರಜ್ಞೆ ಮೆರೆದಿದ್ದಾರೆ. ಚೆನ್ನೈ ವಿಶ್ವವಿದ್ಯಾಲಯವೊಂದರಲ್ಲಿ ಎಂಜನಿಯರಿಂಗ್ ಕೊನೆಯ ವರ್ಷದಲ್ಲಿ ಓದುತ್ತಿರುವ ವೀರಭದ್ರ ಭಾಸ್ಕರ(30), ಅವಿನಾಶ್ ನಳನ(28), ಅರ್ಪಿತಾ ಶ್ಯಾಮ್(25), ಚಿತ್ರಾ ಗೋವಿಂದರಾವ್ (24) ಹಾಗೂ...

ಕೋಳಿ ಗೂಡಿಗೆ ನುಗ್ಗಿ ಬಾಟಲಿಯನ್ನ ನುಂಗಿದ ನಾಗ! – ವಿಡಿಯೋ ನೋಡಿ

1 month ago

ಕಾರವಾರ: ಶನಿವಾರ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಚಿಪ್ಪಗಿ ಗ್ರಾಮದಲ್ಲಿ ನಾಗರ ಹಾವೊಂದು ಮೊಟ್ಟೆ ಎಂದು ಎರಡೂವರೆ ಅಡಿ ಉದ್ದದ ಅರ್ಧ ಇಂಚು ಪೈಪನ್ನ ನುಂಗಿತ್ತು. ಅಂತಹವುದು ಘಟನೆಯೊಂದು ಗೋವಾದ ಕಾಣ್ ಕೋಣ್ ನಲ್ಲಿ ನಡೆದಿದೆ. ಕಾಣ್ ಕೋಣ್ ಗ್ರಾಮದ ಬಳಿ...

ಮೊಟ್ಟೆ ಎಂದು ತಿಳಿದು ಪೈಪನ್ನೇ ನುಂಗಿದ ನಾಗರಹಾವು!

1 month ago

ಕಾರವಾರ: ನಾಗರಹಾವು ಕೋಳಿ, ಕುರಿ, ನಾಯಿ ನುಂಗುವುದನ್ನು ಕೇಳಿರುತ್ತೀರಿ ಅಥವಾ ನೋಡಿರುತ್ತೀರಿ. ಆದರೆ ಇಲ್ಲಿ ನಾಗರಹಾವೊಂದು ಮೊಟ್ಟೆ ಎಂದು ತಪ್ಪಾಗಿ ತಿಳಿದು ಪೈಪನ್ನ ನುಂಗಿದ ವಿಚಿತ್ರ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಹೊಟ್ಟೆ ಹಸಿವು ತಾಳಲಾರದೆ ಬೇಟೆ ಅರಸಿ ಬಂದ...