Wednesday, 23rd August 2017

Recent News

21 hours ago

ನಾವು ಎಲ್ಲ ಧರ್ಮದ ಸಂಸ್ಥಾಪಕರನ್ನು ಪೂಜಿಸುತ್ತೇವೆ: ಜಿ.ಪರಮೇಶ್ವರ್

ತುಮಕೂರು: ಲಿಂಗಾಯತ ಧರ್ಮದ ವಿಚಾರವನ್ನು ರಾಜಕೀಯ ಪಕ್ಷಗಳು ತೀರ್ಮಾನ ಮಾಡುವುದಲ್ಲ. ಸಮಾಜದ ವಿದ್ವಾಂಸರು, ಅರಿತ ಸ್ವಾಮೀಜಿಗಳು ತೀರ್ಮಾನ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಭಾಗಿಯಾದರೇ ಅದು ರಾಜಕಾರಣವಾಗುತ್ತದೆ. ಅದರಿಂದಲೇ ಕಾಂಗ್ರೆಸ್ ಪಕ್ಷ ಈ ವಿಚಾರದಿಂದ ದೂರ ಇದೆ. ಸರ್ಕಾರಕ್ಕೆ ಮನವಿ ಕೊಟ್ಟಿರುವುದರಿಂದ ಕಾನೂನಿನ ಚೌಕಟ್ಟಿನ ತೀರ್ಮಾನವನ್ನು ಸಿಎಂ ತೆಗೆದುಕೊಳ್ಳುತ್ತಾರೆ ಎಂದರು. ನಾವು ಎಲ್ಲ ಧರ್ಮದ ಸಂಸ್ಥಾಪಕರನ್ನು ಪೂಜಿಸುತ್ತೇವೆ. ಇದರಿಂದ ಈ ವಿಚಾರದಲ್ಲಿ ರಾಜಕೀಯ ಬರಬಾರದು. […]

2 days ago

ಸಿಎಂ ಇಬ್ರಾಹಿಂನನ್ನು ಎಂಎಲ್‍ಸಿ ಮಾಡಿದ್ದೇ ಹೆಚ್ಚು, ಇನ್ನು ಮಂತ್ರಿ ಬೇರೆ ಮಾಡ್ತಾರ?: ಸಿದ್ದರಾಮಯ್ಯ

ತುಮಕೂರು: ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ನಡುವಿನ ಸಂಬಂಧ ಹಳಸಿದ್ಯಾ? ಹೌದು ಎನ್ನುತಿದೆ ಸಿಎಂ ಸಿದ್ದರಾಮಯ್ಯರ ಈ ಹೇಳಿಕೆ. ತುಮಕೂರಿನಲ್ಲಿ ಸಿಎಂ ಸಿದ್ದರಾಮಯ್ಯ ಇಬ್ರಾಹಿಂ ವಿರುದ್ಧ ಹೇಳಿಕೆ ನೀಡಿದ್ದಾರೆ. ಇಬ್ರಾಹಿಂನನ್ನು ಪರಿಷತ್ ಸದಸ್ಯನಾಗಿ ಮಾಡಿದ್ದೇ ಹೆಚ್ಚು. ಇನ್ನೂ ಮಂತ್ರಿ ಸ್ಥಾನ ಕೊಡ್ತೀನಾ ಎಂದು ಹಗುರವಾಗಿ ಮಾತನಾಡಿದ್ದಾರೆ. ಸ್ಥಳೀಯ ಪತ್ರಿಕೆಯೊಂದರಲ್ಲಿ...

ಅಂಧನಾದ್ರೂ, ಟೀ ಮಾರಿ ಸ್ವಾಭಿಮಾನದ ಬದುಕು ಸಾಗಿಸ್ತಿದ್ದಾರೆ ತಿಪಟೂರಿನ ಯೋಗೇಂದ್ರಾಚಾರ್

4 days ago

ತುಮಕೂರು: ಸಾಧಿಸುವ ಹಠ. ಸ್ವಾಭಿಮಾನ ಇದ್ದರೆ ಎಂಥವರೂ ಸಾಧನೆ ಮಾಡ್ತಾರೆ ಅನ್ನೋದಕ್ಕೆ ಇವತ್ತಿನ ಪಬ್ಲಿಕ್ ಹೀರೋ ನಿದರ್ಶನ. ಬಾಲ್ಯದಲ್ಲಿ ಇದ್ದಕ್ಕಿದ್ದಂತೆ ಅಂಧನಾದರೂ ಅಂದದ ಜೀವನ ಕಟ್ಟಿಕೊಂಡಿರುವ ತಿಪಟೂರಿನ ಯೋಗೇಂದ್ರಾಚಾರ್ ಹಿಂದೆ ಒಂದು ಭಾವನಾತ್ಮಕ ಕಥೆಯೂ ಇದೆ. ಹೌದು. ಬಾಲ್ಯದಲ್ಲಿ ಎಲ್ಲರಂತಿದ್ದ ಯೋಗೇಂದ್ರಾಚಾರ್...

ಆಂಬುಲೆನ್ಸ್ ಗೆ ಕಾದು ಸುಸ್ತಾಗಿ ಆಟೋದಲ್ಲೇ ಚಾಲಕನ ಶವ ಸಾಗಿಸಿದ್ರು- ತುಮಕೂರಲ್ಲಿ ಮನಕಲಕುವ ಘಟನೆ

1 week ago

ತುಮಕೂರು: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಶವ ಸಾಗಾಟ ಮಾಡಲು ವಾಹನ ಇಲ್ಲದ ಪರಿಣಾಮ ಆಟೋ ಚಾಲಕನ ಮೃತ ದೇಹವನ್ನು ಆಟೋದಲ್ಲೇ ಸಾಗಿಸಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಈ ಘಟನೆ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆಟೋ ಚಾಲಕ ಶಿವಕುಮಾರ್...

350 ವರ್ಷದ ವಿಗ್ರಹ ಭಗ್ನಗೊಳಿಸಿದ ಕಿಡಿಗೇಡಿಗಳು

2 weeks ago

ತುಮಕೂರು: ಕುಚ್ಚಂಗಿ ಗವಿರಂಗನಾಥಸ್ವಾಮಿ ವಿಗ್ರಹವನ್ನು ಕಿಡಿಗೇಡಿಗಳು ಭಗ್ನಗೊಳಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಪೂಜೆ ಸಲ್ಲಿಸಲು ಅರ್ಚಕ ದೇವರಾಜು ತೆರಳಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಸುಮಾರು 350 ವರ್ಷದ ಇತಿಹಾಸ ಇರುವ ಈ ಐತಿಹಾಸಿಕ ವಿಗ್ರಹದ ಕೈಗಳನ್ನು ಮುರಿದು ವಿರೂಪಗೊಳಿಸಿದ್ದಾರೆ. ಈ...

ಡೆಂಗ್ಯೂ ಜ್ವರಕ್ಕೆ ತುಮಕೂರಿನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಬಲಿ

2 weeks ago

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಮಾರಕ ಡೆಂಗ್ಯೂ ಜ್ವರಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿನಿ ಬಲಿಯಾಗಿದ್ದಾಳೆ. ಸುಷ್ಮಿತಾ ಆರಾಧ್ಯ ಮೃತ ವಿದ್ಯಾರ್ಥಿನಿ. ಈಕೆ ಬೆಂಗಳೂರಿನ ಎಂ.ಎಸ್ ರಾಮಯ್ಯ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತಿದ್ದಳು. ಭಾನುವಾರದಂದು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬೆಂಗಳೂರಿನ...

ಮನೆ ಮುಂದೆ ಮಲಗಿದ್ದ ವ್ಯಕ್ತಿಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರ ಹತ್ಯೆ!

2 weeks ago

ತುಮಕೂರು: ಮನೆ ಮುಂದಿನ ಅಂಗಳದಲ್ಲಿ ಮಲಗಿದ್ದ ವ್ಯಕ್ತಿಯೋರ್ವನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಹಾಗಲವಾಡಿಯಲ್ಲಿ ನಡೆದಿದೆ. 42 ವರ್ಷದ ಲೋಕೇಶ್ ಕೊಲೆಯಾದ ವ್ಯಕ್ತಿ. ಮಂಗಳವಾರ ಮಧ್ಯರಾತ್ರಿ ಸುಮಾರು 1.30ರ ಸುಮಾರಿಗೆ ಬಂದ ದುಷ್ಕರ್ಮಿಗಳು...

ಎಂಗೇಜ್‍ಮೆಂಟ್ ಆದ್ರೂ ತನ್ನ ಜೊತೆ ಎಂಗೇಜ್ ಆಗೆಂದ ಹುಡ್ಗ-ಮುಂದೆ ಏನ್ ಮಾಡ್ದಾ ಗೊತ್ತಾ?

2 weeks ago

ತುಮಕೂರು: ಜಿಲ್ಲೆಯ ಶಿರಾ ಪಟ್ಟಣದಲ್ಲಿ ಪ್ರೀತಿಸಿದ ಯುವತಿಗೆ ಬೇರೊಬ್ಬನ ಜೊತೆ ಎಂಗೇಜ್‍ಮೆಂಟ್ ಆಗಿದ್ದರಿಂದ ರೊಚ್ಚಿಗೆದ್ದ ಪಾಗಲ್ ಪ್ರೇಮಿಯೊಬ್ಬ ತಮ್ಮಿಬ್ಬರ ಪ್ರೇಮ ಸಲ್ಲಾಪದ ದೃಶ್ಯಾವಳಿಯನ್ನು ಯೂಟ್ಯೂಬ್ ಗೆ ಅಪ್ಲೋಡ್ ಮಾಡಿದ್ದಾನೆ. ಮಂಜುನಾಥ್ ಎಂಬಾತನೇ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಯುವಕ. ಮಂಜುನಾಥ್ ಯುವತಿಯೋರ್ವಳನ್ನು...