Monday, 25th September 2017

Recent News

22 hours ago

ವಿನಯ್ ನನ್ನ ಪಿಎ ಅಲ್ಲ: ಕೆಎಸ್ ಈಶ್ವರಪ್ಪ

ಶಿವಮೊಗ್ಗ: ಮಾಧ್ಯಮಗಳಲ್ಲಿ ಕೆ.ಎಸ್.ಈಶ್ವರಪ್ಪ ಪಿಎ ವಿನಯ್ ಎಂದು ಬೇರೆ ಬೇರೆ ಸುದ್ದಿಗಳು ಬರುತ್ತಿವೆ. ಹಾಗಾಗಿ ವಿನಯ್ ನನ್ನ ಪಿಎ ಅಲ್ಲ. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ  ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಇಂದು ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಸಂಬಂಧ ಬೆಂಗಳೂರು ಸಿವಿಲ್ ನ್ಯಾಯಾಲಯ ಈಶ್ವರಪ್ಪ ಪಿಎ ವಿನಯ್ ಎಂದು ಪ್ರಸಾರ ಮಾಡದಂತೆ ಆದೇಶ ನೀಡಿದೆ. ದಯಮಾಡಿ ವಿನಯ್ ನನ್ನ ಪಿಎ ಎಂದು ಪ್ರಸಾರ ಮಾಡಬೇಡಿ ಎಂದು […]

1 day ago

ಪ್ರಾಣದ ಹಂಗು ತೊರೆದು ಕಾಲುವೆಗೆ ಹಾರಿದ-ಮುಳುಗುತಿದ್ದವನ ಜೀವ ಉಳಿಸಿದ

ಶಿವಮೊಗ್ಗ: ತುಂಗಾ ಕಾಲುವೆಯಲ್ಲಿ ಮುಳುಗಿತ್ತಿದ್ದ ಬಾಲಕನನ್ನು ರಕ್ಷಿಸಿದ ದ ಸೇವಾಲಾಲ್ ನಗರದ ಸಿದ್ದಲಿಂಗೇಶ್ವರ ಶಾಲೆಯ ಕೃಷ್ಣನಾಯ್ಕ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ನಗರದ ಹೊರ ವಲಯದ ನವುಲೆ ಸಮೀಪದ ತ್ರಿಮೂರ್ತಿನಗರದ ತುಂಗಾ ಕಾಲುವೆ ಬಳಿ ಐದನೇ ತರಗತಿಯ ದರ್ಶನ್ ಮತ್ತು ಅನೀಷ್ ಆಟವಾಡುತ್ತಿದ್ದರು. ಅಲ್ಲೇ ಬಿದ್ದಿದ್ದ ಟಿವಿ ಪ್ಯಾಕಿಂಗ್‍ನ ಬೆಂಡು ಹಿಡಿದು ನೀರಿನಲ್ಲಿ ತೇಲಲು ಮುಂದಾಗಿದ್ದಾರೆ....

ಪ್ರಧಾನಿಗೆ ಪತ್ರ ಬರೆದು ಸಾರಿಗೆ ಇಲಾಖೆ ಅಧಿಕಾರಿಗಳ ಚಳಿ ಬಿಡಿಸಿದ ವೈದ್ಯ!

1 week ago

ಶಿವಮೊಗ್ಗ: ಜಿಲ್ಲೆಯಿಂದ ವೈದ್ಯರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವ ಮೂಲಕ ಸಾರಿಗೆ ಇಲಾಖೆ ಅಧಿಕಾರಿಗಳ ಮೈ ಚಳಿ ಬಿಟ್ಟು ಕೆಲಸಮಾಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕೇಂದ್ರ ಸರ್ಕಾರದ ಜೆನರ್ಮ್ ಯೋಜನೆಯಡಿ ಶಿವಮೊಗ್ಗಕ್ಕೆ ನಗರ ಸಂಚಾರಕ್ಕೆ ನೂರು ಬಸ್ ಗಳು ಮಂಜೂರು ಆಗಿದ್ದವು....

ಗೋರಕ್ಷಕರ ವಿರುದ್ಧ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಯುವಕ ಅರೆಸ್ಟ್

1 week ago

ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕು ಶಿರಾಳಕೊಪ್ಪದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಫೇಸ್‍ಬುಕ್‍ನಲ್ಲಿ ಕೋಮು ಸಾಮರಸ್ಯ ಕದಡುವಂತ ಪೋಸ್ಟ್ ಹಾಕಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಫೋಸ್ಟ್ ಮಾಡಿದ್ದ ಶಿಕಾರಿಪುರ ತಾಲೂಕಿನ ಮತ್ತಿಕೋಟೆಯ ರಹೀಮ್ ಈಗ ಪೊಲೀಸರ...

ಶಿರಾಳಕೊಪ್ಪ ನಗರದ ಬಿಜೆಪಿ ಅಧ್ಯಕ್ಷ ಮನೆಯ ಮೇಲೆ ಪೆಟ್ರೋಲ್ ಬಾಂಬ್ ದಾಳಿ

2 weeks ago

ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಟೌನ್ ಬಿಜೆಪಿ ಅಧ್ಯಕ್ಷ ಮಂಚಿ ಶಿವಾನಂದ ಅವರ ಮನೆಯ ಮೇಲೆ ದುಷ್ಕರ್ಮಿಗಳು ಸೋಮವಾರ ರಾತ್ರಿ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ. ಮಧ್ಯರಾತ್ರಿ ವೇಳೆಗೆ ಬಾಟಲಿಯಲ್ಲಿ ಪೆಟ್ರೋಲ್ ತುಂಬಿ ಬೆಂಕಿ ಹಚ್ಚಿ ಮನೆಯ ಮುಂಭಾಗದಲ್ಲಿ ಎಸೆದಿದ್ದಾರೆ....

ಯಡಿಯೂರಪ್ಪ ಮಗನ ಕಾರಿಗೆ ಪಾದಾಚಾರಿ ಬಲಿ – ಅತೀ ವೇಗಕ್ಕೆ ಯುವಕ ಸ್ಥಳದಲ್ಲೇ ಸಾವು

3 weeks ago

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಪುತ್ರ, ಶಿಕಾರಿಪುರ ಶಾಸಕ ಬಿ.ವೈ ರಾಘವೇಂದ್ರ ಅವರ ಕಾರಿಗೆ ಪಾದಾಚಾರಿಯೊಬ್ಬರು ಬಲಿಯಾಗಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ಬಳಿಯ ನ್ಯಾಮತಿಯಲ್ಲಿ ಆಟೋ ಇಳಿದು ಹೋಗುತ್ತಿದ್ದ ಸುಮಾರು 20 ವರ್ಷದ ಸುರೇಶ್ ಎಂಬವರಿಗೆ ವೇಗವಾಗಿ ಬಂದ ರಾಘವೇಂದ್ರ...

ಶಿವಮೊಗ್ಗ: 14 ಅಡಿ ಉದ್ದದ ಕಾಳಿಂಗನ ರಕ್ಷಣೆ

4 weeks ago

ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕು ಚಿಕ್ಕಜೇನಿ ಗ್ರಾಮದ ಸಮೀಪ ಕೊಳವಳ್ಳಿಯ ಚಂದ್ರೇಗೌಡ ಎಂಬವರ ಮನೆ ಸಮೀಪ ಬಂದಿದ್ದ 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ತಜ್ಞ ಪ್ರಭಾಕರ್ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಬುಧವಾರ ಸಂಜೆ ಕಂಡು ಬಂದ ಈ...

ಗಣಪತಿ ವಿಸರ್ಜನೆ ವೇಳೆ ಯುವಕ ನೀರಿನಲ್ಲಿ ಮುಳುಗಿ ಸಾವು

4 weeks ago

ಶಿವಮೊಗ್ಗ: ಗಣಪತಿ ವಿಸರ್ಜನೆ ವೇಳೆ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಸೊರಬ ತಾಲೂಕಿನ ಕೈಸೋಡಿಯಲ್ಲಿ ಈ ಘಟನೆ ಸಂಭವಿಸಿದೆ. ಬೂಧೇಶ್ (22) ಮೃತ ದುರ್ದೈವಿ. ಗುರುವಾರ ರಾತ್ರಿ ತಮ್ಮ ಮನೆಯ ಮುಂದಿರುವ ಕೆರೆಗೆ ಗಣಪತಿ ವಿಸರ್ಜನೆಗೆ ಹೋದಾಗ...