Wednesday, 28th June 2017

Recent News

13 hours ago

9ನೇ ಕ್ಲಾಸ್ ವಿದ್ಯಾರ್ಥಿಯನ್ನ ಯಾದಗಿರಿಯಲ್ಲಿ ಕಿಡ್ನಾಪ್ ಮಾಡಿ ರಾಯಚೂರಲ್ಲಿ ಬಿಟ್ಟು ಹೋದ್ರಂತೆ!

ರಾಯಚೂರು: ಯಾದಗಿರಿಯ ನಾಗರಬೆಟ್ಟದಲ್ಲಿ ಅಪಹರಣಕ್ಕೊಳಗಾಗಿದ್ದ ಬಾಲಕನನ್ನ ಅಪಹರಣಕಾರರು ರಾಯಚೂರಿನ ರೈಲ್ವೇ ನಿಲ್ದಾಣದ ಬಳಿ ಬಿಟ್ಟು ಪರಾರಿಯಾಗಿದ್ದಾರೆ. ಇಂದು ಬೆಳಗಿನ ಜಾವ ಯಾದಗಿರಿಯ ನಾರಾಯಣಪುರದಿಂದ ನಾಗರಬೆಟ್ಟಕ್ಕೆ ಶಾಲೆಗೆ ತೆರಳುತ್ತಿದ್ದ 9ನೇ ತರಗತಿ ವಿದ್ಯಾರ್ಥಿ ಶರತ್‍ನನ್ನ ನಾಲ್ಕು ಜನ ಓಮಿನಿ ವ್ಯಾನ್‍ನಲ್ಲಿ ಅಪಹರಿಸಿದ್ದರು. ಕೈಕಾಲಿಗೆ ಹಗ್ಗ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ರಾಯಚೂರು ವರೆಗೆ ಶರತ್‍ನನ್ನ ಕರೆದುಕೊಂಡು ಬಂದಿದ್ದಾರೆ. ಆದ್ರೆ ಅದೇನಾಯಿತೋ ರಾಯಚೂರು ರೈಲ್ವೇ ನಿಲ್ದಾಣದ ಬಳಿ ಬಿಟ್ಟು ಹೋಗಿದ್ದಾರೆ ಅಂತ ಬಾಲಕ ಶರತ್ ಹೇಳಿದ್ದಾನೆ. ಆಟೋ ಚಾಲಕನೊಬ್ಬನ ಸಹಾಯದಿಂದ […]

18 hours ago

ಗೋಮಾಂಸ ಸೇವನೆ ಮೂಲಕ ಕ್ರೌರ್ಯ ಮೆರೆದಿದ್ದಾರೆ: ಪಲಿಮಾರು ಶ್ರೀ ಕಿಡಿ

– ಉಡುಪಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ್ದು ತಪ್ಪಲ್ಲ ರಾಯಚೂರು: ಮೈಸೂರಿನಲ್ಲಿ ಸಾಹಿತಿ ಭಗವಾನ್ ಮತ್ತಿತರರು ಗೋಮಾಂಸ ಸೇವಿಸಿರುವುದು ಮುಸ್ಲಿಂ ಸಮಾಜದ ಮೇಲಿನ ಪ್ರೀತಿಯಿಂದಲ್ಲ ಹಿಂದೂಗಳ ಮೇಲಿನ ದ್ವೇಷದಿಂದ ಅಂತಾ ಪಲಿಮಾರು ಮಠದ ಪೀಠಾಧಿಪತಿ ವಿದ್ಯಾಧೀಶ ತೀರ್ಥ ಶ್ರೀಗಳು ಕಿಡಿಕಾರಿದ್ದಾರೆ. ಇದನ್ನೂಓದಿ: ಅನುಮತಿಯಿಲ್ಲದೇ ಸರ್ಕಾರಿ ಸಭಾಂಗಣದಲ್ಲಿ ಗೋಮಾಂಸ ಸೇವನೆ- ನೊಟೀಸ್ ಜಾರಿಗೆ ಡಿಸಿ ನಿರ್ಧಾರ   ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ...

ಕಲ್ಲಿನ ಕ್ವಾರಿ ಹೊಂಡದಲ್ಲಿ ಬಿದ್ದು ಬಾಲಕರು ಸಾವು

4 days ago

ರಾಯಚೂರು: ನೀರಿನ ಹೊಂಡಕ್ಕೆ ಬಿದ್ದು ಒಂದೇ ಕುಟುಂಬದ ಇಬ್ಬರು ಬಾಲಕರು ಸಾವನ್ನಪ್ಪಿದ ಘಟನೆ ನಗರದ ಆಶ್ರಯ ಕಾಲೋನಿಯಲ್ಲಿ ನಡೆದಿದೆ. 9 ವರ್ಷದ ಶಾಹಿಲ್ ಹಾಗೂ ಮೆಹಬೂಬ್ ಮೃತ ದುರ್ದೈವಿ ಸಹೋದರರು. ಇಲ್ಲಿನ ಬೆಟ್ಟದಲ್ಲಿ ಕಲ್ಲಿನ ಬಂಡೆಗಳನ್ನ ತೆಗೆದಿದ್ದರಿಂದ ಹಾಗೂ ನಿರಂತರವಾಗಿ ನಡೆದ...

ಪ್ರೌಢಶಾಲೆ ನಿರ್ಮಾಣಕ್ಕೆ ಆಗ್ರಹಿಸಿ ಡಿಡಿಪಿಐ ಕಚೇರಿ ಮುಂದೆ ವಿದ್ಯಾರ್ಥಿಗಳ ಧರಣಿ

4 days ago

ರಾಯಚೂರು: ತಾಲೂಕಿನ ಗಂಜಳ್ಳಿ ಗ್ರಾಮದಲ್ಲಿ ಪ್ರೌಢಶಾಲೆ ತೆರೆಯಲು ಒತ್ತಾಯಿಸಿ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಮುಂದೆ ಹೋರಾಟ ನಡೆಸಿದ್ದಾರೆ. ಗ್ರಾಮದಲ್ಲಿ 8ನೇ ತರಗತಿವರೆಗೆ ಮಾತ್ರ ಶಾಲೆ ಇದ್ದು, ಪ್ರೌಢಶಾಲೆಗಾಗಿ ದೂರದ ಊರುಗಳಿಗೆ ಹೋಗಬೇಕಾದ ಅನಿರ್ವಾಯತೆಯಿದೆ. ಹೀಗಾಗಿ ಶಾಲೆಯಿಲ್ಲದ ಕಾರಣ...

ರಾಯಚೂರು: ಸ್ಟೇರಿಂಗ್ ರಾಡ್ ಕಟ್ ಆಗಿ ಕಾಲುವೆಗೆ ಉರುಳಿದ ಬಸ್- ಪ್ರಯಾಣಿಕರು ಪಾರು

5 days ago

ರಾಯಚೂರು: ಸಾರಿಗೆ ಬಸ್ ನ ಸ್ಟೇರಿಂಗ್ ರಾಡ್ ಕಟ್ ಆಗಿ ಬಸ್ ಕಾಲುವೆ ಉರುಳಿದ ಘಟನೆ ಮಾನ್ವಿ ತಾಲೂಕಿನ ಸಿರವಾರ ಬಳಿ ನಡೆದಿದೆ. ವೇಗದಲ್ಲಿದ್ದ ಬಸ್‍ನ ಸ್ಟೇರಿಂಗ್ ರಾಡ್ ಕಟ್ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಗದ್ದೆ ಪಕ್ಕದ ಸಣ್ಣ...

ಯಾದಗಿರಿ: ಅಹಮದಾಬಾದ್-ಚೆನೈ ಎಕ್ಸ್ ಪ್ರೆಸ್ ರೈಲಿನಲ್ಲಿ ಚಾಕು ತೋರಿಸಿ ಹಣ ದೋಚಿದ ಕಳ್ಳರು!

6 days ago

ಯಾದಗಿರಿ/ರಾಯಚೂರು: ಅಹಮದಾಬಾದ್- ಚೆನೈ ಎಕ್ಸ್ ಪ್ರೆಸ್ ರೈಲಿನಲ್ಲಿ ಖದೀಮ ಕಳ್ಳರು ಇಂದು ನಸುಕಿನ ಜಾವ ಸರಣಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ರೈಲು ವಾಡಿಯಿಂದ ರಾಯಚೂರಿಗೆ ತೆರಳುತ್ತಿದ್ದಾಗ ವಾಡಿ-ಯಾದಗಿರಿ ಮಧ್ಯೆ ಗಾಡಿ ಹತ್ತಿದ ಕಳ್ಳರು ಚಾಕು ತೋರಿಸಿ ನಾಲ್ವರು ಪ್ರಯಾಣಿಕರನ್ನು ದೋಚಿದ್ದಾರೆ.  ...

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬೀದರ್ ಎಸಿಬಿ ಸಿಪಿಐ ಪತ್ನಿ

1 week ago

ರಾಯಚೂರು: ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಬೀದರ್ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಸಿಪಿಐ ಪತ್ನಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಯಚೂರಿನ ಮಾನ್ವಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸಿಪಿಐ ಸಿದ್ದರಾಮಯ್ಯ ಸ್ವಾಮಿ ಪತ್ನಿ ಜಯಲಕ್ಷ್ಮಿ ಮಾನ್ವಿ ಪಟ್ಟಣದ ಬಸವೇಶ್ವರ...

ರಾಯಚೂರಿನಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ- ಚರಂಡಿಗೆ ಬಿದ್ದು ಶಿಕ್ಷಕ ಸಾವು

1 week ago

ರಾಯಚೂರು: ನಗರದಲ್ಲಿ ಭಾನುವಾರ ಭಾರೀ ಮಳೆಯಾದ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿದ್ದು, ವ್ಯಕ್ತಿಯೊಬ್ಬರು ಒಳಚರಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಕೊಪ್ಪಳ ಮೂಲದ ಶಿಕ್ಷಕ ಭೀಮಪ್ಪ ಸಾವನ್ನಪ್ಪಿದ ವ್ಯಕ್ತಿ. ನಗರದ ತೀನ್ ಕಂದೀಲ್ ಬಳಿ ಈ ಘಟನೆ ನಡೆದಿದೆ. ಭೀಮಪ್ಪ ರಾತ್ರಿಯೇ ಚರಂಡಿಗೆ ಬಿದ್ದಿದ್ದು ಮಳೆ...