Wednesday, 28th June 2017

Recent News

18 hours ago

ತಮಟೆ ನಗಾರಿಯ ಸದ್ದಿಗೆ ಬೆದರಿ ಕೆಂಪೇಗೌಡ ವೇಷಧಾರಿಯನ್ನು ಕೆಳಕ್ಕೆ ಬೀಳಿಸಿತು ಕುದುರೆ

ಮೈಸೂರು: ನಾಡಪ್ರಭು ಕೆಂಪೇಗೌಡ ಜಯಂತಿ ಹಿನ್ನೆಲೆಯಲ್ಲಿ ಮೆರವಣಿಗೆ ವೇಳೆ ತಮಟೆ ನಗಾರಿಯ ಸದ್ದಿಗೆ ಕುದುರೆ ಬೆದರಿ ರಂಪಾಟ ಮಾಡಿದ ಘಟನೆ ಮೈಸೂರಿನ ಕೆ.ಆರ್. ವೃತ್ತದಲ್ಲಿ ನಡೆದಿದೆ. ಮೈಸೂರಿನಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ವೇಳೆ ಕೆಂಪೇಗೌಡ ವೇಷಧಾರಿಯನ್ನು ಧರಿಸಿದ್ದ ವ್ಯಕ್ತಿಯನ್ನು ಕೆಳಕ್ಕೆ ಬೀಳಿಸಿದೆ. ಕ್ಷಣಕಾಲ ಎಲ್ಲರಲ್ಲೂ ಆತಂಕ ಮೂಡಿತ್ತು. ತಮಟೆ ನಗಾರಿಯ ಸದ್ದಿಗೆ ಹೆದರಿ ಕೆಂಪೇಗೌಡ ವೇಷಧಾರಿ ವ್ಯಕ್ತಿಯನ್ನು ಕೆಳಕ್ಕೆ ಬೀಳಿಸಿದರಿಂದ ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೇ ಕೆಂಪೇಗೌಡ ವೇಷಧಾರಿ ಪಾರಾಗಿದ್ದಾರೆ.

2 days ago

ಮೈಸೂರು: ಆತ್ಮಹತ್ಯೆ ಯತ್ನದ ಲೈವ್ ದೃಶ್ಯ ಮೊಬೈಲ್‍ನಲ್ಲಿ ಸೆರೆ- ಆಸ್ಪತ್ರೆ ಕಟ್ಟಡದಿಂದ ಬಿದ್ದ ವ್ಯಕ್ತಿ ಸ್ಥಿತಿ ಗಂಭೀರ

ಮೈಸೂರು: ಆಸ್ಪತ್ರೆ ಕಟ್ಟಡದ ಮೇಲಿಂದ ಬಿದ್ದು ಅಪರಿಚಿತ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಕಟ್ಟಡದಿಂದ ಕೆಳಕ್ಕೆ ಜಿಗಿಯುತ್ತಿರುವ ಭಯಾನಕ ದೃಶ್ಯ ಸಮೀಪದ ಅಂಗಡಿ ಮಳಿಗೆದಾರರೊಬ್ಬರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೈಸೂರಿನ ಕೆ.ಆರ್.ಆಸ್ಪತ್ರೆ ಆವರಣದಲ್ಲಿರುವ ಆಸ್ಪತ್ರೆ ಕಟ್ಟಡದ ಮೇಲಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಿನಿಮೀಯ ಶೈಲಿಯಲ್ಲಿ ಐದು ಅಂತಸ್ತಿನ...

ಮೈಸೂರಿನಲ್ಲಿ ಮರ್ಯಾದಾ ಹತ್ಯೆ: ತಂದೆಯಿಂದಲೇ ಮಗಳ ಹತ್ಯೆ?

3 days ago

ಮೈಸೂರು: ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆ ಶಂಕೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಪ್ರೀತಿಸಿದ ತಪ್ಪಿಗೆ ಮಗಳನ್ನೇ ತಂದೆಯೇ ಮಾರಣಾಂತಿಕ ಹಲ್ಲೆ ಮಾಡಿ ಹತ್ಯೆ ಮಾಡಿರುವುದಾಗಿ ಆರೋಪಿಸಿ ದೂರು ದಾಖಲಾಗಿದೆ. ನಂಜನಗೂಡು ತಾಲೂಕಿನ ಪಾರ್ವತಿಪುರದಲ್ಲಿ ಈ ಘಟನೆ ನಡೆದಿದ್ದು, ಯುವತಿಯ ಪ್ರಿಯಕರ ಈ ಬಗ್ಗೆ...

ಮೈಸೂರು: ಬೆಳ್ಳಂಬೆಳಗ್ಗೆ ದೇವರ ಕೋಣೆಯಲ್ಲಿ ಬುಸ್ ಎಂದ ನಾಗರ ಹಾವು!

3 days ago

ಮೈಸೂರು: ನಗರದ ಮನೆಯೊಂದರ ದೇವರ ಕೋಣೆಯಲ್ಲಿ ಬೆಳ್ಳಂಬೆಳಗ್ಗೆ ನಾಗರಹಾವೊಂದು ಪ್ರತ್ಯಕ್ಷವಾಗಿದೆ. ಮೈಸೂರಿನ ಬೃಂದಾವನ ಬಡಾವಣೆಯಲ್ಲಿರೋ ನಾಗರಾಜು ಎಂಬುವರ ಮನೆಯ ದೇವರ ಕೋಣೆಯಲ್ಲಿ ನಾಗರ ಹಾವಿನ ಮರಿ ಕಾಣಿಸಿಕೊಂಡಿದೆ. ಈ ಹಾವಿನ ಮರಿ ಕಂಡು ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ...

ತಂದೆಯಾಗುವ ಕುರಿತು ಪ್ರಶ್ನಿಸಿದ್ದಕ್ಕೆ ಮೈಸೂರು ಮಹಾರಾಜ ಯದುವೀರ್ ಹೀಗಂದ್ರು

6 days ago

ಮೈಸೂರು: ವೈಯುಕ್ತಿಕ ಹಾಗೂ ಸಾರ್ವಜನಿಕ ಜೀವನದ ಬಗ್ಗೆ ಒಂದು ಗೆರೆ ಇಟ್ಟುಕೊಂಡಿದ್ದೇನೆ. ಆ ಗೆರೆಯನ್ನ ನಾನು ದಾಟುವುದಿಲ್ಲ, ನೀವು ದಾಟಬೇಡಿ ಅಂತಾ ಮೈಸೂರಿನ ಯದುವಂಶದ ಮಹಾರಾಜ ಯದುವೀರ್ ಹೇಳಿದ್ದಾರೆ. ನಗರದಲ್ಲಿ ಇಂದು ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಈ ವೇಳೆ ತಂದೆಯಾಗುವ ಕುರಿತು...

ಮೈಸೂರಿನಲ್ಲಿ ಮನಕಲಕುವ ಘಟನೆ- ಮಗಳ ಕಾಲೇಜು ಫೀಸ್ ಕಟ್ಟಲಾಗದೆ ತಂದೆ ಆತ್ಮಹತ್ಯೆ

6 days ago

ಮೈಸೂರು: ವ್ಯಕ್ತಿಯೊಬ್ಬರು ಮಗಳ ಓದಿಗೆ ಫೀಸ್ ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ಮೈಸೂರಿನಲ್ಲಿ ನಡೆದಿದೆ. 51 ವರ್ಷದ ಗಂಗಾಧರ್ ಆತ್ಮಹತ್ಯೆ ಮಾಡಿಕೊಂಡವರು. ಇವರು ಮೈಸೂರಿನ ಬೃಂದಾವನ ಬಡಾವಣೆಯ ನಿವಾಸಿಯಾಗಿದ್ದು, ಬಡಾವಣೆಯ ಗಣಪತಿ ದೇವಸ್ಥಾನದಲ್ಲಿ ಪ್ರಸಾದ ತಯಾರಕರಾಗಿದ್ದರು. ಇವರ ಮಗಳು ಬಿಎಸ್ಸಿ...

ವಿಡಿಯೋ: ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ಒಪ್ಪದ ಮಗನಿಗೆ ತಂದೆಯಿಂದ ಹಲ್ಲೆ

6 days ago

ಮೈಸೂರು: ಮತಾಂತರಕ್ಕೆ ಒಪ್ಪದ ಮಗನಿಗೆ ತಂದೆ ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕ್ ನಲ್ಲಿ ನಡೆದಿದೆ. ಪವಿತ್ ಎಂಬಾತನೇ ತಂದೆ ರವಿಯಿಂದ ಹಲ್ಲೆಗೊಳಗಾದ ಮಗ. ಬುಡುಕಟ್ಟು ಜನಾಂಗದ ರವಿ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ...

ವಿಶ್ವ ದಾಖಲೆಯ ಯೋಗ-ಏಕಕಾಲಕ್ಕೆ, ಏಕ ಸ್ಥಳದಲ್ಲಿ 60 ಸಾವಿರ ಜನರಿಂದ ಯೋಗ ಪ್ರದರ್ಶನ

7 days ago

ಮೈಸೂರು: ಇಂದು ನಗರದ ರೇಸ್‍ಕೋರ್ಸ್ ಆವರಣದಲ್ಲಿ ಏಕ ಕಾಲಕ್ಕೆ ಏಕ ಕಾಲದಲ್ಲಿ 60 ಸಾವಿರ ಜನರು ಯೋಗ ಮಾಡುವ ಮೂಲಕ ಸಾಂಸ್ಕøತಿಕ ನಗರಿ ವಿಶ್ವ ದಾಖಲೆ ಬರೆದಿದೆ. 60 ಸಾವಿರ ಮಂದಿಯಿಂದ ಆನ್‍ಲೈನ್ ಮೂಲಕ ನೊಂದಣಿ ಮಾಡಿಕೊಂಡು ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿ...