9 hours ago

ಮಸೀದಿ ಸಂದರ್ಶನ ಕಾರ್ಯಕ್ರಮಕ್ಕೆ ಗವಿಮಠದ ಸ್ವಾಮೀಜಿ ಚಾಲನೆ

– ಕೋಮು ಸೌಹಾರ್ದತೆ ಮೂಡಿಸಲು ಮುಂದಾದ ಮುಸ್ಲಿಂ ಬಾಂಧವರ ಕೊಪ್ಪಳ: ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಕೋಮು ಸೌಹಾರ್ದತೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಧರ್ಮ ಧರ್ಮಗಳ ನಡುವೆ ಕೋಮು ಸೌಹಾರ್ದತೆ ಮೂಡಿಸುವ ನಿಟ್ಟಿನಲ್ಲಿ ಜಮಾತ್-ಎ-ಇಸ್ಲಾಂ ಹಿಂದ್ ಸಂಘಟನೆ ಮಸೀದಿ ಸಂದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದೆ. ನೂರಾರು ಹಿಂದೂಗಳು ಮಸೀದಿಗೆ ಭೇಟಿ ನೀಡಿ ಇಸ್ಲಾಂ ಧರ್ಮ ಹಾಗೂ ಮಸೀದಿ ಬಗ್ಗೆ ತಿಳಿದುಕೊಂಡರು. ಕೊಪ್ಪಳದ ನಗರದ ಸ್ಟೇಷನ್ ರಸ್ತೆಯಲ್ಲಿರುವ ಮಸ್ಜಿದ್-ಎ-ಅಲ್ಲಾದಲ್ಲಿ ಇಂದು ವಿಭಿನ್ನ ಕಾರ್ಯಕ್ರಮವೊಂದು ನಡೆಯಿತು. ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಗಳು ಮಸೀದಿಗೆ […]

18 hours ago

ಸಾವಿನಲ್ಲೂ ಒಂದಾದ ಸ್ನೇಹಿತರನ್ನು ಕಂಡು ಕಣ್ಣೀರಿಟ್ಟ ಪೊಲೀಸರು

ಕೊಪ್ಪಳ: ಶ್ವಾನ ದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶ್ವಾನವೊಂದು ಸಾವನ್ನಪ್ಪಿದ ರಾತ್ರಿಯೇ ಅದರ ಸ್ನೇಹಿತನಾಗಿದ್ದ ಇನ್ನೊಂದು ಶ್ವಾನ ಕೂಡ ಕೊನೆಯುಸಿರೆಳೆದಿದ್ದು, ಈ ಮೂಲಕ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಹೌದು. ಕೊಪ್ಪಳ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚೇತಕ್ ಹಾಗೂ ಟೆರರ್ ಹೆಸರಿನ ಎರಡು ಶ್ವಾನಗಳು ಶನಿವಾರ ಅಸುನೀಗಿವೆ. ಈ ಎರಡು ಶ್ವಾನಗಳು ಹಲವು...

62ರಲ್ಲೂ ಕುಗ್ಗದ ಪರಿಸರ ಪ್ರೇಮ-ಗಿಡ ಕಡಿದವರಿಗೆ ಕಲಿಸ್ತಾರೆ ಪಾಠ

5 days ago

ಬಾಗಲಕೋಟೆ: ಸರ್ಕಾರಿ ಜಾಗ ಖಾಲಿ ಇದ್ದರೆ ಸಾಕು ಒತ್ತುವರಿ ಮಾಡಿಕೊಳ್ಳೋಕೆ ಪ್ಲಾನ್ ಮಾಡಿಕೊಳ್ಳುವರು ಹೆಚ್ಚು. ಇವತ್ತಿನ ನಮ್ಮ ಪಬ್ಲಿಕ್ ಹೀರೋ ಯಲ್ಲಪ್ಪ ಶಿಂಧೆ, ಸರ್ಕಾರಿ ಜಾಗದಲ್ಲಿ ವನೋತ್ಸವ ಮಾಡ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಉತ್ತೂರು ಗ್ರಾಮದ ನಿವಾಸಿಯಾಗಿರುವ ಯಲ್ಲಪ್ಪ ಶಿಂಧೆ...

ತುಂತುರು ಮಳೆಯಿಂದಾಗಿ ನೆಲ ಕಚ್ಚಿದ ಬೆಳೆ

5 days ago

ಶಿವಮೊಗ್ಗ/ಕೊಪ್ಪಳ: ರಾಜ್ಯದ ಹಲವೆಡೆ ಆಗುತ್ತಿರುವ ಅಕಾಲಿಕ ಮಳೆಗೆ ರೈತರು ಕಂಗಾಲಾಗಿದ್ದಾರೆ. ಕೊಪ್ಪಳದ ಗಂಗಾವತಿ ತಾಲೂಕಿನಲ್ಲಿ ಎರಡ್ಮೂರು ದಿನಗಳಿಂದ ಜಿಟಿಜಿಟಿ ಮಳೆ ಆಗುತ್ತಿದ್ದು, ಭತ್ತದ ಬೆಳೆ ನೆಲಕಚ್ಚಿದೆ. ಸೋನೆ ಮಳೆಯಲ್ಲೇ ಬೆಳೆ ಕಟಾವು ಮಾಡಿದ ರೈತರಿಗೆ ಭತ್ತದ ರಾಶಿಯನ್ನ ರಕ್ಷಿಸಿಕೊಳ್ಳುವುದೇ ಕಷ್ಟಸಾಧ್ಯವಾಗಿದೆ. ಭತ್ತದ...

ಐತಿಹಾಸಿಕ ಸ್ಥಳಗಳ ಉಳಿವಿಗಾಗಿ ಸರ್ಕಾರಿ ನೌಕರರು ಪಣ

5 days ago

– ಯುವ ಜನಾಂಗಕ್ಕೆ ಸ್ಥಳ ಪರಿಚಯದ ಜೊತೆಗೆ ಸ್ವಚ್ಛತೆ – ವಿದ್ಯಾರ್ಥಿಗಳೂ ಸಾಥ್ ಕೊಪ್ಪಳ: ಅವರೆಲ್ಲ ಸರ್ಕಾರಿ ನೌಕರರು, ನಿತ್ಯ ಕೆಲಸ ಮುಗಿಸಿ ಮನೆಗೆ ಹೋದರೆ ಸಾಕು ಅಂದುಕೊಳ್ಳುವವರು. ಆದರೆ ಇಂದು ಆ ಸರ್ಕಾರಿ ನೌಕರರೆಲ್ಲ ಒಂದು ಐತಿಹಾಸಿಕ ಸ್ಥಳದ ಉಳಿವಿಗೆ...

ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಸರ್ಕಾರಕ್ಕೂ ಮುನ್ನ ಪುಟ್ಟ ಕಂದಮ್ಮಗಳ ನೆರವಿಗೆ ನಿಂತ ಎಚ್‍ಡಿಕೆ

6 days ago

ಕೊಪ್ಪಳ/ಚಿಕ್ಕಬಳ್ಳಾಪುರ: ಗಂಗಾವತಿಯಲ್ಲಿ ಬಡ ಕುಟುಂಬವೊಂದರ ಎರಡು ಮಕ್ಕಳು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈ ವರದಿಗೆ ಆರೋಗ್ಯ ಸಚಿವರು ಸ್ಪಂದಿಸುವ ಮೊದಲೇ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸ್ಪಂದಿಸಿ ಮಾನವೀಯತೆ ಮೆರದಿದ್ದಾರೆ. ಗಂಗಾವತಿ ನಗರದ ದುರ್ಗಪ್ಪ...

11 ತಿಂಗಳ ಪೋರಿಗೆ ಸಕ್ಕರೆ ಕಾಯಿಲೆ- 3 ವರ್ಷದ ಮಗನಿಗೆ ಹೃದಯದ ಸಮಸ್ಯೆ

1 week ago

-ಫ್ರಿಡ್ಜ್ ಇಲ್ಲದೇ ಮಡಿಕೆಯಲ್ಲಿ ಔಷಧಿ ಇರಿಸೋ ತಂದೆ -ಸಹಾಯದ ನಿರೀಕ್ಷೆಯಲ್ಲಿ ಬಡ ದಂಪತಿ ಕೊಪ್ಪಳ: ಹೊಟ್ಟೆ ತುಂಬ ಬೇಕಾದ್ರೆ ಪ್ರತಿದಿನ ದುಡಿಯಲೇ ಬೇಕು. ಅಂತಹ ಬಡಕುಟುಂಬದ ದಂಪತಿಗೆ ಮುದ್ದಾದ ಎರಡು ಕಂದಮ್ಮಗಳಿವೆ. ಬಡತನವಿದ್ದರೆ ಪರವಾಗಿಲ್ಲ ಹೇಗೋ ಜೀವನ ನಡೆಸಬಹುದಿತ್ತು. ಆದರೆ ದಂಪತಿಯ...

ಮುಳ್ಳಿನ ರಾಶಿ ಮೇಲೆ ಜಿಗಿತ, ಕುಣಿತ- ಆಂಜನೇಯ ಕಾರ್ತಿಕೋತ್ಸವದಲ್ಲಿ ವಿಚಿತ್ರ ಭಕ್ತಿಭಾವ

1 week ago

ಕೊಪ್ಪಳ: ನಮ್ಮ ಕಾಲಿಗೆ ಆಕಸ್ಮಾತ್ ಒಂದು ಮುಳ್ಳು ಚುಚ್ಚಿದ್ರೆ ಸಾಕು, ಜೀವ ಹೋದಂಗೆ ಆಗತ್ತೆ. ಆದರೆ ಇಲ್ಲೊಂದು ಊರಿನಲ್ಲಿ ಮುಳ್ಳಿನ ಜಾತ್ರೆಯೇ ನಡೆಯುತ್ತದೆ. ಭಕ್ತರು ಯಾವುದೇ ಭಯವಿಲ್ಲದೆ ಮುಳ್ಳುಗಳ ಮೇಲೆ ಜಿಗಿಯುತ್ತಾರೆ. ಹೌದು. ಕೊಪ್ಪಳದ ಲೇಬಗೇರಿ ಗ್ರಾಮದಲ್ಲಿ ನಡೆದ ವಿಶೇಷ ಆಚರಣೆಯೊಂದು...