Wednesday, 19th February 2020

Recent News

15 hours ago

ಕಾಣೆಯಾಗಿದ್ದ ತಾಯಿಗಾಗಿ 3000 ಕಿ.ಮೀ ದೂರದಿಂದ ಬಂದ ಮಗ

– ಕೊನೆಗೂ 8 ತಿಂಗ್ಳ ನಂತ್ರ ಮಗನ ಸೇರಿದ ತಾಯಿ ಮಡಿಕೇರಿ: ತಾಯಿಯನ್ನು ಕಳೆದುಕೊಂಡ ಮಗ, ಹೆತ್ತ ಮಗನಿಂದ ದೂರಾದ ತಾಯಿ ಕೊನೆಗೂ 8 ತಿಂಗಳ ಬಳಿಕ ತಾಯಿ ಮಗ ಒಂದಾದ ಮನಕಲುಕುವ ಘಟನೆ ಮಂಜಿನ ನಗರಿ ಮಡಿಕೇರಿ ನಗರದಲ್ಲಿ ನಡೆದಿದೆ. ವೃದ್ಧೆ ಮುಕ್ಕು ಮಗನ ಸೇರಿದ ತಾಯಿ. ಇನ್ನೂ ಮಗ ಎಂಟು ತಿಂಗಳಿನಿಂದ ನಾಪತ್ತೆಯಾಗಿದ್ದ ತಾಯಿಯನ್ನು ಹುಡುಕಿಕೊಂಡು 3000 ಕಿಲೋಮೀಟರ್ ದೂರದ ಉತ್ತರ ಪ್ರದೇಶದಿಂದ ಮಡಿಕೇರಿಗೆ ಬಂದಿದ್ದನು. ತಕ್ಷಣ ತಾಯಿಯನ್ನ ಕಂಡು ಮಗ ಬಿಕ್ಕಿಬಿಕ್ಕಿ ಕಣ್ಣೀರಿಟ್ಟನು. […]

2 days ago

ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿ ಕೂಲಿ ಕಾರ್ಮಿಕರು ನೀರು ಪಾಲು

ಮಡಿಕೇರಿ: ಬಟ್ಟೆ ತೊಳೆಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದ ಇಬ್ಬರ ಮೃತದೇಹಗಳನ್ನು ಸತತ ಐದು ಗಂಟೆಗಳ ಕಾರ್ಯಚರಣೆ ಮೂಲಕ ಹೊರ ತೆಗೆಯಲಾಗಿದೆ. ಸೋಮವಾರ ಸಂಜೆ ಕೊಡಗು ಜಿಲ್ಲೆಯ ವಿರಾಜಪೇಟೆ ತೆರಾಲು ಗ್ರಾಮದ ಕೆರೆಯಲ್ಲಿ ಈ ಘಟನೆ ನಡೆದಿದ್ದು, ಪುಟ್ಟ ಹಾಗೂ ವಿನೋದ್ ಮೃತ ಕೂಲಿ ಕಾರ್ಮಿಕರು. ಪುಟ್ಟ ಅವರು ಬಟ್ಟೆ ತೊಳೆಯುವಾಗ ಆಕಸ್ಮಿಕವಾಗಿ...

ಕುಲ್ಫಿ ತಿನ್ನುವವರೇ ಎಚ್ಚರ ಎಚ್ಚರ – ಕುಲ್ಫಿಯಲ್ಲಿ ಇರುತ್ತೆ ಬ್ಲೇಡ್!

5 days ago

– ಕೊಡಗಿನಲ್ಲಿ ಮಹಿಳೆಗೆ ಶಾಕ್ ಮಡಿಕೇರಿ: ಬೇಸಿಗೆ ಶುರುವಾಯಿತು ಅಂದರೆ ಸಾಮಾನ್ಯವಾಗಿ ಮನೆಯವರು ಮಕ್ಕಳು ಸೇರಿದಂತೆ ಅನೇಕರು ಐಸ್ ಕ್ರೀಂ, ಐಸ್ ಕ್ಯಾಂಡಿ, ಕುಲ್ಫಿ ಮೊರೆ ಹೋಗುತ್ತಾರೆ. ಆದರೆ ಹೋಗುವ ಮೊದಲು ಈ ಸ್ಟೋರಿ ಓದಿ. ಯಾಕೆಂದರೆ ನೀವು ತಿನ್ನುವ ಕುಲ್ಫಿಯಲ್ಲಿ...

ಇಳಿವಯಸ್ಸಿನಲ್ಲಿ ನೊಂದು ಬಂದವರಿಗೆ ಬೆಳಕಾದ್ರು ಸೋಮವಾರಪೇಟೆಯ ರಮೇಶ್

5 days ago

– ಹೋಟೆಲ್, ಬೇಕರಿ ವ್ಯವಹಾರ ಸಂಪೂರ್ಣ ನಿಲ್ಲಿಸಿದ್ರು ಮಡಿಕೇರಿ: ಮಾನವನ ಕೊನೆಘಟ್ಟ ವೃದ್ಧಾಪ್ಯ. ಈ ಹಂತದಲ್ಲಿ ತಮ್ಮ ಮಕ್ಕಳು ಮೊಮ್ಮಕ್ಕಳೊಂದಿಗೆ ನೆಮ್ಮದಿಯಿಂದ ಕಾಲ ಕಳೆಯಬೇಕೆಂದು ಎಲ್ಲಾ ಹೆತ್ತವರು ಆಸೆ ಪಡುತ್ತಾರೆ. ಆದರೆ ಎಲ್ಲರಿಗೂ ಈ ಭಾಗ್ಯ ಸಿಗಲ್ಲ. ಅಂತಹ ಅನಾಥ ವೃದ್ಧರಿಗೆ...

‘ವ್ಯಾಲೆಂಟೈನ್ಸ್ ಡೇ’ಯಂದೇ ಹಾರಂಗಿ ಜಲಾಶಯಕ್ಕೆ ಹಾರಿ ಪ್ರೇಮಿಗಳು ಆತ್ಮಹತ್ಯೆ

5 days ago

ಮಡಿಕೇರಿ: ಪ್ರೀತಿಗೆ ಕುಟುಂಬಸ್ಥರು ವಿರೋಧಿಸಿದ್ದ ಹಿನ್ನೆಲೆಯಲ್ಲಿ ಬೇಸರಗೊಂಡ ಯುವ ಪ್ರೇಮಿಗಳು ಪ್ರೇಮಿಗಳ ದಿನವಾದ ಇಂದು ಆಹ್ಮಹತ್ಯೆಗೆ ಶರಣಾದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಾರಂಗಿ ಜಲಾಶಯದಲ್ಲಿ ನಡೆದೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಯಮಗುಂಬಾ ಗ್ರಾಮದ ಸಿಂಧೂಶ್ರೀ (19) ಮತ್ತು...

ಕೊರೊನಾದಿಂದ ಪಾರಾಗಲು ಹರ್ಬಲ್ ತಾಯತ ಮೊರೆ ಹೋದ ಟಿಬೆಟಿಯನ್ನರು

5 days ago

ಮಡಿಕೇರಿ: ವಿಶ್ವದೆಲ್ಲೆಡೆ ಭಾರೀ ಸದ್ದು ಮೂಡಿಸಿರುವ ಕೊರೊನಾ ವೈರಸ್ ಟಿಬೆಟಿಯನ್ ಕ್ಯಾಂಪ್‍ಗಳಲ್ಲಿ ಆಚರಿಸುವ ಹೊಸವರ್ಷಾಚರಣೆ ಮೇಲು ಕರಿನೆರಳು ಬೀರಿದೆ. ಹೀಗಾಗಿ ಇದೇ 24 ರಂದು ಹೊಸವರ್ಷಾಚರಣೆಗೆ ಬರಬೇಕಾಗಿದ್ದ ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರ ಭೇಟಿಯನ್ನೂ ಮುಂದೂಡಲಾಗಿದೆ. ಟಿಬೆಟಿಯನ್ನರು ವೈರಸ್‍ನಿಂದ ರಕ್ಷಿಸಿಕೊಳ್ಳಲು ಹರ್ಬಲ್...

ಆದಿವಾಸಿ ಕುಟುಂಬಗಳಿಗೆ ಬರೋಬ್ಬರಿ ರೂ. 7,000 ವಿದ್ಯುತ್ ಬಿಲ್

6 days ago

ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರದಲ್ಲಿ ವಾಸಿಸುತ್ತಿರುವ ಗಿರಿಜನ ಕುಟುಂಬಗಳಿಗೆ ವಿದ್ಯುತ್ ಬರೆ ಅಚ್ಚರಿ ಮೂಡಿಸಿದೆ. ದಿಡ್ಡಳ್ಳಿ ನಿರಾಶ್ರಿತ ಕುಟುಂಬಗಳಿಗೆ ಸರ್ಕಾರ ಬಸವನಹಳ್ಳಿ ಹಾಗೂ ಬ್ಯಾಡಗೊಟ್ಟ ಗ್ರಾಮದಲ್ಲಿ ಮನೆಗಳನ್ನು ನಿರ್ಮಿಸಿ ವಸತಿ...

ತಂತಿ ಬೇಲಿಗೆ ಸಿಲುಕಿ ನರಳುತ್ತಿದ್ದ ಕಡವೆಯನ್ನು ರಕ್ಷಿಸಿದ ಸಾರ್ವಜನಿಕರು

1 week ago

ಮಡಿಕೇರಿ: ಆಹಾರ ಅರಸಿ ಕಾಡಿನಿಂದ ನಗರಕ್ಕೆ ಬಂದು ತಂತಿ ಬೇಲಿಗೆ ಸಿಲುಕಿ ನರಳುತ್ತಿದ್ದ ಕಡವೆಯನ್ನು ಸಾರ್ವಜನಿಕರು ರಕ್ಷಣೆ ಮಾಡಿದ ಘಟನೆ ಮಂಜಿನನಗರಿ ಮಡಿಕೇರಿಯಲ್ಲಿ ನಡೆದಿದೆ. ಮಡಿಕೇರಿ ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ನಸುಕಿನ ಜಾವ ತಂತಿ ಬೇಲಿಗೆ ಸಿಲುಕಿಕೊಂಡು ಕಡವೆ ನರಳುತ್ತಿತ್ತು....