Wednesday, 19th July 2017

3 days ago

ಒಂದೇ ಕುಟುಂಬದ ನಾಲ್ವರು ನೇಣಿಗೆ ಶರಣು- ಕಲಬುರಗಿಯಲ್ಲಿ ದಾರುಣ ಘಟನೆ

ಕಲಬುರಗಿ: ಒಂದೇ ಕುಟುಂಬದ ನಾಲ್ವರು ನೇಣಿಗೆ ಶರಣಾದ ದಾರುಣ ಘಟನೆ ಕಲಬುರಗಿ ನಗರದ ಸರಸ್ವತಿಪುರ ಬಡಾವಣೆಯ ಮನೆಯಲ್ಲಿ ನಡೆದಿದೆ. ಶ್ರೀಕಾಂತ್, ಪತ್ನಿ ತನುಶ್ರೀ ಹಾಗು ಇಬ್ಬರು ಮಕ್ಕಳಾದ ಸಾಕ್ಷಿ ಮತ್ತು ಚೇತನ ಮೃತ ದುರ್ದೈವಿಗಳು. ಸಾವಿಗೂ ಮುನ್ನ ಇವರು ಡೆತ್ ನೋಟ್ ಬರೆದಿಟ್ಟಿದ್ದು, `ನಮ್ಮ ಸಾವಿಗೇ ನಾವೇ ಕಾರಣ ಬೇರೆ ಯಾರು ಕಾರಣರಲ್ಲ ನಮ್ಮ ದೇಹಗಳನ್ನು ಮೆಡಿಕಲ್ ಕಾಲೇಜಿಗೆ ದಾನ ಮಾಡಿ’ ಅಂತಾ ಬರೆದಿದ್ದಾರೆ. ಘಟನಾ ಸ್ಥಳಕ್ಕೆ ಕಲಬುರಗಿ ಎಸ್‍ಪಿ ಎನ್ ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ […]

4 days ago

ಬಾಲಭವನದ ಬಡಪ್ರತಿಭೆಗೆ ಶಿಕ್ಷಣಕ್ಕಾಗಿ ಬೇಕಿದೆ ಸಹಾಯ

ಕಲಬುರಗಿ: ನಗರದ ಬಾಲಕರ ಬಾಲ ಮಂದಿರದಲ್ಲಿದ್ದು ಓರ್ವ ವಿದ್ಯಾರ್ಥಿ ಎಸ್‍ಎಸ್‍ಎಲ್‍ಸಿಯಲ್ಲಿ ಶೇಕಡಾ 82ರಷ್ಟು ಅಂಕ ಪಡೆದಿದ್ದಾನೆ. ಆದ್ರೆ ಆ ಬಡ ವಿದ್ಯಾರ್ಥಿಗೆ ಇದೀಗ ಪಿಯುಸಿ ಕಲಿಯಲು ಯಾರೂ ಆಸರೆ ನೀಡದ ಹಿನ್ನಲೆಯಲ್ಲಿ ನೆರವಿನ ನೀರಿಕ್ಷೆಯಲ್ಲಿದ್ದಾನೆ. ಕಲಬುರಗಿಯ ಕಾಕಡೆ ಚೌಕ್‍ನ ಶರಣಮ್ಮ ಮತ್ತು ಸಿದ್ದಬೀರ್ ದಂಪತಿಯ ಮಗ ನಾಗೇಶ್ ಶಿಕ್ಷಣದ ನೆರವು ಕೋರಿ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾನೆ....

ದಕ್ಷಿಣ ಕನ್ನಡ ಜಿಲ್ಲೆಯವ್ರೇನು ಷಂಡರಾ?- ಸರ್ಕಾರದ ವಿರುದ್ಧ ಶೋಭಾ ಕೆಂಡಾಮಂಡಲ

1 week ago

ಕಲಬುರಗಿ: ನಮ್ಮ ಜಿಲ್ಲೆಗಳಲ್ಲಿ ಏನೇ ಆದ್ರು ನೋಡಿಕೊಂಡು ಇರಲು ದಕ್ಷಿಣ ಕನ್ನಡ ಜಿಲ್ಲೆಯವರು ಷಂಡರಾ? ನಾವು ಪ್ರತಿಭಟನೆ ಮಾಡೋದು ತಪ್ಪಾ ಅಂತ ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ನಲವತ್ತೆರಡು ದಿನ ಸುಮ್ಮನಿದ್ದೆವು. ಆದ್ರೆ ನೀವು...

ಯುವಕನನ್ನ ಅಪಹರಿಸಿ ಪೆಟ್ರೋಲ್ ಸುರಿದು ಬೆಂಕಿ- ಚಿಕಿತ್ಸೆ ಫಲಕಾರಿಯಾಗದೇ ಸಾವು

1 week ago

ಕಲಬುರಗಿ: ದುಷ್ಕರ್ಮಿಗಳಿಂದ ಬೆಂಕಿ ದಾಳಿಗೆ ಒಳಗಾಗಿದ್ದ ಯುವಕ ಸಾವನ್ನಪ್ಪಿದ್ದಾರೆ. 22 ವರ್ಷದ ಶೇಕ್ ನೂರುದ್ದೀನ್ ಮೃತ ಯುವಕ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಪೋಷಕರು ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿ ಕಲಬುರಗಿಯ ರಿಂಗ್‍ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು....

ಖಾಸಗಿ ಸಿಮೆಂಟ್ ಕಂಪೆನಿಗೆ ಸಾವಿರ ಎಕರೆ ಭೂಮಿ- ನೂರಾರು ಕೋಟಿ ಡೀಲ್‍ಗೆ ಇಳಿಯಿತಾ ಸರ್ಕಾರ?

2 weeks ago

ಕಲಬುರಗಿ: 100 ಕೋಟಿಗೂ ಅಧಿಕ ಬೆಲೆ ಬಾಳುವ ಸರ್ಕಾರಿ ಜಮೀನನ್ನು ಖಾಸಗಿ ಸಿಮೆಂಟ್ ಕಾರ್ಖಾನೆಗೆ ಲೀಸ್‍ಗೆ ಕೊಡಲು ಸಿಎಂ ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ. ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಬೆನಕನಳ್ಳಿ ಮತ್ತು ಕೊಡ್ಲಾ ಗ್ರಾಮಗಳ 1,104 ಎಕರೆ ಸರ್ಕಾರಿ ಜಮೀನನ್ನು 30...

ಶಾಲೆಗೆ ಹೋಗ್ತಿದ್ದ ವಿದ್ಯಾರ್ಥಿನಿಗೆ ನಿರಂತರ ಲೈಂಗಿಕ ಕಿರುಕುಳ ನೀಡ್ತಿದ್ದ ಆಟೋ ಚಾಲಕನಿಗೆ ಧರ್ಮದೇಟು

2 weeks ago

ಕಲಬುರಗಿ: ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಗೆ ನಿರಂತರವಾಗಿ ದೈಹಿಕ ಹಾಗು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಕಾಮುಕ ಆಟೋ ಚಾಲಕನೋರ್ವನಿಗೆ ಪೋಷಕರು ಧರ್ಮದೇಟು ನೀಡಿರುವ ಘಟನೆ ನಗರದ ಜೇವರ್ಗಿ ಕ್ರಾಸ್ ಬಳಿ ನಡೆದಿದೆ. ವಿದ್ಯಾರ್ಥಿನಿ ಶಾಲೆಗೆ ಹೋಗುವಾಗ ಆಟೋ ಚಾಲಕ ಅಶೋಕ್ ದೊಡ್ಡಮನಿ ಎಂಬಾತ...

ಯುವಕನನ್ನು ಅಪಹರಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನ!

2 weeks ago

ಕಲಬುರಗಿ: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಯುವಕನ ಕೊಲೆಗೆ ಯತ್ನಿಸಿದ ಘಟನೆ ಕಲಬುರಗಿ ನಗರದ ಇನಾಮದಾರ್ ಶಾಲೆ ಹಿಂಭಾಗದಲ್ಲಿ ನಡೆದಿದೆ. ಶೇಕ್ ನೂರುದ್ದೀನ್(22) ಹತ್ಯೆಗೆ ಯತ್ನಿಸಲಾದ ಯುವಕ. ಮನೆಯಿಂದ ಕೆಲಸಕ್ಕೆ ತೆರಳುವ ವೇಳೆ ಈ ಕೃತ್ಯ ನಡೆದಿದೆ. ಶೇಕ್ ನೂರುದ್ದೀನ್ ಕಲಬುರಗಿ...

ಸಕಾಲದಲ್ಲಿ ಚಿಕಿತ್ಸೆ ನೀಡದ್ದಕ್ಕೆ ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಸಾವು

3 weeks ago

ಕಲಬುರಗಿ: ವೈದ್ಯರು ಸಕಾಲದಲ್ಲಿ ಚಿಕಿತ್ಸೆ ನೀಡದ ಹಿನ್ನಲೆಯಲ್ಲಿ ಬಾಣಂತಿಯೊಬ್ಬರು ಮೃತಪಟ್ಟಿರುವ ಘಟನೆ ವೈದ್ಯಕೀಯ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರ ತವರು ಜಿಲ್ಲೆಯಾದ ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಅಫಜಲಪುರ ತಾಲೂಕಿನ ಚಿಂಚೋಳಿ ಗ್ರಾಮದ ವಿಜಯಲಕ್ಷ್ಮೀ ನಿಂಬಾಳಕರ ಅವರು ಮೃತ ಪಟ್ಟಿದ್ದಾರೆ. ಇವರು ಬುಧವಾರ...