Tuesday, 23rd January 2018

Recent News

3 months ago

ನಾಯಿಯ ಪುಣ್ಯತಿಥಿ ಮಾಡಿ ಬಾಡೂಟ ಹಾಕಿದ ಹಾಸನದ ಹೂವಿನ ವ್ಯಾಪಾರಿಗಳು

ಹಾಸನ: ಮನುಷ್ಯರು ಸತ್ತರೆ ಅವರ ಪುಣ್ಯತಿಥಿ ಕಾರ್ಯ ಹಾಗಿರಲಿ, ಅಂತ್ಯ ಸಂಸ್ಕಾರವನ್ನೂ ವಿಧಿ ಬದ್ಧವಾಗಿ ಮಾಡದ ಎಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಆದರೆ ಹಾಸನ ಜಿಲ್ಲೆ ಹೊಳೆನರಸೀಪುರದ ಹೂವಿನ ವ್ಯಾಪಾರಿಗಳು ಮನೆ ಮಗನಿಗಿಂತ ಹೆಚ್ಚಾಗಿ ತಮ್ಮ ಬಗ್ಗೆ ನಿಷ್ಟೆ ತೋರಿದ ನಾಯಿ ಬಗ್ಗೆ ವಿಶಿಷ್ಟ ಪ್ರೀತಿ ತೋರಿದ್ದಾರೆ. ಪ್ರೀತಿಯ ನಾಯಿ ಧರ್ಮ ಸತ್ತ ನಂತರ 11ನೇ ದಿನದ ತಿಥಿ ಕಾರ್ಯವನ್ನು ಅರ್ಥಪೂರ್ಣವಾಗಿ ನೆರವೇರಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ನಾಯಿಯ ಪುಣ್ಯತಿಥಿಯ ಬಾಡೂಟದಲ್ಲಿ ನೂರಾರು […]

3 months ago

ಕಾಡಿನಿಂದ ನಾಡಿಗೆ ಬಂದ ಜಿಂಕೆಯನ್ನು ಸ್ಥಳೀಯರು ಸಂತೈಸಿ ಮತ್ತೆ ಕಾಡಿಗೆ ಕಳಿಸಿದ್ರು

ಹಾಸನ: ಸಾವಿನ ದವಡೆಯಿಂದ ಪಾರಾಗಲು ಕಾಡಿನಿಂದ ನಾಡಿನತ್ತ ಓಡಿ ಬಂದ ಜಿಂಕೆ, ಬೀದಿ ನಾಯಿ ಪಾಲಾಗುವುದನ್ನು ಗ್ರಾಮಸ್ಥರು ತಪ್ಪಿಸಿ ಮಾನವೀಯತೆ ಮೆರೆದಿರುವ ಘಟನೆ ಹಾಸನ ಜಿಲ್ಲೆ ಅಡಿಬೈಲು ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ. ಸುಮಾರು 7 ವರ್ಷದ ಗಂಡು ಜಿಂಕೆ ಮನುಷ್ಯರ ಸಮಯ ಪ್ರಜ್ಞೆಯಿಂದ ಪಾರಾಗಿದೆ. ತೀವ್ರ ಆಘಾತಕ್ಕೆ ಒಳಗಾಗಿದ್ದ ಜಿಂಕೆಯನ್ನು ಸ್ಥಳೀಯರು ಮತ್ತು ಅರಣ್ಯ ಇಲಾಖೆಯವರು...

ಹಾಸನಾಂಬೆ ಜಾತ್ರೆ ಮುಕ್ತಾಯ- ಬ್ಯಾಂಕ್ ಸಿಬ್ಬಂದಿ ಸೇರಿ 50 ಮಂದಿಯಿಂದ ಹುಂಡಿ ಎಣಿಕೆ

3 months ago

ಹಾಸನ: ಇಲ್ಲಿನ ಹಾಸನಾಂಬೆ ಜಾತ್ರಾ ಮಹೋತ್ಸವ ಶನಿವಾರವಷ್ಟೇ ಮುಗಿದಿದ್ದು, ಇಂದು ಬೆಳಗ್ಗೆಯಿಂದ ಹುಂಡಿ ಎಣಿಕೆ ಕಾರ್ಯ ಶುರುವಾಗಿದೆ. ಇದಕ್ಕಾಗಿ ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಒಟ್ಟು 50 ಮಂದಿಯನ್ನು ನಿಯೋಜನೆ ಮಾಡಲಾಗಿದೆ. ಅಧಿಕಾರಿಗಳ ಸಮ್ಮುಖದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದ್ದು ಒಟ್ಟು 4...

ಹಾಸನಾಂಬೆ ದರ್ಶನಕ್ಕೆ ಇಂದು ತೆರೆ- ಕೊಂಡ ಹಾಯುವಾಗ ಎಡವಿದ ಭಕ್ತನ ರಕ್ಷಣೆ

3 months ago

ಹಾಸನ: ಜಿಲ್ಲೆಯ ಪ್ರಸಿದ್ಧ ದೇವಾಲಯ ಹಸನಾಂಬೆ ದೇವಿಯ ದರ್ಶನಕ್ಕೆ ಇಂದು ತೆರೆ ಬಿದ್ದಿದ್ದು, ಈ ಮಧ್ಯೆ ಭಾರೀ ಅನಾಹುತವೊಂದು ತಪ್ಪಿದೆ. ದೇವಾಲಯದ ಮುಂದೆ ಕೊಂಡ ಹಾಯುವ ವೇಳೆ ತಲೆ ಮೇಲೆ ದೇವಿ ಉತ್ಸವ ಮೂರ್ತಿ ಹೊತ್ತಿದ್ದ ಭಕ್ತ ಎಡವಿದ್ದಾರೆ. ಅದೃಷ್ಟವಶಾತ್ ಜೊತೆಗಿದ್ದ...

ಹಾಸನಾಂಬೆ, ಚಾಮುಂಡೇಶ್ವರಿ ಕಣ್ತುಂಬಿಕೊಳ್ಳಲು ಜನಸಾಗರ – ಚಾಮುಂಡಿ ಬೆಟ್ಟಕ್ಕೆ ತಲುಪಲು 4 ಕಿಮೀ ಉದ್ದ ವಾಹನಗಳ ಕ್ಯೂ!

3 months ago

ಹಾಸನ/ಮೈಸೂರು: ಹಾಸನಾಂಬೆ ಹಾಗೂ ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಿಯ ದರ್ಶನಕ್ಕಾಗಿ ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನಕ್ಕೆ ಇಂದು ಅಂತಿಮ ದಿನವಾಗಿದ್ದು ನಾಳೆ ಮಧ್ಯಾಹ್ನ 12 ಗಂಟೆಗೆ ಹಾಸನಾಂಬೆ ದೇಗುಲದ ಗರ್ಭಗುಡಿಯನ್ನು ಮುಚ್ಚಲಾಗುವುದು. ಇಂದು ಬೆಳಗ್ಗೆ 5 ರಿಂದ ಸಂಜೆ...

ಹಾಸನಾಂಬೆ ದರ್ಶನಕ್ಕೆ ನಾಳೆ ಕೊನೆ ದಿನ- ದೇವಾಲಯದಲ್ಲಿ ಭಕ್ತಸಾಗರ

3 months ago

ಹಾಸನ: ವರ್ಷಕ್ಕೊಂದು ಬಾರಿ ದರ್ಶನ ನೀಡೋ ಹಾಸನಾಂಬೆಯ ದರ್ಶನಕ್ಕೆ ನಾಳೆ ಕೊನೆಯ ದಿನ. ದೀಪಾವಳಿ ಹಬ್ಬ ಪ್ರಯುಕ್ತ ಸಾಲು ರಜೆಗಳಿರುವ ಕಾರಣ ಭಕ್ತ ಸಾಗರವೇ ದೇವಿಯ ಸನ್ನಿಧಾನಕ್ಕೆ ಹರಿದು ಬರುತ್ತಿದೆ. ಅಕ್ಟೋಬರ್ 10 ರಂದು ಗುರುವಾರ ಮಧ್ಯಾಹ್ನ 12.30ಕ್ಕೆ ಶಾಸ್ತ್ರೋಕ್ತವಾಗಿ ದೇವಿಯ...

ಬೈಕಿಗೆ ಲಾರಿ ಡಿಕ್ಕಿಯಾಗಿ ಯುವಕನ ಕೈ ಕಟ್- ತುಂಡಾದ ಕೈ ಜೋಡಿಸಲು ವೈದ್ಯರ ಹರಸಾಹಸ

3 months ago

ಹಾಸನ: ಅಪರಿಚಿತ ಲಾರಿವೊಂದು ಡಿಕ್ಕಿಯಾದ ಪರಿಣಾಮ ಯುವಕನ ಕೈ ಎರಡು ತುಂಡಾದ ಭಯಾನಕ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೊಲ್ಲಹಳ್ಳಿ ಬಳಿ ನಡೆದಿದೆ. ಬೆಳಗೋಡು ಗ್ರಾಮದ ನಿವಾಸಿ ಭರತ್‍ನ ಬಲ ಕೈ ಅಪಘಾದಲ್ಲಿ ಎರಡು ತುಂಡಾಗಿದ್ದು, ಕತ್ತರಿಸಿ ತುಂಡಾಗಿ ಹೋಗಿದ್ದ ಕೈಯನ್ನು...

ತನ್ನನ್ನು ಕೊಲ್ಲಲೆತ್ನಿಸಿದನೆಂದು ಪತಿಯ ಅಂಗಡಿಗೆ ಬೀಗ ಜಡಿದು ಪತ್ನಿ ಆಕ್ರೋಶ

3 months ago

ಹಾಸನ: ತನ್ನನ್ನು ಕೊಲಲ್ಲು ಪತಿ ಯತ್ನ ಮಾಡಿದ್ದಾನೆ ಎಂದು ಆರೋಪಿಸಿರುವ ಮಹಿಳೆಯೊಬ್ಬರು ಪತಿಯ ಅಂಗಡಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಹಾಸನದಲ್ಲಿ ನಡೆದಿದೆ. ಹಾಸನದ ಡಬಲ್ ಟ್ಯಾಂಕ್ ರಸ್ತೆಯಲ್ಲಿರುವ ರಾಘವೇಂದ್ರ ಹಾರ್ಡ್‍ವೇರ್ ಮಾಲಿಕ ಲೋಕೇಶ್ ಮತ್ತು ಪತ್ನಿ ದುರ್ಗಾಲಕ್ಷ್ಮಿ ಜಗಳ...