Sunday, 20th August 2017

6 days ago

ನೇಗಿಲಯೋಗಿಯ ನಿದ್ದೆ ಕೆಡಿಸಿರೋ ಮಂಗಗಳ ಉಪಟಳ- ರೈತರ ಕಷ್ಟ ಕೇಳುವವರ್ಯಾರು?

ಗದಗ: ಅದ್ಯಾಕೋ ರೈತರ ಕಷ್ಟಗಳು ಮುಗಿಯುವಂತೆ ಕಾಣುತ್ತಿಲ್ಲ. ಒಂದಲ್ಲಾ ಒಂದು ಸಂಕಷ್ಟದ ಸುಳಿಗೆ ಸಿಲುಕಿ ರೈತ ನಲುಗುತ್ತಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ಭೀಕರ ಬರಗಾಲ. ಮತ್ತೊಂದೆಡೆ ಅಲ್ಪಸ್ವಲ್ಪ ಮಳೆಗೆ ಬೆಳೆದ ಬೆಳೆ ಮಂಗಗಳ ಹಾವಳಿಯಿಂದ ಹಾಳಾಗುತ್ತಿದೆ. ಬರಗಾಲದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಬೆಳೆನಾಶದಿಂದ ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಗದಗ ತಾಲೂಕಿನ ನಾಗಾವಿ ಹಾಗೂ ಬೆಳದಡಿ ಭಾಗದ ಜಮೀನಿನಲ್ಲಿ ಮಂಗಗಳ ಹಾವಳಿ ವಿಪರೀತವಾಗಿದೆ. ಅಲ್ಪಸ್ವಲ್ಪ ಬೆಳೆದ ಹೆಸರು, ಶೇಂಗಾ ಬೆಳೆಯನ್ನ ಮಂಗಗಳ ಹಿಂಡು […]

3 weeks ago

ನಾಗರ ಪಂಚಮಿ ವಿಶೇಷ: ಸಗಣಿ ಎರಚಿ ಆಟ ಆಡ್ತಾರೆ ಗದಗ ಜನ!

ಗದಗ: ಈಗಿನ ಕಾಲದಲ್ಲಿ ಜಾನುವಾರುಗಳ ಸಗಣಿ ಅಂದ್ರೆ ಜನ ದೂರ ಸರಿಯುವವರೇ ಹೆಚ್ಚು ಜನ. ಆದರೆ ಮುದ್ರಣ ನಗರಿ ಎಂದು ಹೆಸರುವಾಸಿಯಾದ ಗದಗದಲ್ಲಿ ಮಾತ್ರ ಒಬ್ಬರಿಗೊಬ್ಬರು ಪರಸ್ಪರ ಸಗಣಿಯನ್ನ ಮೈಮೇಲೆ ಎರಚುವ ಆಟ ಆಡುತ್ತಾರೆ. ಹೌದು, ನಗರದ ಕುಂಬಾರ ಓಣಿಯಲ್ಲಿ ಸಗಣಿ ಎರಚಾಡುವುದು ತುಂಬಾನೆ ವಿಶಿಷ್ಠವಾಗಿದೆ. ನಾಗರ ಪಂಚಮಿ ಹಬ್ಬವನ್ನು ಬೇರೆ ಬೇರೆ ಪ್ರದೇಶದಲ್ಲಿ ಬೇರೆ...

70 ವರ್ಷದಿಂದ ಹೊಟೇಲ್, ಬಾರ್‍ಗೆ ಬ್ರೇಕ್ – ಗದಗ್‍ನ ಲಿಂಗದಾಳು ಗ್ರಾಮ ಇಂದಿನ ಪಬ್ಲಿಕ್ ಹೀರೋ

4 weeks ago

ಗದಗ: ಸಾಮಾನ್ಯವಾಗಿ ಪಬ್ಲಿಕ್ ಹೀರೋ ಕಾರ್ಯಕ್ರಮದಲ್ಲಿ ವ್ಯಕ್ತಿ ಬಗ್ಗೆ ಹೇಳ್ತಿದ್ವಿ. ಆದ್ರೆ, ಇವತ್ತು ವ್ಯಕ್ತಿಯಲ್ಲ ಬದಲಾಗಿ ಇಡೀ ಗ್ರಾಮದ ಜನರೇ ಪಬ್ಲಿಕ್ ಹೀರೋಗಳು. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷವಾದ್ರೂ ಗದಗ ಜಿಲ್ಲೆಯ ಲಿಂಗದಾಳು ಗ್ರಾಮದಲ್ಲಿ ಹೊಟೇಲ್, ಸಾರಾಯಿ ಅಂಗಡಿ ಬಂದ್....

2 ವರ್ಷವಾದ್ರೂ ರೈತರ ಹೋರಾಟಕ್ಕೆ ಬೆಲೆಯಿಲ್ಲ: ಕಳಸಾ ಬಂಡೂರಿ, ಮಹದಾಯಿ ನೀರಿಗಾಗಿ `ಮಾಡು ಇಲ್ಲವೇ ಮಡಿ’ ಹೋರಾಟ

1 month ago

ಗದಗ: ಕಳಸಾ ಬಂಡೂರಿ, ಮಹದಾಯಿ ನೀರಿಗಾಗಿ ರೈತರ ಹೋರಾಟ 2 ವರ್ಷ ಪೂರೈಸಿದ ಹಿನ್ನಲೆ ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ “ಮಾಡು ಇಲ್ಲವೇ ಮಡಿ” ಹೋರಾಟ ಆರಂಭವಾಗಿದೆ. ಹೋರಾಟ ಸಮಿತಿ ಅಧ್ಯಕ್ಷ ವೀರೇಶ ಸೊಬರದಮಠ ಅವರು ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹವನ್ನು...

ಕಳಸಾ ಬಂಡೂರಿ ಹೋರಾಟಕ್ಕೆ 2 ವರ್ಷ: ಅಮರಣಾಂತ ಉಪವಾಸಕ್ಕೆ ಕುಳಿತ್ರು ರೈತರು

1 month ago

ಗದಗ: ಕಳಸಾ ಬಂಡೂರಿ, ಮಹದಾಯಿ ಹೋರಾಟ ಬರೋಬ್ಬರಿ ಎರಡು ವರ್ಷ ಪೂರೈಸಿದೆ. ಆದರೂ ಉತ್ತರ ಕರ್ನಾಟಕ ಭಾಗಕ್ಕೆ ನೀರು ಸಿಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಮಹದಾಯಿ ಹೋರಾಟಗಾರರು ಮಾಡು ಇಲ್ಲವೇ ಮಡಿ ಎನ್ನುವ ತೀರ್ಮಾನವನ್ನು ತೆಗೆದುಕೊಂಡು ಅಮರಣಾಂತ ಉಪವಾಸಕ್ಕೆ ಧುಮುಕಿದ್ದಾರೆ....

ಬಿಸಿ ಊಟ ಸೇವಿಸಿ 40ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

1 month ago

ಗದಗ: ತಾಲೂಕಿನ ಅಂತೂರು ಬೆಂತೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 40ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಆತಂಕಕಾರಿ ಘಟನೆ ಶನಿವಾರ ನಡೆದಿದೆ. ಉಪ್ಪಿಟ್ಟು ಸೇವಿಸಿದ ಬಳಿಕ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಕೆಲವರಿಗೆ ವಾಂತಿಯಾಗಿದ್ದು, ಇನ್ನು ಕೆಲವರಿಗೆ ತಲೆ ಸುತ್ತು ಬಂದಿದೆ ಎಂದು...

ತಂಗಿಯನ್ನು ಭೇಟಿಯಾಗಲು ಬಂದಿದ್ದ ಅಣ್ಣ ಕೊಲೆಯಾದ

2 months ago

ಗದಗ: ತಂಗಿಯನ್ನು ಭೇಟಿಯಾಗಲು ಬಂದಿದ್ದ ಅಣ್ಣನನ್ನು ದುಷ್ಕರ್ಮಿಗಳು ಕಲ್ಲು ಎತ್ತಿಹಾಕಿ ಕೊಲೆಗೈದಿರುವ ಘಟನೆ ಗದಗನ ಬೆಟಗೇರಿಯ ಶರಣ ಬಸವೇಶ್ವರ ನಗರದಲ್ಲಿ ನಡೆದಿದೆ. ಗದಗ ತಾಲೂಕಿನ ಹರ್ತಿ ಗ್ರಾಮದ 42 ವರ್ಷದ ಆನಂದ ಭಜಂತ್ರಿ ಕೊಲೆಯಾದ ವ್ಯಕ್ತಿ. ಆನಂದ್ ಎರಡು ದಿನಗಳ ಹಿಂದೆ...

ಅತ್ತಿಗೆಯನ್ನು ಎಳೆದಾಡಿ ಥಳಿಸಿದ ಮೈದುನ- ಬಿಡಿಸಲು ಬಂದವರಿಗೆ ಲಾಂಗ್, ಮಚ್ಚು ತೋರಿಸಿ ಧಮ್ಕಿ

2 months ago

ಗದಗ: ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೊಬ್ಬ ಅಣ್ಣನ ಹೆಂಡತಿಯನ್ನು ಎಳೆದಾಡಿ ಹಿಗ್ಗಾಮುಗ್ಗಾ ಥಳಿಸಿರುವ ಅಮಾನವೀಯ ಘಟನೆ ಗದಗ ತಾಲೂಕಿನ ಕಳಸಾಪೂರ ತಾಂಡದಲ್ಲಿ ನಡೆದಿದೆ. ಸೋಮವಾರ ಸಂಜೆ ವೇಳೆ ಮೈದುನನ ಅಟ್ಟಹಾಸಕ್ಕೆ ಮಹಿಳೆ ಸಂಗೀತಾ ಲಮಾಣಿ ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ನರಳಾಡುವಂತಾಗಿದೆ. ಘಟನೆಯ ವೇಳೆ...