Thursday, 19th October 2017

Recent News

6 days ago

ಅನ್ನ ಪ್ರಸಾದ ಸೇವಿಸಿ ಮಕ್ಕಳೂ ಸೇರಿ 60ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಧಾರವಾಡ: ಜಾತ್ರೆಯಲ್ಲಿ ಅನ್ನ ಪ್ರಸಾದ ಸೇವಿಸಿದ 60 ಕ್ಜೂ ಹೆಚ್ಚು ಜನರು ಅಸ್ವಸ್ಥರಾದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ದಾಸ್ರಿಕೊಪ್ಪ ಗ್ರಾಮದಲ್ಲಿ ಶುಕ್ರವಾರ ಮೈಲಾರಲಿಂಗ ದೇವರ ಜಾತ್ರೆ ಹಿನ್ನೆಲೆಯಲ್ಲಿ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಈ ಸಮಯದಲ್ಲಿ ಅನ್ನ ಪ್ರಸಾದ ಸೇವಿಸಿದ 60 ಜನರು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಲ್ಲಿ ಚಿಕ್ಕ ಮಕ್ಕಳಿಗೆ ವಾಂತಿ ಬೇಧಿ ಆರಂಭವಾಗಿದೆ. ಸದ್ಯ ಅಸ್ವಸ್ಥಗೊಂಡವರನ್ನು ಕಲಘಟಗಿ ತಾಲೂಕಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಕೆಲವರನ್ನು ಹುಬ್ಬಳ್ಳಿ ಕಿಮ್ಸ್ […]

6 days ago

ಯುವಜನತೆಗೆ ಲವ್ ಬಗ್ಗೆ ಸಚಿವ ಆಂಜನೇಯ ಪಾಠ!

ಧಾರವಾಡ: ಸಿಎಂ ಸಿದ್ದರಾಮಯ್ಯ ಅವರು ಆಗಾಗ ಕನ್ನಡ ವ್ಯಾಕರಣದ ಬಗ್ಗೆ ಪಾಠ ಮಾಡುವುದು ನಿಮಗೆ ಗೊತ್ತೆಯಿದೆ. ಆದರೆ ಈಗ ಸಮಾಜ ಕಲ್ಯಾಣ ಸಚಿವ ಹೆಚ್ ಆಂಜನೇಯ ಅವರು ಯುವಜನತೆಗೆ ಲವ್ ಬಗ್ಗೆ ಪಾಠ ಮಾಡಿ ಸುದ್ದಿಯಾಗಿದ್ದಾರೆ. ಡಾ. ಬಾಬು ಜಗಜೀವನ್ ರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳೇ...

ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ ಆಯ್ತು- ಈಗ ಪ್ಲಾಸ್ಟಿಕ್ ಪಾಪಡ್?

1 week ago

ಹುಬ್ಬಳ್ಳಿ: ಇದುವರೆಗೆ ಪ್ಲಾಸ್ಟಿಕ್ ಸಕ್ಕರೆ, ಪ್ಲಾಸ್ಟಿಕ್ ಅಕ್ಕಿ ಹಾಗೂ ಪ್ಲಾಸ್ಟಿಕ್ ಮೊಟ್ಟೆಗಳ ಬಗ್ಗೆ ಕೇಳಿದ್ವಿ. ಆದರೆ, ಅಗ್ಗದ ದರದಲ್ಲಿ ಎಂದರೆ ಕೇವಲ ಒಂದು ರೂಪಾಯಿಗೆ ಸಿಗೋ, ಮಕ್ಕಳು ಬಲು ಇಷ್ಟಪಟ್ಟು ತಿನ್ನೊ ಪಾಪಡಿಗಳೂ ಪ್ಲಾಸ್ಟಿಕ್ ನಿಂದ ತಯಾರಾಗುತ್ತಿದ್ಯಾ ಎನ್ನುವ ಅನುಮಾನ ಕಾಡುತ್ತಿದೆ....

ಹೆಲ್ಮೆಟ್ ಹಾಕದ್ದಕ್ಕೆ ಕಾರು ಚಾಲಕನಿಗೆ ಹುಬ್ಬಳ್ಳಿ ಪೊಲೀಸರಿಂದ ದಂಡ!

1 week ago

ಹುಬ್ಬಳ್ಳಿ: ಬೈಕ್ ಸವಾರರು ಹೆಲ್ಮೆಟ್ ಹಾಕದೇ ಇದ್ದರೆ ಸಂಚಾರಿ ಪೊಲೀಸರು ನೋಟಿಸ್ ನೀಡೋದು ಸಾಮಾನ್ಯ. ಆದರೆ ಹುಬ್ಬಳ್ಳಿಯಲ್ಲಿ ಕಾರು ಚಾಲಕರೊಬ್ಬರಿಗೆ ಸಂಚಾರಿ ಪೊಲೀಸರು ಹೆಲ್ಮೆಟ್ ಹಾಕಲಿಲ್ಲ ಎಂದು ನೋಟಿಸ್ ನೀಡಿ, ದಂಡ ಕಟ್ಟಿಸಿಕೊಂಡು ಎಡವಟ್ಟು ಮಾಡಿದ್ದಾರೆ. ಹೌದು, ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸರು...

ಅಂಗವಿಕಲೆ ಶಿರೀನ್ ಬಾಳಲ್ಲಿ ಮೂಡಬೇಕಿದೆ ಬೆಳಕು

2 weeks ago

ಧಾರವಾಡ: ಶಿರೀನ್ ಎಂಬ ಯುವತಿಯು ಹುಟ್ಟಿನಿಂದ ಅಂಗವಿಕಲೆಯಾಗಿದ್ದು, ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕುತ್ತೇನೆಂಬ ಆತ್ಮ ವಿಶ್ವಾಸವನ್ನು ಹೊಂದಿದ್ದಾಳೆ. ಶಿರೀನ್ ಕಿತ್ತೂರ್ ಮೂಲತಃ ಧಾರವಾಡದ ಮದಾರಮಡ್ಡಿ ಬಡಾವಣೆಯಲ್ಲಿ ವಾಸವಾಗಿದ್ದಾರೆ. ಶಿರೀನ್ ಅಂಗವಿಕಲೆಯಾಗಿದ್ದರೂ ಅಂಗವಿಕಲೆ ಅನ್ನುವುದನ್ನೇ ಮರೆತು ಎಸ್‍ಎಸ್‍ಎಲ್‍ಸಿ ಮುಗಿಸಿದ್ದಾರೆ. ಆದರೆ ಮುಂದಿನ ಶಿಕ್ಷಣಕ್ಕೆಂದು ಕಾಲೇಜಿಗೆ...

ಅಮೆರಿಕಾದಲ್ಲಿ ಇದ್ದುಕೊಂಡೇ ಪತ್ನಿಗೆ ತಲಾಖ್: ಪತಿಗೆ ಸಮನ್ಸ್ ಜಾರಿ ಮಾಡಿದ ಕೋರ್ಟ್

2 weeks ago

ಧಾರವಾಡ: ಅಮೆರಿಕಾದಲ್ಲಿ ಇದ್ದುಕೊಂಡೇ ಧಾರವಾಡದ ಪತ್ನಿಗೆ ಇಮೇಲ್ ಮೂಲಕ ತಲಾಖ್ ನೀಡಿದ್ದ ಪತಿಗೆ ಧಾರವಾಡದ ಜೆಎಂಎಫ್‍ಸಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಮೆಹಬೂಬನಗರದ ಗುಲ್ಜಾರ್ ದಿಡಗುರ ಎಂಬುವನು 2010ರಲ್ಲಿ ಧಾರವಾಡದ ಮುಫ್ತಿನತಾಜ್ ಎಂಬ ಯುವತಿಯನ್ನು ಮದುವೆಯಾಗಿದ್ದನು. ಮದುವೆಯ ನಂತರ ಪತ್ನಿ ಮುಫ್ರಿನ್‍ತಾಜ್‍ಳನ್ನ...

ಸಿಎಂನಿಂದ ಮೂಲ ಕಾಂಗ್ರೆಸ್ಸಿಗರು ಮೂಲೆಗುಂಪು: ಶೆಟ್ಟರ್

2 weeks ago

ಹುಬ್ಬಳ್ಳಿ: ಸಿಎಂ ಸಿದ್ಧರಾಮಯ್ಯನವರು ಮೂಲ ಕಾಂಗ್ರೆಸಿಗರನ್ನು ಮೂಲೆಗುಂಪು ಮಾಡಿದ್ದಾರೆ. ಅವರು ವಲಸೆ ಬಂದು ಕಾಂಗ್ರೆಸ್ ಮೇಲೆ ಹಿಡಿತ ಸಾಧಿಸಿದ್ದಾರೆ. ಸಿದ್ದರಾಮಯ್ಯನವರದ್ದು ಮನ್ ಕಿ ಬಾತ್, ಕಾಮ್ ಕಿ ಬಾತ್ ಯಾವುದೂ ಇಲ್ಲ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸಿಎಂ ವಿರುದ್ಧ...

ಹುಬ್ಬಳ್ಳಿಯಲ್ಲಿ ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ

2 weeks ago

ಹುಬ್ಬಳ್ಳಿ: ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಚಿನ್ನಾಭರಣ ವ್ಯಾಪಾರಿಗಳ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಏಕಕಾಲದಲ್ಲೇ ನಾಲ್ಕು ಕಡೆ ದಾಳಿ ನಡೆಸಿದ ಐಟಿ ಅಧಿಕಾರಿಗಳು, ಸ್ಯಾನ್ ಸಿಟಿ ಡೆವಲಪರ್ ಮಾಲೀಕ ನಾರಾಯಣ ಆಚಾರ್ಯ ಮನೆ, ಚಿನ್ನದ ವ್ಯಾಪಾರಿ ಎನ್‍ಎಚ್...