Sunday, 19th November 2017

Recent News

3 hours ago

ನಕಲಿಗೆ ಅವಕಾಶ ಕೊಟ್ಟ 7 ದಾವಣಗೆರೆ ಶಿಕ್ಷಕರು ಅಮಾನತು

ದಾವಣಗೆರೆ: ಪ್ರಾಥಮಿಕ ಶಾಲೆಯ ಸಿಎಸ್‍ಎಎಸ್ ಪರೀಕ್ಷೆಯಲ್ಲಿ ಸಾಮೂಹಿಕವಾಗಿ ನಕಲು ಮಾಡಿಸಿದ್ದ 7 ಮಂದಿ ಶಿಕ್ಷಕರನ್ನು ದಾವಣಗೆರೆ ಡಿಡಿಪಿಐ ಅಮಾನತು ಮಾಡಿ ಖಡಕ್ ಆದೇಶ ಹೊರಡಿಸಿದ್ದಾರೆ. ದಾವಣಗೆರೆಯ ಹರಪನಹಳ್ಳಿ ತಾಲೂಕಿನ ಸೇವಾನಗರ ಶಾಲೆಯಲ್ಲಿ ಶಿಕ್ಷಕರು ಸಾಮೂಹಿಕ ನಕಲು ಮಾಡಿಸಿದ್ದರು. ನಕಲು ಮಾಡಿಸುತ್ತಿದ್ದ ವೀಡಿಯೋ ವೈರಲ್ ಆದ ಹಿನ್ನಲೆ ಡಿಡಿಪಿಐ ಕೋದಂಡರಾಮ ಅವರು ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶ ಪ್ರಕಟಿಸಿದ್ದಾರೆ. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ರುಕ್ಮಿಣಿ, ಸಹ ಶಿಕ್ಷಕರಾದ ಅಂಗಡಿ ಶಾಂತಪ್ಪ, ಮಮತಾ, ಪರಮೇಶ್ವರನಾಯ್ಕ, ಹನುಮಂತಪ್ಪ, ಮಹದೇವಮ್ಮ ಮತ್ತು ಲಲಿತಾಬಾಯಿ […]

22 hours ago

ಸಂಧಿ ಪಾಠ ಮಾಡೋ ಸಿಎಂ, ರಾಷ್ಟ್ರಪತಿ ಕೋವಿಂದ್‍ರನ್ನ ಗೋವಿಂದ್ ಅಂದ್ರು

ದಾವಣಗೆರೆ: ಸಂಧಿ ಸಮಾಸದ ಪಾಠ ಮಾಡೋ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಷ್ಟ್ರಪತಿ ಹೆಸರು ಗೊತ್ತಿಲ್ಲದೇ ಚಡಪಡಿಸಿದ ಘಟನೆ ಇಂದು ನಡೆದಿದೆ. ಜಿಲ್ಲೆಯ ಚನ್ನಗಿರಿಯಲ್ಲಿ ಬಹುಕೋಟಿ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮುಖ್ಯಮಂತ್ರಿಯವರು ಈ ಎಡವಟ್ಟು ಮಾಡಿದ್ದಾರೆ. ತಮ್ಮ ಭಾಷಣದ ವೇಳೆ ಕೋವಿಂದ್ ರನ್ನ ಗೋವಿಂದ್ ಎಂದ ಅವರು, ಯಾರ್ರಿ ಅವರು ರಾಷ್ಟ್ರಾಧ್ಯಕ್ಷರು ಗೋವಿಂದ.. ಪೂರ್ತಿ...

ದಾವಣಗೆರೆಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ರಥೋತ್ಸವ – ಇಲ್ಲಿ ಮಹಿಳೆಯರೇ ರಥ ಎಳೀತಾರೆ

1 day ago

ದಾವಣಗೆರೆ: ಸಾಮಾನ್ಯವಾಗಿ ರಥೋತ್ಸವದಲ್ಲಿ ರಥ ಎಳೆಯುವವರು ಪುರುಷರಾಗಿರುತ್ತಾರೆ. ಅಷ್ಟೇ ಅಲ್ಲದೇ ರಥೋತ್ಸವ ನಡೆಯುವುದು ಹಿಂದೂ ಧರ್ಮದಲ್ಲಿ. ಆದರೆ ಜಿಲ್ಲೆಯ ಯರಗುಂಟೆ ಗ್ರಾಮದಲ್ಲಿ ರಾಜ್ಯದ ಯಾವುದೇ ಸ್ಥಳಗಳಲ್ಲಿ ನಡೆಯದಂತ ವಿಶಿಷ್ಟ ಮಹಿಳಾ ರಥೋತ್ಸವ ನಡೆಯುತ್ತೆ. ಇಲ್ಲಿ ಮಹಿಳೆಯರೇ ರಥ ಎಳೆಯೋದೇ ವೈಶಿಷ್ಟ್ಯವಾಗಿದೆ. ರಥವನ್ನು...

ಸರ್ಕಾರದ ಶೂ ಭಾಗ್ಯದಲ್ಲೂ ಗೋಲ್ ಮಾಲ್- ಪ್ರತಿ ಮಕ್ಕಳ ಶೂನಲ್ಲೂ ಪಡೀತಾರೆ ಕಮಿಷನ್

5 days ago

ದಾವಣಗೆರೆ: ಸರ್ಕಾರಿ ಶಾಲೆಗಳ ಕಡೆ ಮಕ್ಕಳನ್ನು ಸೆಳೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದ್ರೆ ಈ ಯೋಜನೆಗಳಲ್ಲಿ ಮಕ್ಕಳಿಗೆ ತಲುಪಬೇಕಾದ ಹಣದಲ್ಲಿ ಕಮಿಷನ್ ಅಸೆಯಿಂದ ಮಧ್ಯವರ್ತಿಗಳು ಬ್ರಹ್ಮಾಂಡ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಅಂತಹದ್ದೇ ಒಂದು ಭ್ರಷ್ಟಾಚಾರದ ಮಾಹಿತಿ ಪಬ್ಲಿಕ್...

ಬಯೋಡೀಸೆಲ್ ತಯಾರಿಕೆ ಸುಲಭ -ಬಿಇ ವಿದ್ಯಾರ್ಥಿಗಳಿಂದ ಲಕ್ಷ್ಮಿತರು ಬೀಜ ಬೇರ್ಪಡಿಕೆಗೆ ಹೊಸ ಯಂತ್ರ

1 week ago

ದಾವಣಗೆರೆ: ಬಯೋಡೀಸೆಲ್ ತಯಾರಿಕೆಗೆ ಜತ್ರೋಪ, ಹೊಂಗೆ ಜೊತೆಗೆ ಸಿಮರೋಬ ಬೀಜಗಳನ್ನೂ ಸಹ ಬಳಸಲಾಗುತ್ತದೆ. ಆದ್ರೆ, ಆ ಸಿಮರೋಬ ಬೀಜಗಳನ್ನ ಬೇರ್ಪಡಿಸೋದು ಡಿಸೇಲ್ ತಯಾರಿಕರಿಗೆ ಕಷ್ಟ ಸಾಧ್ಯವಾಗಿತ್ತು. ಅಂತಹ ಕಷ್ಟವನ್ನ ಸುಲಭವಾಗಿ ಬಗೆಹರಿಸಿದ್ದಾರೆ ಬಿಇ ವಿದ್ಯಾರ್ಥಿಗಳು. ಸಿಮರೋಬ ಬೀಜವನ್ನು ಕನ್ನಡದಲ್ಲಿ ಲಕ್ಷ್ಮಿತರು ಅಂತ...

ಪಂಚಮಸಾಲಿಗಳು ಮೂತ್ರವಿಸರ್ಜಿಸಿದ್ರೆ ಜಂಗಮ ಸಮುದಾಯ ಕೊಚ್ಕೊಂಡ್ಹೋಗುತ್ತೆ- ನಾಲಗೆ ಹರಿಬಿಟ್ಟ ಜಯಮೃತ್ಯುಂಜಯ ಸ್ವಾಮೀಜಿ

1 week ago

ದಾವಣಗೆರೆ: ಕೆಲ ದಿನಗಳ ಹಿಂದೆಯಷ್ಟೇ ಹುಬ್ಬಳ್ಳಿಯಲ್ಲಿ ನಡೆದ ಲಿಂಗಾಯತ ಸಮಾವೇಶದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಕೂಡಲ ಸಂಗಮ ಮಠದ ಜಯಮೃತ್ಯುಂಜಯ ಸ್ವಾಮೀಜಿ ಇದೀಗ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಲಿಂಗಾಯಿತ ಸಮಾವೇಶದಲ್ಲಿ...

ರೈತರಿಗೆ ಸಿಗಬೇಕಾದ ಪರಿಹಾರದ ಹಣವನ್ನು ಹಂಚಿಕೊಂಡ ಅಧಿಕಾರಿಗಳು!

2 weeks ago

ರಾಯಚೂರು: ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸೋದು ಅಷ್ಟರಲ್ಲೇ ಇದೆ. ಆದರೆ ಹಾಗೂ ಹೀಗೂ ಕೊಡುವ ಪರಿಹಾರವೂ ಕೂಡ ರೈತರಿಗೆ ತಲುಪುತ್ತಿಲ್ಲ. ಒಂದೆಡೆ ಅಧಿಕಾರಿಗಳು ವಿಲನ್ ಆದರೆ ಮತ್ತೊಂದೆಡೆ ಪರಿಹಾರದ ಮೊತ್ತದಲ್ಲೂ ರಾಜಕೀಯ ಆರೋಪ ಕೇಳಿ ಬಂದಿದೆ. ರಾಯಚೂರು ನಗರದ ಶಾಸಕ...

ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಮುದ್ರಣ-ಸಚಿವ ಅನಂತ್ ಕುಮಾರ್ ಹೆಗಡೆ ಹೀಗಂದ್ರು

2 weeks ago

ದಾವಣಗೆರೆ: ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಬೆಳಗಾಗಿ ಜಿಲ್ಲಾಡಳಿತ ವಿಶೇಷ ಅತಿಥಿಯಾಗಿ ಹೆಸರು ಮುದ್ರಿಸಿದ್ದಕ್ಕೆ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಜಿಲ್ಲೆಯ ಚನ್ನಗಿರಿಯಲ್ಲಿ ತುಮ್ಕೋಸ್ ಅಧ್ಯಕ್ಷರ ಅಭಿನಂದನಾ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಟಿಪ್ಪು ಜಯಂತಿ ಆಮಂತ್ರಣ...