Sunday, 19th November 2017

Recent News

48 mins ago

`ಗ್ರೇಟ್ ಇಂಡಿಯನ್ ಐಸ್‍ಕ್ರೀಂ’ ಪ್ರಶಸ್ತಿ ಮುಡಿಗೇರಿಸಿಕೊಂಡ ಮಂಗ್ಳೂರು ಐಡಿಯಲ್ ಐಸ್‍ಕ್ರೀಂ!

ಮಂಗಳೂರು: ನಗರಕ್ಕೆ ಭೇಟಿ ಕೊಟ್ಟ ಎಲ್ಲರೂ ಒಂದು ಬಾರಿ ಐಡಿಯಲ್ ಐಸ್ ಕ್ರೀಂ ಸವಿಯದೇ ಹಿಂದಿರುಗುವುದಿಲ್ಲ. ತನ್ನ ರುಚಿಯಿಂದಲೇ ಐಡಿಯಲ್ ಐಸ್ ಕ್ರೀಂ ದೇಶಾದ್ಯಂತ ಹೆಸರುವಾಸಿಯಾಗಿದ್ದು, ಇದೀಗ `ಗ್ರೇಟ್ ಇಂಡಿಯನ್ ಐಸ್ ಕ್ರೀಂ’ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ. ಹೌದು. ಕಳೆದ ಗುರುವಾರ ಹರಿಯಾಣದ ಗುರುಗ್ರಾಮದಲ್ಲಿ ನಡೆದ ಗ್ರೇಟ್ ಇಂಡಿಯನ್ ಐಸ್‍ಕ್ರೀಂ ಹಾಗೂ ಫ್ರೋಜನ್ ಡೆಸಾರ್ಟ್ ಸೀಸನ್ 6ರ ಸ್ಪರ್ಧೆಯಲ್ಲಿ ಮಂಗಳೂರು ಐಡಿಯಲ್ ಐಸ್ ಕ್ರೀಂ 8 ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಸುಮಾರು 103 ಐಸ್ ಕ್ರೀಂ ತಯಾರಿಕಾ […]

6 hours ago

ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ತೆರೆ – ಕೋಟಿ ಕೋಟಿ ದೀಪಗಳ ನಡುವೆ ಮಂಜುನಾಥ ದರ್ಶನ

ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಸನ್ನಿಧಿಯಲ್ಲಿ ಲಕ್ಷದೀಪೋತ್ಸವದ ಸಂಭ್ರಮಕ್ಕೆ ತೆರೆಬಿದ್ದಿದ್ದು, ಲಕ್ಷದೀಪೋತ್ಸವದ ಕೊನೆ ದಿನದ ಅಂಗವಾಗಿ ಮಂಜುನಾಥನ ಸಾನಿಧ್ಯದಲ್ಲಿ ವಿಶೇಷ ಪೂಜೆ ನಡೆದಿದೆ. ದೇವರ ಪೂಜೆ ಬಳಿಕ ಕೋಟಿ ಕೋಟಿ ದೀಪಗಳ ನಡುವೆ ಮಂಜುನಾಥನ ವೈಭವದ ಬೆಳ್ಳಿ ರಥೋತ್ಸವ ನಡೆದಿದ್ದು, ಮಕ್ಕಳು, ಹಿರಿಯರು, ವೃದ್ಧರೆನ್ನದೇ ಲಕ್ಷಾಂತರ ಜನರು ಈ ಪುಣ್ಯ ಕ್ಷಣವನ್ನು ಕಣ್ತುಂಬಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ...

ವೈದ್ಯರ ಮುಷ್ಕರಕ್ಕೆ ದ.ಕನ್ನಡ ಜಿಲ್ಲೆಯಲ್ಲಿ ಮೊದಲ ಬಲಿ- ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ವಿದ್ಯಾರ್ಥಿನಿ ಸಾವು

2 days ago

ಮಂಗಳೂರು: ಕಳೆದ ನಾಲ್ಕು ದಿನಗಳಿಂದ ರಾಜ್ಯಾದ್ಯಂತ ನಡೆಯುತ್ತಿದ್ದ ಮುಷ್ಕರ ಇಂದು ಕೂಡ ಮುಂದುವರೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯೊಬ್ಬರು ಮೊದಲ ಬಲಿಯಾಗಿದ್ದಾರೆ. 19 ವರ್ಷದ ಪೂಜಾ ಮೃತಪಟ್ಟ ದುರ್ದೈವಿ ವಿದ್ಯಾರ್ಥಿನಿ. ಈಕೆ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ದ್ವಿತೀಯ ಬಿಕಾಂ ಓದುತ್ತಿದ್ದರು. ಕಿಡ್ನಿ...

ಮಂಜುನಾಥನ ಸನ್ನಿಧಿಯಲ್ಲಿ ಲಕ್ಷದೀಪೋತ್ಸವ ಸಡಗರ – ಬಣ್ಣ ಬಣ್ಣದ ಬೆಳಕಿನ ಚಿತ್ತಾರ

5 days ago

ಮಂಗಳೂರು: ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಲಕ್ಷದೀಪೋತ್ಸವದ ಸಂಭ್ರಮ ಜೋರಾಗಿದೆ. ಐದು ದಿನಗಳ ದೀಪಗಳ ಉತ್ಸವಕ್ಕೆ ಧರ್ಮಸ್ಥಳದಲ್ಲಿ ಚಾಲನೆ ದೊರತಿದ್ದು, ಕ್ಷೇತ್ರದ ಪರಿಸರ ಝಗಮಗಿಸುತ್ತಿದೆ. ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ದೀಪೋತ್ಸವದ ವೇಳೆ ಕ್ಷೇತ್ರದ ಮುಖ್ಯ ದೇವರು ಮಂಜುನಾಥ, ಕ್ಷೇತ್ರದ ಹೊರಗೆ...

ಹಗ್ಗದ ಸಮೇತ ಹುಂಜವನ್ನೂ ನುಂಗಿ ಒದ್ದಾಡುತ್ತಿದ್ದ ಹೆಬ್ಬಾವಿನ ರಕ್ಷಣೆ

6 days ago

ಮಂಗಳೂರು: ಹುಂಜವನ್ನು ನುಂಗಿ ಅರಗಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದ ಹೆಬ್ಬಾವನ್ನು ಉರಗಪ್ರೇಮಿಯೊಬ್ಬರು ರಕ್ಷಿಸಿದ ಘಟನೆ ಮಂಗಳೂರಿನ ಬಜಾಲ್ ನಲ್ಲಿ ನಡೆದಿದೆ. ಬಜಾಲ್ ನ ಮನೆಯೊಂದರ ಕೋಳಿಗೂಡಿಗೆ ಹೆಬ್ಬಾವೊಂದು ನುಗ್ಗಿದೆ. ಕೋಳಿ ಗೂಡಿನಲ್ಲಿದ್ದ ದೈತ್ಯ ಹುಂಜವೊಂದನ್ನು ನುಂಗಿಬಿಟ್ಟಿದೆ. ಆದರೆ ಅದನ್ನು ಅರಗಿಸಿಕೊಳ್ಳಲಾಗದೆ ಗೂಡಿನ ಒಳಗೆಯೇ ಹೆಬ್ಬಾವು...

6 ನಾಯಿ ಮರಿಗಳಿಗೆ ಹಾಲುಣಿಸುತ್ತಿದೆ ಬೆಕ್ಕು- ಬೆಳ್ತಂಗಡಿಯಲ್ಲೊಂದು ಅಚ್ಚರಿಯ ಘಟನೆ

6 days ago

ಮಂಗಳೂರು: ಬೆಕ್ಕು ಮತ್ತು ನಾಯಿ ಪರಮ ಶತ್ರುಗಳು ಅಂತಾ ಹೇಳುತ್ತಾರೆ. ಆದರೆ ಇಲ್ಲೊಂದು ಬೆಕ್ಕು ಸುಮಾರು 6 ನಾಯಿ ಮರಿಗಳಿಗೆ ಹಾಲುಣಿಸಿ ತಾಯಿಯ ಪ್ರೀತಿಯನ್ನು ತೋರಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಈ ಅಪರೂಪದ ಘಟನೆ ನಡೆದಿದ್ದು, ಬೆಳ್ತಂಗಡಿಯ ಸೋಮಂತಡ್ಕ...

ಕರಾವಳಿಯಲ್ಲಿ ಮತ್ತೆ ಕಂಬಳ ಕೋಣಗಳ ಕಲರವ- 2ವರ್ಷಗಳ ನಂತರ ರಂಗೇರಿಸಿದ ಕಂಬಳ

1 week ago

ಮಂಗಳೂರು: ಕರಾವಳಿಯಲ್ಲಿ ಮತ್ತೆ ಕಂಬಳ ಕೋಣಗಳ ಕಲರವ ಆರಂಭವಾಗಿದ್ದು, ಕರಾವಳಿಯ ಜನಪದ ಕ್ರೀಡೆ ಕಂಬಳ ಮತ್ತೆ ರಂಗೇರಿಸಿಕೊಂಡಿದೆ. ಕಳೆದ ಎರಡು ವರ್ಷಗಳಿಂದ ನಿಷೇಧವಾಗುತ್ತದೆ ಎಂದು ತೂಗುಗತ್ತಿಯಡಿ ಆತಂಕದಲ್ಲೇ ಕಾಲ ಕಳೆದಿದ್ದ ಕಂಬಳ ಅಭಿಮಾನಿಗಳು ಮತ್ತೆ ಕೋಣಗಳೊಂದಿಗೆ ಕಂಬಳಕ್ಕಿಳಿದಿದ್ದಾರೆ. ಈ ಬಾರಿಯ ಮೊದಲ...

ಸಿಎಂ ಮನೆಯಂಗಳದಲ್ಲೇ ಮತಾಂತರ ನಡೆಯುತ್ತಿದೆ: ಸಂಸದೆ ಶೋಭಾ ಆರೋಪ

1 week ago

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಂಗಳದಲ್ಲೇ ಮತಾಂತರ ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷ ಸಮಾಜದ್ರೋಹಿ ಸಂಘಟನೆಗಳಿಗೆ ರಕ್ಷಣೆ ನೀಡಿ ಪೋಷಿಸುತ್ತಿದೆ ಎಂದು ಆರೋಪಿಸಿದ್ದಾರೆ. ಶನಿವಾರ ಮಂಗಳೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ ಐಸಿಸ್ ಸಂಘಟನೆಗೆ ಜನರನ್ನು ನೇಮಕ...