Thursday, 12th December 2019

7 hours ago

ಪತ್ರಿಕೋದ್ಯಮ ವಿದ್ಯಾರ್ಥಿನಿ ಗ್ಯಾಂಗ್ ರೇಪ್ – ಆರೋಪಿಗಳಿಗೆ ಜಾಮೀನು

– ಗ್ಯಾಂಗ್ ರೇಪ್ ಮಾಡಿ ವಿಡಿಯೋ ವೈರಲ್ ಮಾಡಿದ್ದ ಕಾಮುಕರು ಮಂಗಳೂರು: ತನ್ನ ಸಹಪಾಠಿ ವಿದ್ಯಾರ್ಥಿನಿಯನ್ನೇ ಐವರು ವಿದ್ಯಾರ್ಥಿಗಳು ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿ ಜೈಲು ಸೇರಿದ್ದ ಎಲ್ಲಾ ಅತ್ಯಾಚಾರಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ. ಪುತ್ತೂರಿನ ಪ್ರತಿಷ್ಠಿತ ಕಾಲೇಜೊಂದರ ಪತ್ರಿಕೋದ್ಯಮದ ವಿದ್ಯಾರ್ಥಿನಿಯೋರ್ವಳನ್ನು ಅದೇ ಕಾಲೇಜಿನ ಪ್ರಥಮ ಪಿಯುಸಿಯ ಐವರು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಅತ್ಯಾಚಾರ ನಡೆಸಿದ ವಿದ್ಯಾರ್ಥಿಗಳಾದ ಸುನಿಲ್ (19), ಗುರುನಂದನ್ (19), ಕಿಶನ್ (19), ಪ್ರಖ್ಯಾತ (19) ಹಾಗೂ ಪ್ರಜ್ವಲ್(19) ಜಾಮೀನು ಪಡೆದುಕೊಂಡ ಆರೋಪಿಗಳು. […]

11 hours ago

ಮೂರುವರೆ ವರ್ಷ ಯಾವುದೇ ತಂಟೆ ತಕರಾರಿಲ್ಲದೆ ಕೆಲಸ ಮಾಡುತ್ತೇವೆ: ಸಿಎಂ ಬಿಎಸ್‍ವೈ

ತುಮಕೂರು: ಉಪಚುನಾವಣೆಯಲ್ಲಿ ನಾಡಿನ ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ಹಾಗಾಗಿ ನೆಮ್ಮದಿಯಿಂದ ಎಲ್ಲಾ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಗುತ್ತಿದೆ. ಇನ್ನೂ ಮೂರುವರೆ ವರ್ಷಗಳ ಕಾಲ ಯಾವುದೇ ತಂಟೆ ತಕರಾರು ಇಲ್ಲದೇ ಕೆಲಸ ಮಾಡಿಕೊಂಡು ಹೋಗುತ್ತೇವೆ ಎಂದು ಸಿಎಂ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಕುಪ್ಪೂರು ಮಠದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ, ಉಪ ಚುನಾವಣೆ...

ಪದಕ ಗೆದ್ದ ಲಿಫ್ಟರ್‌ಗಳಿಗೆ ಹೃದಯಸ್ಪರ್ಶಿ ಸ್ವಾಗತ

2 days ago

ಮಂಗಳೂರು: ಕಜಕಿಸ್ತಾನದಲ್ಲಿ ನಡೆದ ಏಷ್ಯನ್ ಪವರ್ ಲಿಫ್ಟಿಂಗ್ ಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನ, ಬೆಳ್ಳಿ ಪದಕ ಗೆದ್ದ ಪವರ್ ಲಿಫ್ಟರ್‌ಗಳನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಆರತಿ ಬೆಳಗಿ ಸ್ವಾಗತಿಸಲಾಯಿತು. ಚಿನ್ನದ ಪದಕ ಪಡೆದ ಅರೆನ್ ಫೆರ್ನಾಂಡಿಸ್, ಶರತ್ ಪೂಜಾರಿ, ಸುಲೋಚನಾ, ಸತೀಶ್...

ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಗಾಂಜಾ ವ್ಯಸನಿಗಳು

2 days ago

– ಮಂಗಳೂರಿನಲ್ಲಿ ನಿಲ್ಲದ ಗಾಂಜಾ ಜಾಲ ಮಂಗಳೂರು: ಗಾಂಜಾ ವ್ಯಸನಿಗಳು ರೆಡ್‍ ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಘಟನೆ ಪಣಂಬೂರು ಸಮೀಪ ಬೈಕಂಪಾಡಿ ಬಳಿ ನಡೆದಿದೆ. ಸುರತ್ಕಲ್ ಜೆ.ಎಂ ರಸ್ತೆಯ ನಿವಾಸಿ ಮೊಹಮ್ಮದ್ ರಾಜಿಕ್ (32) ಹಾಗೂ ಚೇಳ್ಯಾರು...

ಸೋನಿಯಾ ಹುಟ್ಟುಹಬ್ಬವನ್ನು ಅನಾಥಾಶ್ರಮ, ವೃದ್ಧಾಶ್ರಮದಲ್ಲಿ ಆಚರಿಸಿದ ಜನಾರ್ದನ ಪೂಜಾರಿ

3 days ago

ಮಂಗಳೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯ ಹುಟ್ಟುಹಬ್ಬಕ್ಕೆ ಕರ್ನಾಟಕ ಕಾಂಗ್ರೆಸ್ ಹೀನಾಯ ಸೋಲಿನ ಉಡುಗೊರೆ ಕೊಟ್ಟರೆ ಕಾಂಗ್ರೆಸ್‍ನ ಹಿರಿಯ ನಾಯಕ ಜನಾರ್ದನ ಪೂಜಾರಿ ಅನಾಥಾಶ್ರಮಗಳಿಗೆ ಫಲವಸ್ತು, ಊಟ ಕೊಡುವುದರ ಮೂಲಕ ಹುಟ್ಟುಹಬ್ಬ ಆಚರಿಸಿದ್ದಾರೆ. ಈ ಬಾರಿ ದೇಶದೆಲ್ಲೆಡೆ ಮಹಿಳೆಯರ ಮೇಲಿನ ದೌರ್ಜನ್ಯದಿಂದ...

ದುರಹಂಕಾರಿ ಸಿದ್ದರಾಮಯ್ಯ ಕಾಂಗ್ರೆಸ್ಸಿಗೆ ಶನಿ – ಜನಾರ್ದನ ಪೂಜಾರಿ

3 days ago

– ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಲು ಸೂಕ್ತ ನಾಯಕ ಮಂಗಳೂರು: ಕಾಂಗ್ರೆಸ್ ರಾಜ್ಯ ನಾಯಕರ ದುರಹಂಕಾರದಿಂದಾಗಿಯೇ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲಲು ಕಾರಣ ಎಂದು ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಕಿಡಿಕಾರಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...

ಬೆಳ್ತಂಗಡಿ ಕ್ಷೇತ್ರಕ್ಕೆ ಸರ್ಕಾರದಿಂದ 347 ಕೋಟಿ ರೂ. ಅನುದಾನ

4 days ago

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ಸುಮಾರು 347 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚಾಲನೆ ನೀಡಿದ್ದಾರೆ. ಬೆಳ್ತಂಗಡಿ ಯುವ ಶಾಸಕ ಹರೀಶ್ ಪೂಂಜಾ ಅವರ ಸತತ ಪರಿಶ್ರಮದಿಂದ...

ಹಸುಕರುಗಳ ಹೊಸ ಲೋಕ ಗೋಮಂಡಲ

4 days ago

ಮಂಗಳೂರು: ಭಾರತೀಯ ಪರಂಪರೆಯಲ್ಲಿ ಗೋಮಾತೆಗೆ ಪೂಜನೀಯ ಸ್ಥಾನವಿದೆ. ಅಂತಹ ಗೋಮಾತೆಯ ಪೂಜೆಯನ್ನು ಗ್ರಾಮೀಣ ಭಾಗದಲ್ಲಿ ನಡೆಸಲಾಗುತ್ತದೆ. ಆದರೆ ನಗರ ವಾಸಿಗಳಿಗೆ ಇಂತಹ ಅವಕಾಶ ಸಿಗೋದು ಕಡಿಮೆ. ಹೀಗಾಗಿ ಮಂಗಳೂರು ನಗರದಲ್ಲಿ ನಗರವಾಸಿಗಳಿಗಾಗಿ ಬೃಹತ್ ಗೋಮಂಡಲ ಅನ್ನುವ ಗೋವುಗಳ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು....