Saturday, 16th December 2017

Recent News

3 weeks ago

ಮದುವೆಗೆ ಗೆಳೆಯನನ್ನು ಕರೆತರಲು ಹೋದಾಗ ಕಾರು ಪಲ್ಟಿ- ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ

ಚಿತ್ರದುರ್ಗ: ಮದುವೆಗೆ ಗೆಳೆಯನನ್ನು ಕರೆತರಲು ಹೋದಾಗ ಕಾರು ಪಲ್ಟಿಯಾಗಿ ಸ್ಥಳದಲ್ಲಿಯೇ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಹರಿಯಬ್ಬೆ ಗ್ರಾಮದ ಬಳಿ ನಡೆದಿದೆ. ಮಸ್ಕಲ್ ಗ್ರಾಮದ ನಿವಾಸಿ ವೀರೇಶ್(35) ಮೃತ ದುರ್ದೈವಿ. ಅಪಘಾತದಲ್ಲಿ ಕಾರು ಚಾಲಕ ರಘು ಗುರುಪ್ರಸಾದ್ ಹಾಗೂ ಮುದ್ದಣ್ಣಗೆ ಗಂಭೀರವಾಗಿ ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮೂವರು ಚಿಲ್ಲಹಳ್ಳಿ ಗ್ರಾಮದಲ್ಲಿ ಅವರ ಸಂಬಂಧಿಕರ ಮದುವೆಗೆಂದು ಬಂದಿದ್ದರು. ಮೊದಲು ಇವರು ಬಂದು ನಂತರ ಬೆಂಗಳೂರಿನಿಂದ ಬಂದ ಗೆಳೆಯನನ್ನು ಕರೆತರಲು […]

4 weeks ago

6 ತಿಂಗ್ಳ ಹಿಂದೆಯಷ್ಟೇ ಮದುವೆಯಾಗಿದ್ದ ಗೃಹಿಣಿ ಆತ್ಮಹತ್ಯೆ!

ಚಿತ್ರದುರ್ಗ: ಗೃಹಿಣಿಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನ ಆಶಾ (23) ಗುರುತಿಸಲಾಗಿದೆ. ಆಶಾ ಅವರಿಗೆ ಕಳೆದ ಆರು ತಿಂಗಳ ಹಿಂದೆಯಷ್ಟೇ ನಾಗರಾಜ್ ಎಂಬವರೊಂದಿಗೆ ವಿವಾಹವಾಗಿತ್ತು. ಇದೀಗ ಆಶಾ ನೇಣಿಗೆ ಶರಣಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ನೇಣು ಬಿಗಿದಿರೋ ಸ್ಥಿತಿ ಕೂಡ ಅನುಮಾನಸ್ಪದವಾಗಿದ್ದೂ,...

ಚಿತ್ರಾನ್ನ, ಮಂಡಕ್ಕಿ ತಿಂಡಿ ತಿಂದು ಇಬ್ಬರು ಮಕ್ಕಳ ಸಾವು

4 weeks ago

ಚಿತ್ರದುರ್ಗ: ವಿಷಪೂರಿತ ಆಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರೋ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಪಾತಪ್ಪನಗುಡಿ ಗ್ರಾಮದಲ್ಲಿ ನಡೆದಿದೆ. ಮೃತರು ಬೋಜಪ್ಪ, ಲಕ್ಷ್ಮಿದೇವಿ ದಂಪತಿಯ ಮಕ್ಕಳಾದ ವರ್ಷಿಣಿ(3) ಹಾಗೂ ಜಗದೀಶ್(6) ಎಂದು ಗುರುತಿಸಲಾಗಿದೆ. ರಾತ್ರಿ ಮನೆಯಲ್ಲಿ...

ತಾರಕಕ್ಕೇರಿದೆ ಯಾದವಿ ಮಠದ ಒಳಜಗಳ – ಸ್ವಾಮೀಜಿ ಓಡಿಸಲು ಒಂದು ಬಣ, ಪರವಾಗಿ ಒಂದು ಟೀಂ

1 month ago

ಚಿತ್ರದುರ್ಗ: ಇದು ಇಡೀ ದೇಶಕ್ಕೆ ಮೀಸಲಾಗಿರುವ ಯಾದವ ಸಮುದಾಯಕ್ಕಿರುವ ಏಕೈಕ ಗುರುಪೀಠ. ಈಗ ಆ ಮಠದ ಪೀಠಾಧಿಪತಿಯನ್ನೇ ಬದಲಿಸುವ ವಿವಾದ ಭಕ್ತರಲ್ಲಿ ಭುಗಿಲೆದ್ದಿದೆ. ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಶ್ರೀಕೃಷ್ಣ ಯಾದವ ಮಹಾಸಂಸ್ಥಾನ ಮಠದ ಶ್ರೀಕೃಷ್ಣ ಯಾದವಶ್ರೀಗಳು ಪೀಠಾಧ್ಯಕ್ಷರು. ಅಖಿಲ ಭಾರತ...

ವೀರವನಿತೆ ಒನಕೆ ಓಬವ್ವಳ ಸ್ಮಾರಕ, ಜಯಂತಿಗೆ ಸರ್ಕಾರಕ್ಕೆ ಆಗ್ರಹ

1 month ago

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಎಂದ ಕ್ಷಣ ವೀರವನಿತೆ ಒನಕೆ ಓಬವ್ವಳ ಸಾಹಸ ಕಣ್ಮುಂದೆ ಬರುತ್ತೆ. ಆಕೆ ಹೈದರಾಲಿ ಸೈನಿಕರ ವಿರುದ್ಧ ಒನಕೆ ಹಿಡಿದು ವೀರಾವೇಶದಿಂದ ಹೋರಾಡಿ ಕೋಟೆಯನ್ನು ರಕ್ಷಿಸಿದ ಸಾಹಸವನ್ನು ದುರ್ಗದ ಜನರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆದರೆ ಚಿತ್ರದುರ್ಗ ಜಿಲ್ಲಾಡಳಿತಕ್ಕೆ...

ರಾಜ್ಯಕ್ಕೆ ಟಿಪ್ಪು ಸುಲ್ತಾನ್ ಕೊಡುಗೆ ಏನು- ಸಿಎಂಗೆ ಸಂಸದ ಪ್ರತಾಪ್ ಸಿಂಹ ಪ್ರಶ್ನೆ

1 month ago

ಚಿತ್ರದುರ್ಗ: ಕರ್ನಾಟಕ ರಾಜ್ಯಕ್ಕೆ ಟಿಪ್ಪು ಸುಲ್ತಾನ್ ಕೊಡುಗೆ ಏನು! ಯಾಕೆ ಈ ಜಯಂತಿ ಮಾಡ್ತಿದ್ದಾರೆ ಅನ್ನೋದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರಿಸಬೇಕೆಂದು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಟಿಪ್ಪು ವಿರೋಧಿ ವಿಚಾರ ಸಂಕೀರ್ಣದಲ್ಲಿ ಭಾಗವಹಿಸದಂತೆ...

ಟಿಪ್ಪು ಜಯಂತಿಗೆ ಇನ್ನೆರಡು ದಿನ ಬಾಕಿಯಿರುವಾಗ್ಲೇ ಕೋಟೆನಾಡಲ್ಲಿ ಹೈ ಅಲರ್ಟ್

1 month ago

ಚಿತ್ರದುರ್ಗ: ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ರೆ, ಕಾಂಗ್ರೆಸ್ ಸರ್ಕಾರ ಮಾತ್ರ ಕಮಲಪಾಳಯದ ಬೆದರಿಗೆ ಸೆಡ್ಡು ಹೊಡೆದು ಜಯಂತಿ ಆಚರಣೆಗೆ ಮುಂದಾಗಿದೆ. ಚಿತ್ರದುರ್ಗದಲ್ಲಿಯೂ ಟಿಪ್ಪು ಆಚರಣೆಗೆ ವಿರೋಧ ವ್ಯಕ್ತವಾಗಿದ್ದು, ಇನ್ನೂ ಮೂರು ದಿನ ಇರುವಂತೆಯೇ 144 ಸೆಕ್ಷನ್...

ವಿಸಿಟಿಂಗ್ ಕಾರ್ಡ್ ಕೊಟ್ಟು ಕಾಲ್ ಮಾಡದ್ದಕ್ಕೆ ಹಾಜರಾತಿ ಕಡಿಮೆ- ಸರ್ಜನ್ ವಿರುದ್ಧ ವಿದ್ಯಾರ್ಥಿನಿ ಗಂಭೀರ ಆರೋಪ

1 month ago

ಚಿತ್ರದುರ್ಗ: ಇದೊಂಥರ ವಿಚಿತ್ರ ಪ್ರಕರಣ. ಜಿಲ್ಲಾ ಸರ್ಜನ್ ನನಗೆ ವಿಸಿಟಿಂಗ್ ಕಾರ್ಡ್ ಕೊಟ್ಟು ಕಾಲ್ ಮಾಡು ಎಂದು ಹೇಳುತ್ತಾರೆ. ಅಲ್ಲಿ ಇಲ್ಲಿ ಬಾ ಎಂದು ಕರೀತಾರೆ ಎಂದು ವಿದ್ಯಾರ್ಥಿನಿಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ. ಆದರೆ ಜಿಲ್ಲಾ ಸರ್ಜನ್ ನನ್ನ ಮಗಳಿಗಿಂತ ಚಿಕ್ಕ...