Tuesday, 23rd January 2018

Recent News

2 days ago

ಮರಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಚಿತ್ರದುರ್ಗ: ಮರಕ್ಕೆ ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಅಬ್ಬೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಬ್ಬೇನಹಳ್ಳಿಯ ನಾಗರಾಜ(24) ಆತ್ಮಹತ್ಯೆಗೆ ಶರಣಾದ ಯುವಕ. ನಾಗರಾಜ ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಖಾಸಗಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಮೂರು ದಿನಗಳ ಹಿಂದೆಯಷ್ಟೇ ಸ್ವಗ್ರಾಮಕ್ಕೆ ಬಂದಿದ್ದ. ಆದರೆ ಇದ್ದಕ್ಕಿದ್ದಂತೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ನಾಗರಾಜ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದ್ದು, ಮುಂಜಾನೆ ಗ್ರಾಮಸ್ಥರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ […]

2 days ago

ಚಿತ್ರದುರ್ಗದಲ್ಲಿ ತಮಟೆ ಸದ್ದಿಗೆ ಸಖತ್ ಸ್ಟೆಪ್ಸ್ ಹಾಕಿದ ನಟಿ ಭಾವನಾ

ಚಿತ್ರದುರ್ಗ: ಮರವಣಿಗೆಯೊಂದರಲ್ಲಿನ ತಮಟೆ ಸದ್ದಿಗೆ ನಟಿ ಭಾವನಾ ಅವರು ಸಖತ್ ಸ್ಟೆಪ್ಸ್ ಹಾಕಿದ್ದಾರೆ. ನಗರದಲ್ಲಿಂದು ನಿಜಶರಣ ಅಂಬಿಗರ ಚೌಡಯ್ಯ ಜಯಂತೋತ್ಸವದ ಮೆರವಣಿಗೆ ನಡೆಯಿತು. ಈ ಮೆರವಣಿಗೆಯಲ್ಲಿ ನಟಿ ಭಾವನಾ ಕೂಡ ಭಾಗಿಯಾಗಿದ್ದು, ಕರುವಿನಕಟ್ಟೆ ವೃತ್ತದಲ್ಲಿ ಸಮುದಾಯದ ಮಹಿಳೆಯರೊಂದಿಗೆ ತಾವೂ ಕೂಡ ಹೆಜ್ಜೆ ಹಾಕುವ ಮೂಲಕ ಮನರಂಜಿಸಿದ್ರು. ಜಿಲ್ಲೆಯ ಬುರುಜನಹಟ್ಟಿ ಬಡವಾವಣೆಯ ನಿವಾಸಿಯಾಗಿರೋ ಇವರು ಚಿತ್ರದುರ್ಗ ವಿಧಾನಸಭಾ...

ಕರ್ನಾಟಕವನ್ನು ನೋಡಿ ಮೋದಿಗೆ ಗಾಬರಿ: ಡಿಕೆಶಿ ‘ಪವರ್’ ಫುಲ್ ಪಂಚ್

1 week ago

ಚಿತ್ರದುರ್ಗ: ತುಮಕೂರಿನ ಪಾವಗಡ ಸೋಲಾರ್ ಪಾರ್ಕ್ ನೋಡಿ ಪ್ರಧಾನಿ ಮೋದಿ ಗಾಬರಿಯಾಗಿದ್ದಾರೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇಂದು ಜಿಲ್ಲೆಯ ಹೊಸದುರ್ಗದಲ್ಲಿ ವಿದ್ಯುತ್ ಉಪಕೇಂದ್ರಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವದ ಅತೀ ದೊಡ್ಡ ಸೋಲಾರ್ ಪಾರ್ಕ್ ಪಾವಗಡದಲ್ಲಿ...

ಗೋವಿಂದರಾಜು ಡೈರಿ ಓದಿದ್ರೆ 1 ವಾರ ಕೈ ಸರ್ಕಾರ ಅಕ್ರಮದ ಬಗ್ಗೆ ಭಾಷಣ ಮಾಡಬಹುದು: ಅಮಿತ್ ಶಾ

2 weeks ago

ಚಿತ್ರದುರ್ಗ: ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ನಿವಾಸದಲ್ಲಿ ಆದಾಯ ತೆರಿಗೆ ದಾಳಿ ವೇಳೆ ಸಿಕ್ಕಿದ ಡೈರಿಯಲ್ಲಿ ಉಲ್ಲೇಖಗೊಂಡಿರುವ ವಿಚಾರಗಳನ್ನು ಓದಿದರೆ ಸರ್ಕಾರದ ಅಕ್ರಮಗಳ ಬಗ್ಗೆಯೇ ಒಂದು ವಾರ ಭಾಷಣ ಮಾಡಬಹುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಹೊಳಲ್ಕೆರೆಯಲ್ಲಿ...

ಬಿಜೆಪಿ ಪರಿವರ್ತನಾ ಯಾತ್ರೆಗೆ ಬಂದಿದ್ದ ಟಾಟಾ ಏಸ್ ಪಲ್ಟಿ-ನಾಲ್ವರ ಸಾವು

2 weeks ago

ಚಿತ್ರದುರ್ಗ: ಜಿಲ್ಲೆಯಲ್ಲಿ ಏರ್ಪಡಿಸಿದ್ದ ಪರಿವರ್ತನಾ ಯಾತ್ರೆ ಬಂದಿದ್ದ ಟಾಟಾ ಏಸ್ ವಾಹನ ಪಲ್ಟಿಯಾಗಿ ನಾಲ್ಕು ಜನ ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ್ದು, ಸುಮಾರು ಐವರು ಗಾಯಗೊಂಡಿರುವ ಘಟನೆ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ನೆರ್ಲಹಳ್ಳಿ ಬಳಿ ನಡೆದಿದೆ. ಮೃತರನ್ನು ಹೋನ್ನೂರಪ್ಪ (55), ಚಂದ್ರಪ್ಪ, ಹನುಮಂತ...

ಸಿದ್ದರಾಮಯ್ಯ ತಲೆತಿರುಕ, ಹುಚ್ಚನಂತೆ ಮಾತನಾಡ್ತಾನೆ: ಬಿಎಸ್‍ವೈ

2 weeks ago

ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ತಲೆತಿರುಕ ಬಾಯಿಗೆ ಬಂದಂತೆ ಹುಚ್ಚನಂತೆ ಮಾತನಾಡುತ್ತಾನೆ, ಯೋಗಿ ಆದಿತ್ಯನಾಥ್ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಕೋಟೆನಾಡು ನಡೆಯುತ್ತಿರುವ ಬಿಜೆಪಿ ಪರಿವರ್ತನಾ ಯಾತ್ರೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು,...

ಪೋಲಿಯೋ ಕಾಡಿದರೂ ಕುಗ್ಗದ ಉತ್ಸಾಹ- ಚಿತ್ರದುರ್ಗದ ಜಯಪ್ರಕಾಶ್ ಗೆ ಕೈ ಹಿಡಿಯಿತು ಪತ್ರಿಕೆ, ಸಾಹಿತ್ಯ ಪ್ರೇಮ

2 weeks ago

ಚಿತ್ರದುರ್ಗ: ಕೈ ಕಾಲು ಚೆನ್ನಾಗಿದ್ರೂ ಡ್ರಾಮಾ ಮಾಡ್ಕೊಂಡು ಜೀವನ ಮಾಡೋವವರೇ ಜಾಸ್ತಿ. ಆದ್ರೆ, ಚಿತ್ರದುರ್ಗದ ಇಂದಿನ ಪಬ್ಲಿಕ್ ಹೀರೋ ಪೋಲಿಯೋಗೆ ತುತ್ತಾಗಿದ್ರೂ ಅಳುಕದೆ ಜೀವನ ಸಾಗಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಚಿತ್ರದುರ್ಗದ ಹನುಮಂತಶೆಟ್ಟಿ ಹಾಗೂ ನಂಜಲಕ್ಷ್ಮಮ್ಮ ದಂಪತಿಯ ಒಂಭತ್ತು ಮಕ್ಕಳಲ್ಲಿ ಎರಡನೆಯವರು...

ದಾರಿ ತಪ್ಪಿ ನಾಡಿಗೆ ಬಂದಿದ್ದ ಕೃಷ್ಣಮೃಗದ ರಕ್ಷಣೆ

2 weeks ago

ಚಿತ್ರದುರ್ಗ: ದಾರಿ ತಪ್ಪಿ ನಾಡಿಗೆ ಬಂದಿದ್ದ ಕೃಷ್ಣಮೃಗವನ್ನ ಚಿತ್ರದುರ್ಗದಲ್ಲಿ ರಕ್ಷಣೆ ಮಾಡಲಾಗಿದೆ. ನಗರದ ಚಂದ್ರವಳ್ಳಿ ಬಳಿ ಒಂಟಿಯಾಗಿ ಜನರ ಹಿಂದೆ ಹಿಂದೆ ಹೋಗುತ್ತಿದ್ದ ಕೃಷ್ಣ ಮೃಗವನ್ನ ಚಿತ್ರದುರ್ಗದ ಯುವಕ ನವೀನ್ ಮತ್ತು ಸ್ನೇಹಿತರು ರಕ್ಷಣೆ ಮಾಡಿದ್ದಾರೆ. ನಂತರ ಪೊಲೀಸರಿಗೆ ಮತ್ತು ಅರಣ್ಯ...