Tuesday, 23rd January 2018

Recent News

5 months ago

ವೇತನ ಹೆಚ್ಚಳ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏರ್‍ಪೋರ್ಟ್ ನೌಕರರ ಪ್ರತಿಭಟನೆ

ಚಿಕ್ಕಬಳ್ಳಾಪುರ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಇಂಡಿಯಾ ಸ್ಯಾಟ್ಸ್ ಕಾರ್ಮಿಕರ ವೇತನ ಹೆಚ್ಚಳ ಮತ್ತು ಯೂನಿಯನ್ ಗೆ ಮಾನ್ಯತೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನೂರಾರು ಕಾರ್ಮಿಕರು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಗೇಟ್ ಬಳಿ ಜಮಾಯಿಸಿದ ನೂರಾರು ಕಾರ್ಮಿಕರು ಏರ್ ಇಂಡಿಯಾ ಸ್ಯಾಟ್ಸ್ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರಗಳನ್ನ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏರ್‍ಪೋರ್ಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕನಿಷ್ಟ […]

5 months ago

3 ಫಾರಿನ್ ಪ್ರವಾಸಿಗರಿಗೆ ಅಪಘಾತ- ಚಿಕಿತ್ಸೆ ಕೊಡಿಸಿ, ಮನೆಯಲ್ಲಿ ಊಟ ನೀಡಿ ಆತಿಥ್ಯ ತೋರಿದ ಶಿಡ್ಲಘಟ್ಟ ಜನ

ಚಿಕ್ಕಬಳ್ಳಾಪುರ: ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತ ದೇಶದ ಮೂಲಮಂತ್ರ ಅತಿಥಿ ದೇವೋಭವ. ಶತ್ರುಗಳಿಗೂ ಒಳ್ಳೆಯದನ್ನು ಬಯಸುವ ಸ್ವಭಾವ ಭಾರತೀಯರದ್ದು. ಇಲ್ಲಿಗೆ ಬಂದ ಮೂವರು ಪ್ರವಾಸಿಗರು ಸಂಕಷ್ಟದಲ್ಲಿದ್ದಾಗ ಸ್ಪಂದಿಸಿ, ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದ್ದಾರೆ. ಭಾರತಕ್ಕೆ ಪ್ರತಿವರ್ಷ ಏನಿಲ್ಲ ಅಂದ್ರೂ 30 ರಿಂದ 40 ಲಕ್ಷ ವಿದೇಶಿಗರು ಪ್ರವಾಸಕ್ಕೆ ಅಂತಾನೇ ಬರ್ತಾರೆ. ಹೀಗೆ ಪ್ರವಾಸಕ್ಕೆ ಅಂತ ಬಂದಿದ್ದ...

ಕೈ ನಾಯಕರು ಕಮಲ ಸೇರ್ತಾರಾ: ಪ್ರಶ್ನೆಗೆ ಸಿಎಂ ಉತ್ತರಿಸಿದ್ದು ಹೀಗೆ

6 months ago

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷದಿಂದ ಯಾರೂ ಬಿಜೆಪಿ ಸೇರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಗರದ ಹೊರವಯದ ಅಣಕನೂರು ಗ್ರಾಮದ ಬಳಿ ನೂತನವಾಗಿ ನಿರ್ಮಿಸಲಾಗಿದ್ದ ಜಿಲ್ಲಾ ಪೊಲೀಸ್ ಕಚೇರಿ ಉದ್ಘಾಟಿಸಿ ನಂತರ ಮಾಧ್ಯಮಗಳ ಜೊತೆ ಸಿಎಂ ಮಾತನಾಡಿದರು. ಕೆಲ ಕೈ ನಾಯಕರು ಬಿಜೆಪಿಗೆ...

ತಂದೆ-ತಾಯಿಯ ಸಮಾಧಿ ಬಳಿ ಹೋಗಿ ಆತ್ಮಹತ್ಯೆ ಮಾಡಿಕೊಂಡ ರೈತ

6 months ago

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಆನೂರು ಗ್ರಾಮದಲ್ಲಿ ಕೊಳವೆಬಾವಿಗಳ ವೈಫಲ್ಯ ಹಾಗೂ ಸಾಲಬಾಧೆಯಿಂದ ಮನನೊಂದ ರೈತರೊಬ್ಬರು ತನ್ನ ತಂದೆ-ತಾಯಿಯ ಸಮಾಧಿ ಬಳಿ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 43 ವರ್ಷದ ಪ್ರಕಾಶ್ ಆತ್ಮಹತ್ಯೆಗೆ ಶರಣಾಗಿರುವ ರೈತ. ಮೃತ ಪ್ರಕಾಶ್ ಪತ್ನಿ ಸಾಲ ತೀರಲಿ...

ಮೂತ್ರ ವಿಸರ್ಜನೆಗೆಂದು ರಸ್ತೆ ದಾಟೋ ವೇಳೆ ಕಾರು ಡಿಕ್ಕಿ ಹೊಡೆದು ವೃದ್ಧ ಸಾವು

6 months ago

ಚಿಕ್ಕಬಳ್ಳಾಪುರ: ಬೆಂಗಳೂರು ಉತ್ತರ ತಾಲೂಕಿನ ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷನಿಗೆ ಸೇರಿದ ಕಾರು ವೃದ್ಧನಿಗೆ ಡಿಕ್ಕಿ ಹೊಡೆದ ಪರಿಣಾಮ ವೃದ್ಧ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚದಲಪುರದ ಎಸ್‍ಪಿ ಕಚೇರಿ ಬಳಿ ನಡೆದಿದೆ. ಗೌರಿಬಿದನೂರು ತಾಲೂಕು ಕಾಟನಕಲ್ಲು ಗ್ರಾಮದ ಖಾಜಾಬೇಗ್(75) ಮೃತಪಟ್ಟ ವೃದ್ಧ....

ಆಕ್ಟಿವಾಗೆ ಟಿಪ್ಪರ್ ಲಾರಿ ಡಿಕ್ಕಿ: ಭಯಾನಕ ಅಪಘಾತದಿಂದ ಇಬ್ಬರು ಪಾರು

6 months ago

ಚಿಕ್ಕಬಳ್ಳಾಪುರ: ಆಕ್ಟಿವಾ ಹೋಂಡಾ ಬೈಕಿಗೆ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದ ಭೀಕರ ಅಪಘಾತದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಪಾಳ್ಯ ಗೇಟ್ ಬಳಿ ಈ ಅಪಘಾತ ನಡೆದಿದೆ. ಇದು ಒಂದು ವಾರದ...

ಜೀಪು, ಬೈಕ್ ಡಿಕ್ಕಿ-ಇಬ್ಬರು ವಿದ್ಯಾರ್ಥಿಗಳ ದುರ್ಮರಣ

6 months ago

ಚಿಕ್ಕಬಳ್ಳಾಪುರ: ಅರಣ್ಯ ಇಲಾಖೆಯ ಜೀಪು ಮತ್ತು ಬೈಕ್ ನಡುವೆ ಮುಖಾಮುಕಿ ಡಿಕ್ಕಿ ಸಂಭವಿಸಿದ್ದು, ಬೈಕನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಮ್ಮಗಾರಹಳ್ಳಿ ಗೇಟ್ ಬಳಿ ನಡೆದಿದೆ. ಅನಿಲ್ ಕುಮಾರ್(17) ಮತ್ತು ಭರತ್ ಕುಮಾರ್(17) ಅಪಘಾತದಲ್ಲಿ ಮೃತಪಟ್ಟ...

ಮರುಮದುವೆಯಾದಳ ಜೊತೆ ತಿಂಗಳು ಸಂಸಾರ ನಡೆಸಿ ಕೈ ಕೊಟ್ಟ ಪ್ರೇಮಿ- ಗಂಡನ ಮನೆ ಮುಂದೆ ಧರಣಿ ಕುಳಿತ ಪ್ರಿಯತಮೆ

6 months ago

ಚಿಕ್ಕಬಳ್ಳಾಪುರ: ಮದುವೆಯಾಗಿ ಗಂಡನ ಮನೆಯಲ್ಲಿ ಹಾಯಾಗಿದ್ದ ಪ್ರಿಯತಮೆಯ ಬೆನ್ನು ಬಿದ್ದ ಪ್ರೇಮಿಯೊಬ್ಬ ಮರುಮುದುವೆಯಾಗಿ ಬಳಿಕ ಇದೀಗ ನಾಪತ್ತೆಯಾದ ಘಟನೆಯೊಂದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ದೊಡ್ಡದಾಸರಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶ್ರೀನಿವಾಸ-ಮಂಜುಳಾ ದಂಪತಿಯ ಏಕೈಕ ಪುತ್ರಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ...