Friday, 24th November 2017

Recent News

16 hours ago

ಜಸ್ಟ್ 10 ರೂ. ಖರ್ಚು ಮಾಡಿ, ಲಕ್ಷ ಲಕ್ಷ ಹಣ ದೋಚುತ್ತಿದ್ದವರು ಅರೆಸ್ಟ್!

ಚಿಕ್ಕಬಳ್ಳಾಪುರ: ಬ್ಯಾಂಕುಗಳಿಂದ ಭಾರೀ ಮೊತ್ತದ ಹಣ ಡ್ರಾ ಮಾಡುತ್ತಿದ್ದ ಗ್ರಾಹಕರನ್ನು ಟಾರ್ಗೆಟ್ ಮಾಡಿ, ಅವರ ಗಮನ ಬೇರೆ ಕಡೆಗೆ ಸೆಳೆದು ಕ್ಷಣ ಮಾತ್ರದಲ್ಲಿ ಲಕ್ಷ ಲಕ್ಷ ಎಗರಿಸುತ್ತಿದ್ದ ಖತರ್ನಾಕ್ ಖದೀಮರನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಓಜಿಕುಪ್ಪಂ ಗ್ರಾಮದ ರಮಣ ಹಾಗೂ ಸತೀಶ್ ಬಂಧಿತರು. ಆರೋಪಿಗಳಿಂದ ಸುಮಾರು 15 ಲಕ್ಷ ರೂ. ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೀಗಿತ್ತು ಇವರ ಕೃತ್ಯ: ಬಂಧಿತ ಕಳ್ಳರು ಕೆಳಗೆ 10 ರೂ. ಹಾಗೂ 100 ರೂಪಾಯಿ ನೋಟು […]

2 days ago

ಪ್ರವಾಸ ಹೋಗಲು ಪೋಷಕರು ಅನುಮತಿ ನೀಡದ್ದಕ್ಕೆ 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ಎಂಟನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಚಿಂತಾಮಣಿ ತಾಲೂಕು ಇರಗಂಪಲ್ಲಿ ಗ್ರಾಮದಲ್ಲಿ ನಡೆದಿದೆ. ಪ್ರವಾಸ ಹೋಗಲು ಪೋಷಕರು ಅನುಮತಿ ನೀಡದ ಹಿನ್ನೆಲೆಯಲ್ಲಿ ಸುಧಾಕರ್ (14) ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.     ಅಜ್ಜಿ ಮನೆಯಲ್ಲಿದ್ದುಕೊಂಡು ಸ್ಥಳೀಯ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಧಾಕರ್, ಶಾಲೆಯಿಂದ ಎಲ್ಲಾ ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳುತ್ತಿದ್ದಾರೆ. ಹೀಗಾಗಿ...

ಊಟ ತಡವಾಗಿ ತಂದ ಪತ್ನಿಯನ್ನ ಗಡಾರಿಯಿಂದ ಇರಿದು ಕೊಂದೇ ಬಿಟ್ಟ!

1 week ago

ಚಿಕ್ಕಬಳ್ಳಾಪುರ: ಹಳೆಯ ಮನೆಯನ್ನ ಕೆಡವುತ್ತಿದ್ದ ವೇಳೆ ಊಟ ತಡವಾಗಿ ತಂದಿದ್ದಕ್ಕೆ ಕೈಯಲ್ಲಿದ್ದ ಕಬ್ಬಿಣ ಗಡಾರಿಯಿಂದಲೇ ಕುತ್ತಿಗೆಗೆ ಇರಿದು ಗಂಡನೇ ಹೆಂಡತಿಯನ್ನ ಕೊಲೆ ಮಾಡಿರುವ ಭೀಕರ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಎಮ್ ಗುಂಡ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. 26 ವರ್ಷದ ಅಮೃತಾ ಕೊಲೆಯಾದ...

ಖಾಸಗಿ ವೈದ್ಯರ ಮುಷ್ಕರದ ಎಫೆಕ್ಟ್- ನಕಲಿ ವೈದ್ಯನ ಬಳಿ ಚಿಕಿತ್ಸೆಗೆ ಹೋದ ವ್ಯಕ್ತಿ ಸಾವು

1 week ago

ಚಿಕ್ಕಬಳ್ಳಾಪುರ: ರಾಜ್ಯಾದ್ಯಾಂತ ಖಾಸಗಿ ವೈದ್ಯರು ಮುಷ್ಕರ ನಡೆಸುತ್ತಿರುವುದು ನಕಲಿ ವೈದ್ಯರಿಗೆ ವರ ಎಂಬಂತಾಗಿದೆ. ಚಿಕಿತ್ಸೆ ನೀಡುವ ಹೆಸರಿನಲ್ಲಿ ದುಡ್ಡು ಮಾಡೋಕೆ ಹೋದ ನಕಲಿ ವೈದ್ಯ ಅಮಾಯಕ ವ್ಯಕ್ತಿಯನ್ನು ಬಲಿ ಪಡೆದಿದ್ದಾನೆ. ಬಾಗೇಪಲ್ಲಿ ತಾಲೂಕು ಘಂಟವಾರಿಪಲ್ಲಿ ಗ್ರಾಮದ 40 ವರ್ಷದ ನರಸಪ್ಪ ಮೃತ...

ದೇವರ ಪ್ರಸಾದ ತಿಂದು ಕೈ ತೊಳೆಯಲು ಹೋಗಿ ಸಾವನ್ನಪ್ಪಿದ ಬಾಲಕರು

2 weeks ago

ಚಿಕ್ಕಬಳ್ಳಾಪುರ: ಆಂಜನೇಯ ದೇವರ ದರ್ಶನ ಪಡೆದು, ಪ್ರಸಾದ ತಿಂದು ಬಾಲಕರಿಬ್ಬರು ಕೈ ತೊಳೆಯಲು ಕುಂಟೆಗೆ ಹೋದವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಭೈರನಾಯಕನಹಳ್ಳಿ ಗೇಟ್ ಬಳಿ ನಡೆದಿದೆ. ಅನೂರು ಗ್ರಾಮದ ಗಾಯಿತ್ರಿ ನಟರಾಜು ದಂಪತಿಯ ಮಗನಾದ ಯಶವಂತ್(12) ಹಾಗೂ ಅನಿತಾ...

ಆಸ್ತಿ ತೆರಿಗೆ ಕಟ್ಟಲು KSRTC ಡಿಸಿಗೆ ನಗರಸಭೆ ಆಯುಕ್ತ ಉಮಾಕಾಂತ್ ಖಡಕ್ ಎಚ್ಚರಿಕೆ

2 weeks ago

ಚಿಕ್ಕಬಳ್ಳಾಪುರ: ಆಸ್ತಿ ತೆರಿಗೆ ಪಾವತಿಸುವಂತೆ ಕೆ.ಎಸ್‍.ಆರ್.ಟಿ.ಸಿ ಡಿಸಿ ಆಂಥೋನಿ ಜಾರ್ಜ್‍ಗೆ ಚಿಕ್ಕಬಳ್ಳಾಪುರ ನಗರಸಭೆ ಆಯುಕ್ತ ಉಮಾಕಾಂತ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ತೆರಿಗೆ ಪಾವತಿಸಿ ಇಲ್ಲದಿದರೆ ಕೆ.ಎಸ್‍.ಆರ್.ಟಿ.ಸಿ ಸಾರಿಗೆ ಸೇವೆ, ವಹಿವಾಟಿಗೆ ಬ್ರೇಕ್ ಹಾಕುತ್ತೀವಿ ಎಂದು ಎಚ್ಚರಿಕೆ ನೀಡಿ ನಗರಸಭೆ ಕಮಿಷನರ್ ಕೋರ್ಟ್...

ಸ್ಕೂಟಿಗೆ KSRTC ಬಸ್ ಡಿಕ್ಕಿ- ಸ್ಥಳದಲ್ಲೇ ಅಕ್ಕ ತಮ್ಮ ದಾರುಣ ಸಾವು

3 weeks ago

ಚಿಕ್ಕಬಳ್ಳಾಪುರ: ಸ್ಕೂಟಿಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಅಕ್ಕ-ತಮ್ಮ ಇಬ್ಬರೂ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜೆ ವೆಂಕಟಾಪುರ ಗ್ರಾಮದ ಬಳಿ ನಡೆದಿದೆ. 35 ವರ್ಷದ ಭಾಗ್ಯಮ್ಮ ಹಾಗೂ 30 ವರ್ಷದ ಮುರುಳಿ ಮೃತ ದುರ್ದೈವಿಗಳು....

ಮದ್ವೆ ಮನೆಯಿಂದ ವಾಪಸ್ಸಾಗ್ತಿದ್ದ 70 ಜನರಿದ್ದ ಬಸ್ ಮರಕ್ಕೆ ಡಿಕ್ಕಿ

3 weeks ago

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲೂಕಿನ ಬೈಯಪ್ಪನಹಳ್ಳಿ ಗೇಟ್ ಬಳಿ ಮದುವೆ ಮನೆಯಿಂದ ಜನರನ್ನು ಕರೆದುಕೊಂಡು ಹೋಗುತ್ತಿದ್ದ ಖಾಸಗಿ ಬಸ್ ವೊಂದು ಮರಕ್ಕೆ ಡಿಕ್ಕಿ ಹೊಡೆದಿದೆ. ಬಸ್ ನಲ್ಲಿದ್ದವರು ಬಾಗೇಪಲ್ಲಿಯ ಮಿಟ್ಟೆಮರಿ ಗ್ರಾಮದ ನಿವಾಸಿಗಳಾಗಿದ್ದು, ಬೆಂಗಳೂರಿನ ಸರ್ಜಾಪುರದ ಕಲ್ಯಾಣ ಮಂಟಪವೊಂದರಲ್ಲಿ ಮದುವೆಯನ್ನ ಮುಗಿಸಿಕೊಂಡು ವಾಪಸ್ಸಾಗುತ್ತಿದ್ರು....